March 13, 2025

Bhavana Tv

Its Your Channel

‘ಪ್ರತಿಭಾ ಪುರಸ್ಕಾರಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಸಂಚಾರ ಮುಕ್ತಗೊಳಿಸಿದ ಮಾಜಿ ಶಾಸಕ ಮಂಕಾಳ ವೈದ್ಯ ‘

ಭಟ್ಕಳ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಳ್ವೇಕೋಡಿಯಲ್ಲಿ ನಡೆಯುತ್ತಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಟ್ರಾಫಿಕ್ ನಿಂದ ವಿಳಂಬವಾದನ್ನು ಗಮನಿಸಿ ತಕ್ಷಣಕ್ಕೆ ಸಂಚಾರ ಮುಕ್ತಮಾಡಿದ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಸಮಯಕ್ಕೆ ಸರಿಯಾಗಿ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚಿಗೆ ವ್ಯಕ್ತವಾಗಿವೆ.

ಅಳ್ವೇಕೋಡಿಯಲ್ಲಿನ ಪ್ರತಿಭಾ ಪುರಸ್ಕಾರಕ್ಕೆ ತಾಲೂಕಿನ ವಿವಿಧ ಕಡೆಗಳಿಂದ ತಮ್ಮ ಪಾಲಕರ ಜೊತೆಗೆ ವಿದ್ಯಾರ್ಥಿಗಳು ಅಳ್ವೇಕೋಡಿ – ಶಿರಾಲಿಯಲ್ಲಿ ಬರುತ್ತಿದ್ದ ವೇಳೆ ಮಣ್ಣು ತುಂಬಿದ ಟಿಪ್ಪರ ಲಾರಿ ಹಾಗೂ ಮೀನು ತುಂಬಿದ ಲಾರಿ ಸಂಚಾರದಿAದ ೨೦-೨೫ ನಿಮಿಷ ಉಂಟಾದ ಟ್ರಾಫಿಕ್ ಜಾಮ್ ನಿಂದ ವಿದ್ಯಾರ್ಥಿಗಳು ವಿಳಂಬವಾಗುತ್ತಿರುವುದನ್ನು ಗಮನಿಸಿದ ಮಾಜಿ ಶಾಸಕ ಮಂಕಾಳ ವೈದ್ಯ ಟ್ರಾಫಿಕ್ ಸಮಸ್ಯೆ ಸರಿಪಡಿಸಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ತೆರಳಲು ಅನುವು ಮಾಡಿಕೊಟ್ಟು ಕುದ್ದು ಅವರೇ ರಸ್ತೆಯಲ್ಲಿ ನಿಂತು ವಾಹನ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

ಓರ್ವ ಸಾಮಾನ್ಯರಂತೆ ನಿಂತು ಈ ರೀತಿ ತಮ್ಮ ಜವಾಬ್ದಾರಿಯನ್ನು ಮೆರೆದ ಮಾಜಿ ಶಾಸಕ ಮಂಕಾಳ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೇ ಸದ್ಯ ಅವರ ಪೋಟೋ ಎಲ್ಲೆಡೆ ವೈರಲ್ ಆಗಿದೆ.

ಅಳ್ವೇಕೋಡಿಯಲ್ಲಿ ನಡೆಯುತ್ತಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಾಜಿ ಶಾಸಕರು ತಮ್ಮಷ್ಟಕ್ಕೇ ತಾವು ಹೋಗಬಹುದಾಗಿತ್ತು ಆದರೆ ಅವರಿಗೆ ವಿದ್ಯಾರ್ಥಿಗಳ ಮೇಲಿನ ಪ್ರೀತಿ, ಶಿಕ್ಷಣಕ್ಕೆ ನೋಡುವ ಮಹತ್ವ ಇವರ ಈ ಕಾರ್ಯಕ್ಕೆ ಮುನ್ನುಡೆ ತಂದಿದೆ.

error: