March 12, 2025

Bhavana Tv

Its Your Channel

ಭಟ್ಕಳ ತಾಲೂಕಿನ ಜಾಲಿ ಆಜಾದ್ ನಗರದ ಒಂಟಿ ಮನೆಯಲ್ಲಿ ಕಳ್ಳತನ

ಭಟ್ಕಳ ತಾಲೂಕಿನ ಜಾಲಿ ಆಜಾದ್ ನಗರ ೭ನೇ ಕ್ರಾಸನ ಅಬುಹನೀಫಾ ಸ್ಟ್ರೀಟನಲ್ಲಿನ ಒಂಟಿ ಮನೆಯಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಶುಕ್ರವಾರ ಬೆಳಕಿಗೆ ಬಂದಿದೆ.

ಕಳ್ಳತನದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳತನವಾದ ಮನೆಯಲ್ಲಿ ಉತ್ತರ ಪ್ರದೇಶ ಕೂಲಿ ಕಾರ್ಮಿಕರು ವಾಸವಾಗಿದ್ದು. ಇವರು ತಮ್ಮ ಕೆಲಸದ ನಿಮಿತ್ತ ಒಂದು ವಾರದ ಹಿಂದೇ ಕೆಲಸಕ್ಕಾಗಿ ಹೊನ್ನಾವರಕ್ಕೆ ತೆರಳಿದ್ದರು. ತಮ್ಮ ಕೆಲಸ ಮುಗಿಸಿ ಶುಕ್ರವಾರ ಬೆಳಿಗ್ಗೆ ತಾವು ವಾಸವಿದ್ದ ಬಾಡಿಗೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ.

ಕಳ್ಳತನದಲ್ಲಿ ಕೂಲಿ ಕೆಲಸಕ್ಕೆ ಬಳಸುವ ಸಾಮಾಗ್ರಿ,ಟಿವಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಳ್ಳತನದ ಬಗ್ಗೆ ಹೆಚ್ಚಿನ ಮಾಹಿತಿ ಪೊಲೀಸ ತನಿಖೆಯಿಂದ ತಿಳಿದು ಬರಬೇಕಾಗಿದೆ.
ಸ್ಥಳಕ್ಕೆ ಪಿ.ಎಸ್.ಐ ಭರತ್ ಕುಮಾರ ಹಾಗೂ ಪೊಲೀಸ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: