March 14, 2025

Bhavana Tv

Its Your Channel

ಬೀನಾ ವೈದ್ಯ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅರವತ್ತಾರನೇ ಕನ್ನಡ ರಾಜ್ಯೋತ್ಸವ

ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅರವತ್ತಾರನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ವಿಠ್ಠಲ ನಾಯ್ಕ ರವರು ಮಾತನಾಡಿ ಕನ್ನಡ ಭಾಷೆಯ ಶ್ರೀಮಂತಿಕೆಯ ಕುರಿತು ಹಾಗೂ ನಾಡ – ನುಡಿಯ ಕುರಿತಾಗಿ ನಮ್ಮ ಕರ್ತವ್ಯಗಳ ಕುರಿತಾಗಿ ಮಾತನಾಡಿದರು. ಕನ್ನಡ ವಿಭಾಗದ ಪ್ರಮುಖರಾದ ಶ್ರೀಮತಿ ಹೇಮಾವತಿ ಕನ್ನಡ ರಾಜ್ಯೋತ್ಸವದ ಆಚರಣೆಯ ವಿಶೇಷತೆ ಮತ್ತು ಈ ಸಂಭ್ರಮದ ಹಿನ್ನೆಲೆ ಕುರಿತಾಗಿ ಸವಿಸ್ತಾರವಾಗಿ ವಿವರಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀಮತಿ ಪುಷ್ಪಲತಾ ವೈದ್ಯರವರು ಉಪಸ್ಥಿತಿರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜ್ ವಿಭಾಗದ ಪ್ರಾಂಶುಪಾಲರಾದ ಶ್ರೀ ನಾಗೇಶ್ ಗುಪ್ತಾ, ಸಂಸ್ಥೆಯ ಸಂಯೋಜಕರಾದ ಶ್ರೀ ಕೃಷ್ಣಮೂರ್ತಿ ಶೆಟ್ಟಿ, ಪೋಷಕರು ಪ್ರತಿನಿಧಿಗಳು ಹಾಗೂ ಬೋಧಕ – ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬಂದಿತು. ತದನಂತರದಲ್ಲಿ ಸಂಸ್ಥೆಯ ಐಸಿಎಸ್ಸಿ ಮತ್ತ ಸ್ಟೇಟ್ ಬೋರ್ಡ್ ನ ಒಂದರಿAದ-ಐದನೇ ತರಗತಿಯ ಮಕ್ಕಳಿಗೆ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕೊರೋನಾದಂತಹ ಕಾಲಘಟ್ಟದಲ್ಲಿ ಮಕ್ಕಳು ಈ ಎಲ್ಲಾ ಚಟುವಟಿಕೆಗಳಿಂದ ದೂರವಿರುವ ಈ ಸಂಧರ್ಭದಲ್ಲಿ ಇಂದು ಮಕ್ಕಳಿಗೆ ಈ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಯಿತು. ಮಕ್ಕಳು ತಮ್ಮ ತಮ್ಮ ಪಾಲಕರೊಂದಿಗೆ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಅತಿಯಾದ ಖುಷಿಯಲ್ಲಿ ತಮ್ಮನ್ನು ತಾವು ಮರೆತಿದ್ದು ಅವಿಸ್ಮರಣೀಯ. ಬಣ್ಣ – ಬಣ್ಣದ ಗಾಳಿಪಟವು ಆಕಾಶದೇತ್ತರಕ್ಕೆ ಹಾರಿದಂತೆ ಮಕ್ಕಳ ಉತ್ಸಾಹ ಹೆಚ್ಚಾಗುತ್ತಿತ್ತು. ಮಕ್ಕಳು ತಮ್ಮ ಸುಂದರ ಹಸ್ತದಿಂದ ಮಾಡಿದ ಗಾಳಿಪಟವು ನಿಧಾನವಾಗಿ ಮೇಲಕ್ಕೆರುತ್ತ ಒಂದಕ್ಕೊAದರAತೆ ಸ್ಪರ್ಧೆ ಎನ್ನುವ ಹಾಗೆ ಒಂದೊAದು ಪಟವು ಮತ್ತೊಂದನ್ನು ಮೀರಿಸುವ ಹಾಗೆ ಆಕಾಶವನ್ನು ಇನ್ನೆನು ಚುಂಬಿಸುವ ಭಾವ ವ್ಯಕ್ತವಾಗಿತ್ತು. ಮನುಷ್ಯ ತಾನು ಎಷ್ಟೇ ಮೇಲಕ್ಕೆ ಏರಿದರೂ ಮತ್ತೊಮ್ಮೆ ಕೆಳಗಿಲಿಯಲೇಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಸಾರುತ್ತಿತು. ಗಾಳಿಪಟವು ಮೇಲಕ್ಕೆ ಹೋದಂತೆ ಮಕ್ಕಳ ಸಂತೋಷಕ್ಕೆ ಪಾರವೆ ಇರಲಿಲ್ಲವಾಗಿತ್ತು. ಮುದ್ದು ಮಕ್ಕಳ ಈ ಸಂತೋಷವು ಉಳಿದವರನ್ನು ನಾಚಿಸುವಂತಿತ್ತು. ಸಮಯ ಹೋದಂತೆ ಒಂದೊAದು ಗಾಳಿಪಟವು ತನಗೆ ತಾನು ಆಯಾಸವಾದಂತೆ ಕೆಳಗಿಳಿಯುತ್ತಾ, ಕೆಲವೊಂದು ಪಟವು ಹಾರುವ ಪಕ್ಷಿಯಂತೆ ಇನ್ನೂ ಹೆಚ್ಚೆಚ್ಚು ಹಾರುವ ಇಂಗಿತ ವ್ಯಕ್ತಪಡಿಸುವಂತಿತ್ತು. ಗಾಳಿಪಟದ ಈ ಸ್ಪರ್ಧೆ ಒಂದಿಷ್ಟು ರೋಚಕತೆ ಒಂದಿಷ್ಟು ಉತ್ಸುಕತೆ ಕೆಲವೊಮ್ಮೆ ಹರ್ಷೋದ್ದಾರ, ಸಿಳ್ಳೆ – ಚಪ್ಪಾಳೆ ಸದ್ದುಗಳು ಮುಗಿಲು ಮುಟ್ಟುವಂತಿತ್ತು.

error: