December 22, 2024

Bhavana Tv

Its Your Channel

ಶಾಸಕ ಡಾ ಕೆ ಅನ್ನದಾನಿರವರಿಗೆ ಸನ್ಮಾನ

ಮಳವಳ್ಳಿ : ಮೈಷುಗರ್ ಕಾರ್ಖಾನೆಯ ಖಾಸಗೀಕರಣ ವನ್ನು ವಿರೋಧಿಸಿ ಕಾರ್ಖಾನೆ ಯನ್ನು ಸರ್ಕಾರಿ ಸ್ವಾಮ್ಯದಲ್ಲೇ ನಡೆಸುವಂತೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಮಳವಳ್ಳಿ ಯಿಂದ ಮಂಡ್ಯ ಜಿಲ್ಲಾಧಿಕಾರಿ ಗಳ ಕಚೇರಿ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಹೋರಾಟಕ್ಕೆ ತೀವ್ರ ಸ್ವರೂಪ ನೀಡಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಶಾಸಕ ಡಾ ಕೆ ಅನ್ನದಾನಿ ಅವರನ್ನು ಸನ್ಮಾನಿಸಲು ಆಯೋಜಿಸಲಾಗಿದ್ದ ಸಮಾರಂಭ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ವಾಗ್ದಾಳಿಗೆ ವೇದಿಕೆ ಯಾದ ಪ್ರಸಂಗ ಪಟ್ಟಣದಲ್ಲಿ ಇಂದು ಜರುಗಿತು.

ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸೇರಿದಂತೆ ಹಲವು ಸಂಘಟನೆಗಳು ಯಶಸ್ವಿ ಪಾದ ಯಾತ್ರೆ ನಡೆಸಿದ ಶಾಸಕರನ್ನು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಿದವು. ಸಮಾರಂಭದಲ್ಲಿ ಮಾತನಾಡಿದ ಪುರಸಭೆಯ ಉಪಾಧ್ಯಕ್ಷ ಟಿ ನಂದಕುಮಾರ್ ಓಟು ಕೇಳುವಾಗಿ ಮಳವಳ್ಳಿ ಸೊಸೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಸಂಸದೆ ಸುಮಲತಾ ಅಂಬರೀಶ್ ಅವರು ಮೈಷುಗರ್ ಉಳಿವಿಗಾಗಿ ಜಿಲ್ಲೆಯ ರೈತರು ಸಾರ್ವಜನಿಕರು ಒಕ್ಕೊರಲಿ ನಿಂದ ನಡೆಸುತ್ತಿದ್ದ ಹೋರಾಟವನ್ನು ರೈತರ ಹೋರಾಟವಲ್ಲ ಸಂಘಟನೆಗಳ ಹೋರಾಟ ಎಂದು ಜರಿದಿರುವ ಇವರಿಗೆ ಈ ಜಿಲ್ಲೆಯ ಸೊಸೆ ಎಂದು ಹೇಳಿಕೊಳ್ಳಲು ನಾಚಿಕೆ ಯಾಗಬೇಕು ಎಂದು ಕಿಡಿ ಕಾರಿದರು.
ದಲಿತ ಸಂಘರ್ಷ ಸಮಿತಿಯ ಎಂ ಬಿ ಶ್ರೀನಿವಾಸ್, ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ ಪುಟ್ಟಮಾದು, ಮತ್ತಿತರರು ಮಾತನಾಡಿ ಒಟ್ಟು ೩೬ ದಿನಗಳ ಕಾಲ ಜಿಲ್ಲೆಯ ವಿವಿಧ ಸಂಘಟನೆಗಳು ರಾಜಕೀಯ ಪಕ್ಷಗಳು ಹಾಗೂ ಜಿಲ್ಲೆಯ ಜನತೆ ಮೈಷುಗರ್ ಉಳಿವಿಗಾಗಿ ನಡೆಸುತ್ತಿದ್ದ ಹೋರಾಟಕ್ಕೆ ಮಳವಳ್ಳಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಒಟ್ಟು ೩೬ ಕಿ ಮೀ ದೂರದ ಪಾದಯಾತ್ರೆಯನ್ನು ನಡೆಸುವ ಮೂಲಕ ಮೈಷುಗರ್ ಹೋರಾಟಕ್ಕೆ ತೀವ್ರತೆಯ ಸ್ವರೂಪವನ್ನು ಶಾಸಕ ಅನ್ನದಾನಿ ಅವರು ನೀಡಿ ಸರ್ಕಾರ ಹಾಗೂ ಮುಖ್ಯಮಂತ್ರಿ ಗಳ ಗಮನ ಸೆಳೆದ ಫಲವಾಗಿ ಮುಖ್ಯ ಮಂತ್ರಿ ಗಳು ಸರ್ಕಾರಿ ಸ್ವಾಮ್ಯದಲ್ಲೇ ಈ ಕಾರ್ಖಾನೆ ಆರಂಭಿಸುವ ಘೋಷಣೆ ಮಾಡಲು ಕಾರಣವಾಯಿತು ಎಂದು ಶಾಸಕರ ಹೋರಾಟ ಮನೋಭಾವವನ್ನು ಪ್ರಶಂಸಿಸಿ ದರು.
ಜೊತೆಗೆ ಇಡೀ ಜಿಲ್ಲೆ ಖಾಸಗೀಕರಣದ ವಿರುದ್ಧ ನಿಂತಿದ್ದರೆ ಸಂಸದರು ಮಾತ್ರ ಏಕಾಂಗಿಯಾಗಿ ಖಾಸಗೀಕರಣ ದ ಪರವಾಗಿ ನಿಂತಿದ್ದರ ಜೊತೆಗೆ ಆರಂಭದಲ್ಲಿ ಹೋರಾಟಗಾರರನ್ನು ತಮ್ಮ ಬೆಂಬಲಿಗರ ಮೂಲಕ ಬೆದರಿಸುವ ಯತ್ನ ನಡೆಸಿದ್ದರು ಎಂದು ಆರೋಪಿಸಿದರು.
ಇದೂ ಅಲ್ಲದೆ ಮುಖ್ಯಮಂತ್ರಿ ಗಳು ಸಭೆ ಕರೆದಿದ್ದ ಸಭೆ ವೇಳೆ ಮೈಷುಗರ್ ಖಾಸಗೀಕರಣದ ವಿರುದ್ದದ ಹೋರಾಟವನ್ನು ಕೆಲವು ಸಂಘಟನೆಗಳ ಹೋರಾಟ ಎಂದು ಕರೆದಿರುವುದು ಅವರಿಗೆ ಶೋಭೆ ತರುವುದಲ್ಲ ಎಂದು ತಮ್ಮ ತೀವ್ರ ಅಸಮಧಾನ ಹೊರಹಾಕಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಅನ್ನದಾನಿ ಅವರು ಮೈಷುಗರ್ ನಮ್ಮ ಜಿಲ್ಲೆಯ ಜನರ ಜೀವನಾಡಿಯಾಗಿದ್ದು ಇದರ ಉಳಿವಿಗಾಗಿ ಸದನದಲ್ಲೂ ದನಿ ಎತ್ತಿದ್ದರ ಜೊತೆಗೆ ಘೋಷಣೆ ಮಾಡಿದಂತೆ ೩೫ ಕಿ ಮೀ ಪಾದಯಾತ್ರೆ ನಡೆಸಿದ್ದಾಗಿ ತಿಳಿಸಿದ ಅವರು ಜಿಲ್ಲೆ ಹಾಗೂ ತಾಲ್ಲೂಕಿನ ಜನರ ರಕ್ಷಣೆಗೆ ಎಂತಹ ಹೋರಾಟಕ್ಕೂ ತಾನು ಸದಾ ಸಿದ್ದ ಎಂದು ಘೋಷಿಸಿದರು.
ಜಿಲ್ಲೆಯ ಜನರ ಹೋರಾಟವನ್ನು ಟೀಕಿಸಿರುವ ಸಂಸದರು ತಮ್ಮಿಂದ ಆಗುವುದಾದರೆ ಬೆಂಗಳೂರಿನಿAದ ಕನಕಪುರ, ಮಳವಳ್ಳಿ ಕೊಳ್ಳೇಗಾಲ ಮಾರ್ಗವಾಗಿ ಸತ್ಯಮಂಗಲ ತಲುಪುವ ರೈಲು ಮಾರ್ಗ ಯೋಜನೆಗೆ ಚಾಲನೆ ಕೊಡಿಸಲಿ ಇವರ ಬೆಂಬಲಕ್ಕೆ ನಾನು ಸಹ ನಿಲ್ಲುತ್ತೇನೆ ಆಗ ಇವರು ಜಿಲ್ಲೆಯ ಜನರು ಮತ ಹಾಕಿದ್ದಕ್ಕೆ ಸಾರ್ಥಕ ವಾಗುತ್ತದೆ ಎಂದು ಪರೋಕ್ಷ ಸವಾಲು ಹಾಕಿದರು.
ಮಾಜಿ ಪುರಸಭಾಧ್ಯಕ್ಷ ಎಂ ಹೆಚ್ ಕೆಂಪಯ್ಯ, ಕರ್ನಾಟಕದ ಸಂಘದ ಜಯಪ್ರಕಾಶ್ ಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ತಾ ಪಂ ಇಒ ರಾಮಲಿಂಗಯ್ಯ ಬಿಇಒ ಚಿಕ್ಕಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: