March 14, 2025

Bhavana Tv

Its Your Channel

ಕುಂಟವಾಣಿ ಪ್ರೌಢಶಾಲೆಯಲ್ಲಿ ಸಾರ್ವತ್ರಿಕ ಮತದಾನ ಮತ್ತು ಜಾಥಾ

ಭಟ್ಕಳ ತಾಲೂಕಿನ ಸರಕಾರಿ ಪ್ರೌಢಶಾಲೆ ಕುಂಟವಾಣಿಯಲ್ಲಿ ಶಾಲಾ ಸಂಸತ್ತಿನ ಪಧಾಧಿಕಾರಿಗಳ ಆಯ್ಕೆಗಾಗಿ ಸಾರ್ವತ್ರಿಕ ಮತದಾನ ನಡೆಯಿತು. ಊರಿನ ಶಿಕ್ಷಣಪ್ರೇಮಿಗಳು,ಜಾನಪದ ಅಕಾಡಮಿ ಪ್ರಶಸ್ತಿ ಪುರಷ್ಕೃತರು ಆದ ಸೋಮಯ್ಯ ಗೊಂಡ ಅವರು ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಚುಣಾವಣಾ ಮಾದರಿಯಲ್ಲೆ ಚುಣಾವಣೆ ಪ್ರಕ್ರಿಯೆ ನಡೆದದ್ದು ವಿಶೇಷ. ವಿದ್ಯುನ್ಮಾನ ಮತಯಂತ್ರದ ಮಾದರಿಯಲ್ಲಿ ಮೊಬೈಲ್ ಆಪ್ ಮೂಲಕ ಮಕ್ಕಳು ಮತದಾನ ಮಾಡಿದರು.ಮಕ್ಕಳೇ ಚುಣಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಚುಣಾವಣಾ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಪಡೆದರು. ತದನಂತರ ಚುಣಾವಣಾ ಜಾಗೃತಿಗಾಗಿ ವಿವಿಧ ಬಿತ್ತಿಪತ್ರಗಳ ಜೊತೆ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಪ್ರಭಾರ ಮುಖ್ಯಾಧ್ಯಾಪಕರಾದ ಡಾ|| ಸುರೇಶ ತಾಂಡೇಲ ರವರ ಮಾರ್ಗದರ್ಶನದಲ್ಲಿ ಚುಣಾವಣಾ ವಸ್ತುವಾರಿ ಶಿಕ್ಷಕಿ ಸವಿತಾ ನಾಯ್ಕ ರವರ ನೇತೃತ್ವದಲ್ಲಿ ಶಿಕ್ಷಕರಾದ ಆನಂದ ನಾಯ್ಕ ಮತ್ತು ಶಶಿಕಲಾ ನಾಯ್ಕ ರವರ ಸಹಕಾರದೊಂದಿಗೆ ಚುಣಾವಣೆ ನಡೆಯಿತು. ಕುಮಾರ ನಾಯ್ಕ ವಿಮಲಾ ಮೊಗೇರ ಇದ್ದರು

error: