
ಭಟ್ಕಳ ನಗರದ ಆಸರಕೇರಿಯ ಪುನೀತ್ ರಾಜಕುಮಾರ ಇವರ ಅಭಿಮಾನಿ ಬಳಗದಿಂದ ಸೋಮವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿ ಪುನೀತ್ ರವರ ಭಾವಚಿತ್ರಕ್ಕೆ ಹೂ ಹಾಕಿ ಶೃದ್ದಾಂಜಲಿ ಅರ್ಪಿಸಲಾಯಿತು.
ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ಆಸರಕೇರಿ ಕ್ರಾಸ್ ವರೆಗೆ ಪುನೀತ್ ರಾಜಕುಮಾರ ಅಭಿಮಾನಿ ಬಳಗದ ಸದಸ್ಯರು ಕ್ಯಾಂಡಲ್ ಉರಿಸಿ ಮೆರವಣಿಗೆ ನಡೆಸಿ ಪುನೀತ್ ರವರ ಭಾವಚಿತ್ರಕ್ಕೆ ಹೂ ಹಾಕಿ ಶೃದ್ದಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ದೇಶಕ ಶ್ರೀದರ ನಾಯ್ಕ ಪಂಜಿನ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಪುನೀತ್ ರಾಜ್‌ಕುಮಾರ ಅದ್ಬುತ ನಟರಾಗಿದ್ದರಲ್ಲದೇ ತಮ್ಮ ಸಮಾಜ ಸೇವೆಯಲ್ಲಿಯೂ ಅಗ್ರ ಗಣ್ಯರಾಗಿದ್ದರು. ಅವರು ನಿರ್ಗತಿಕರಿಗೆ ,ಬಡವರಿಗೆ ,ವಿದ್ಯಾರ್ಥಿಗಳಿಗೆ ಆಶಾಕಿರಣರಾಗಿದ್ದರು. ಅವರು ತಾನು ಮಾಡಿದ ಸಮಾಜದ ಸೇವೆಯನ್ನು ಎಲ್ಲೂ ಪ್ರಚಾರಪಡಿಸಲಿಲ್ಲ ಇಂತಹ ವ್ಯಕ್ತಿತ್ವ ಹೊಂದಿರುವವರು ಈಡೀ ಪ್ರಪಂಚದಲ್ಲಿಯೇ ವಿರಳ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ
ಪುನೀತ ರವರ ಆದರ್ಶ ಗುಣಗಳು ಇಂದಿನ ಯುವಕರಿಗೆ ಮಾದರಿಯಾಗಲಿ ಎಂದರು.ಕಾರ್ಯಕ್ರಮದಲ್ಲಿದ್ದ ಗುರುಕೃಪಾ ಬ್ಯಾಂಕಿನ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ ಅವರ ಜನಪ್ರಿಯತೆಗೆ ಅವರ ಅಂತಿಮ ದರ್ಶನಕ್ಕೆ ಸೇರಿದ್ದ ಜನಸಾಗರವೆ ಸಾಕ್ಷಿಯಾಗಿತ್ತು ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ ಯೂನಿಯನ್ ನ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ, ಪುನೀತ್ ಅಭಿಮಾನಿ ಬಳಗದ ಪ್ರಮುಖರಾದ ಶ್ರೀಧರ ಪೈಕಿಮನೆ, ನವೀನ್ ನಾಯ್ಕ, ಕೃಷ್ಣ ನಾಯ್ಕ, ಮಾರುತಿ ನಾಯ್ಕ, ಚಂದ್ರು ನಾಯ್ಕ, ಗಣೇಶ ನಾಯ್ಕ,ರಾಘವೇಂದ್ರ ನಾಯ್ಕ, ವೆಂಕಟೇಶ ನಾಯ್ಕ, ಸಚಿನ್ ನಾಯ್ಕ, ಮಾದೇವ ನಾಯ್ಕ, ಸಂದೀಪ ನಾಯ್ಕ, ಶಶಾಂಕ ನಾಯ್ಕ ಸೇರಿದಂತೆ ನೂರಾರು ಆಭಿಮಾನಿಗಳು ಉಪಸ್ಥಿತರಿದ್ದರು. ಪಾಂಡುರAಗ ನಾಯ್ಕ ಕಾರ್ಯಕ್ರಮದ ನಿರೂಪಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ