December 22, 2024

Bhavana Tv

Its Your Channel

ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ನಿಧನದ ಹಿನ್ನೆಲೆ ಮಳವಳ್ಳಿ ಪಟ್ಟಣದಲ್ಲಿ ಸಂಪೂರ್ಣ ಬಂದ್

ಮಳವಳ್ಳಿ : ನೆನ್ನೆ ಹೃದಯಾಘಾತದಿಂದ ಹಠಾತ್ ನಿಧನರಾದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ಗೌರವಾರ್ಥ ಮಳವಳ್ಳಿ ಪಟ್ಟಣದಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು.
ಡಾ ರಾಜ್ ಕುಮಾರ್ ಕಲಾ ಸಂಘ, ರಾ ಶಿ ರಾ ಪು ಸೇನಾ ಸಮಿತಿ, ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ಸೇರಿದಂತೆ ಇನ್ನಿತರ ಸಂಘಟನೆಗಳ ಕರೆಯ ಮೇರೆಗೆ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ವಾಣಿಜ್ಯ ಸಂಸ್ಥೆಗಳು, ಸಿನಿಮಾ ಮಂದಿರಗಳು ಸಂಪೂರ್ಣವಾಗಿ ಮುಚ್ಚಿದ್ದವು. ವಾಹನಗಳ ಸಂಚಾರ ಮಾತ್ರ ಮಾಮೂಲಾ ಗಿತ್ತು.
ಪಟ್ಟಣದ ಪೇಟೆ ವೃತ್ತದಲ್ಲಿ ಪುನಿತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್‌ಗೆ ಹೂವಿನ ಅಲಂಕಾರದೊAದಿಗೆ ಸಂಘಟನೆಗಳ ಮುಖಂಡರು ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ ಮೌನಾಚರಣೆ ಮೂಲಕ ಅಗಲಿದ ಅಪ್ಪುವಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭಾಧ್ಯಕ್ಷ ದೊಡ್ಡಯ್ಯ, ರಾಶಿರಾಪು ಸೇನಾ ಸಮಿತಿಯ ಕೃಷ್ಣ ಮತ್ತಿತರರು ಕೋವಿಡ್‌ನಿಂದಾಗಿ ಕಳೆದ ಒಂದುವರೆ ವರ್ಷದಿಂದ ಸ್ಥಬ್ದ ಗೊಂಡಿದ್ದ ಕನ್ನಡ ಚಿತ್ರರಂಗ ಈಗಷ್ಟೇ ಚೇತರಿಕೆ ಕಾಣುತ್ತಿರುವಾಗಲೇ ಡಾ. ರಾಜ್ ಕುಮಾರ್ ಕುಟುಂಬದ ಅಪ್ರತಿಮ ಪ್ರತಿಭೆ ಪುನಿತ್ ರಾಜ್ ಕುಮಾರ್ ಅವರ ನಿಧನ ಚಿತ್ರರಂಗಕ್ಕೆ ಭರ ಸಿಡಿಲು ಬಡಿದಂತಾಗಿದೆ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದರು.


ಹತ್ತಾರು ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ನೂರಾರು ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತ ಎಲೆಮರೆ ಕಾಯಿಯಂತೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ನಾಡಿಗೆ ಬೆಳಕಾಗಿದ್ದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಭಾರತೀಯ ಚಿತ್ರರಂಗಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.
ಈಸಂದರ್ಭದಲ್ಲಿಪುರಸಭಾ ಸದಸ್ಯರಾದ ಸಿದ್ದರಾಜು, ಶಿವು, ಮುಖಂಡರಾದ ಅಂಕನಾಥ್, ಶಿವರಾಜ್ ನಾಯಕ್, ಶಿವಕುಮಾರ್, ಮತ್ತಿತರರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: