March 12, 2025

Bhavana Tv

Its Your Channel

ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿದ ಹೊರ ರೋಗಿಗಳು

ಭಟ್ಕಳ: ಕಳೆದ ಎರಡು ವಾರದ ಹಿಂದೆ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರು ಆಕಸ್ಮಿಕ ಹೃದಯಾಘಾತದಿಂದ ಮೃತಪಟ್ಟ ಬಳಿಕ ಭಟ್ಕಳ ತಾಲೂಕಿನಲ್ಲಿ ಯುವ ಜನತೆ ತಮ್ಮ ಆರೋಗ್ಯದ ಕಾಳಜಿಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿಕೊಂಡಿದ್ದು ನಿತ್ಯವೂ ಆಸ್ಪತ್ರೆಯತ್ತ ಮುಖ ಮಾಡಿದ್ದು ದಿನಕ್ಕೆ ಕನಿಷ್ಠ ಮೂವರು, ಹೊರರೋಗಿಯಲ್ಲಿ ಶೇ. ೪೦% ರಷ್ಟು ಯುವ ಜನತೆ ತಪಾಸಣೆ ಮಾಡಿಸಿಕೊಂಡು ಹೋಗುತ್ತಿರುವ ಚಿತ್ರಣ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಂಡು ಬರುತ್ತಲಿದೆ.

ನಟ ಪುನೀತ್ ಸಾವು ರಾಜ್ಯದ ಎಲ್ಲರಲ್ಲಿಯೂ ತಮ್ಮ ತಮ್ಮ ಆರೋಗ್ಯದ ಮೇಲಿನ ಗಮನ ಹರಿಸುವತ್ತ ವಾಲಿದೆ. ಇನ್ನು ನಗರ, ಗ್ರಾಮೀಣ ಭಾಗದ ಭೇದವಿಲ್ಲದೇ ಎಲ್ಲರಲ್ಲಿಯೂ ಸಹ ದುಃಖ ತರಿಸಿದೆ ಎಚಿದರೆ ತಪ್ಪಿಲ್ಲ. ಇದೇ ರೀತಿಯ ವಾತಾವರಣ ಈಗ ಭಟ್ಕಳದಲ್ಲಿಯೂ ಸಹ ಕಂಡು ಬರುತ್ತಲಿದ್ದು, ದಿನದ ಹೊರ ರೋಗಿಗಳಲ್ಲಿನ ಶೇ. ೪೦ % ರಷ್ಟು ಮಂದಿ ಎದೆನೋವು, ಉಸಿರಾಟದ ಸಮಸ್ಯೆಯಿದೆ ಎಂದು ಭಯದಲ್ಲಿಯೇ ಸರಕಾರಿ ಆಸ್ಪತ್ರೆಗೆ ಕಡೆಗೆ ತಪಾಸಣೆಗೆ ಬಹು ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಆಶ್ವರ್ಯಕರ ಸಂಗತಿಯೆoದರೆ ಅದರಲ್ಲಿ ಬಹುತೇಕರು ಯುವ ಜನತೆಯೇ ಆಗಿದ್ದು, ಎಲ್ಲರಲ್ಲಿಯೂ ಸಹ ಹೃದಯಾಘಾತದ ಬಗೆಗಿನ ಭಯದ ಜೊತೆಗೆ ಇಷ್ಟು ದಿನವಿಲ್ಲದ ಆರೋಗ್ಯದ ಕಾಳಜಿ ಅವರಲ್ಲಿ ಈಗ ಒಂದೇ ಸಮನೆ ಕೇಂದ್ರಿಕೃತವಾಗಿದೆ. ಪುನೀತ್ ಸಾವು ಇದೊಂದು ಆತಂಕಕಾರಿಯ ರೀತಿಯ ಬೆಳವಣಿಗೆಯಾಗಿದ್ದರು ಸಹ ಜನರು ಬೆಚ್ಚಿ ಬೀಳುವ ಅವಶ್ಯಕತೆಯಿಲ್ಲ ಎನ್ನುತ್ತಾರೆ ಸರಕಾರಿ ಆಸ್ಪತ್ರೆಯ ವೈದ್ಯರು.


ಭಟ್ಕಳದಂತಹ ನಗರದಲ್ಲಿಯೂ ಸಹ ಜನರಿಗೆ ಮೊದಲಿಗಿಂತ ಒಂದು ಪಟ್ಟು ಜಾಸ್ತಿಯೇ ಹೃದಯಾಘಾತದ ಸಮಸ್ಯೆಯ ಬಗ್ಗೆ ಜಾಗ್ರತಿ ಕಾಳಜಿ ಹೆಚ್ಚಿಸಿರುವುದು ಆಸ್ಪತ್ರೆಯತ್ತ ಧಾವಿಸುತ್ತಿರುವ ಹೊರ ರೋಗಿಗಳಿಂದಲೇ ತಿಳಿದು ಬರುತ್ತಿದೆ. ಈ ಮೊದಲು ಹ್ರದಯಾಘಾತದ ಸಮಸ್ಯೆಯಿಂದ ರೋಗಿಗಳಿಗೆ ಇ. ಸಿ. ಜಿ., ಸ್ಕಾನಿಂಗ್, ಸಹಿತ ಇನ್ನಿತರ ಹೃದಯ ಸಂಬAಧಿಸಿದ ತಪಾಸಣೆ ಮಾಡಿಸಲು ವೈದ್ಯರು ಸೂಚಿಸಿದ್ದಲ್ಲಿ ಅವೆಲ್ಲವೂ ಸುಮ್ಮನೆ ಎಂದು ಅಚಿದು ವೈದ್ಯರ ಸೂಚನೆ ನಿರಾಕರಿಸುತ್ತಿದ್ದ ಅವರು ಈಗ ವೈದ್ಯೋ ನಾರಾಯಣೋ ಹರಿ ಎಂಬoತೆ ಎಲ್ಲಾ ರೀತಿಯ ತಪಾಸಣೆ ಮಾಡಿಸಿ ಎಂದು ಅವರೇ ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿರುವದು ಒಳ್ಳೆಯ ಬೆಳವಣಿಗೆ ಎಂಬoತಾಗಿದೆ.

ಕಳೆದ ಎರಡು ವಾರದಿಂದ ಇಲ್ಲಿಯ ತನಕ ನಿತ್ಯವೂ ಈ ಹಿಂದಿನ ಅವಧಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಜನರು ಭಟ್ಕಳ ಸರಕಾರಿ ಆಸ್ಪತ್ರೆಗೆ ಧಾವಿಸುತ್ತಿದ್ದು, ನಿತ್ಯವೂ ನೂರಕ್ಕೂ ಹೆಚ್ಚು ಜನರು ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ರೋಗಿಗಳಿಗೆ ಪೂರಕವಾಗಿ ಸ್ಪಂದನೆ ನೀಡುತ್ತಿರುವ ಸರಕಾರಿ ಆಸ್ಪತ್ರೆಯು ಬರುವಂತಹದವರಿಗೆ ಆತ್ಮಸೆüöÊರ್ಯ ಹಾಗೂ ಹೃದಯಾಘಾತದ ಬಗೆಗಿನ ಮುಂಜಾಗ್ರತಾ ಕುರಿತು ವಿವರಿಸುತ್ತಿದ್ದಾರೆ. ಅನುವಂಶಿಕವಾಗಿರುವ ಕಾಯಿಲೆ ಹೊರತಾಗಿಯೂ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತವಾಗಲಿದೆ ಎಂಬುದು ಪುನೀತ್ ಅವರ ಸಾವಿನಿಂದ ದೃಢಪಟ್ಟಿದಂತಾಗಿದೆ ಆದರೆ ಇದಕ್ಕೆ ಹೆದರುವ ಅವಶ್ಯಕತೆಯಿಲ್ಲ.

ಇನ್ನು ತಾಲೂಕಿನ ಸರಕಾರಿ ಆಸ್ಪತ್ರೆಗೆ ೨೦-೪೦ ವರ್ಷದೊಳಗಿನ ಯುವ ವಯಸ್ಕರೇ ಆಸ್ಪತ್ರೆಗೆ ಭಯದಲ್ಲಿಯೇ ಬರುವದರೊಂದಿಗೆ ಇನ್ನೇನು ತಮಗೆ ಹೃದಯಾಘಾತವೇ ಆಯಿತು ಎನ್ನುವಷ್ಟರ ಮಟ್ಟಿಗೆ ಏನು ಇಲ್ಲದ ಆರೋಗ್ಯ ಸ್ಥಿತಿಯನ್ನು ಹಾಳು ಮಾಡಿಕೊಳ್ಳುವವರೇ ಜಾಸ್ತಿಯಾಗಿದ್ದಾರೆ.
ಒಂದೇ ಸಮನೆ ಯಾವುದೇ ಹೃದಯಾಘಾತ ಸಂಬoಧಿ ಕಾಯಿಲೆ ಅಥವಾ ನೋವು ಕಾಣಿಸಿಕೊಳ್ಳುವುದಿಲ್ಲ ಬದಲಿಗೆ ಓರ್ವ ವ್ಯಕ್ತಿಯ ನಿತ್ಯ ದಿನಚರಿ, ಊಟ, ತಿಂಡಿ, ವ್ಯಾಯಾಮ, ನಿದ್ದೆ, ಒತ್ತಡ ಎಲ್ಲದರ ಮೇಲೆ ಆರೋಗ್ಯ ಹಾಳಾಗಲಿದೆ. ಈ ಬಗ್ಗೆ ಜನರು ಆತಂಕಪಡುವುದಕ್ಕಿAತ ಕಾಳಜಿ ಮಾಡುವುದು ಸೂಕ್ತ ಎನ್ನುತ್ತಾರೆ ಸರಕಾರಿ ಆಸ್ಪತ್ರೆಯ ವೈದ್ಯ ವ್ರಂದ.

ಡಯೆಟ್, ವ್ಯಾಯಾಮ, ನೆಮ್ಮದಿಯಿಂದಿರುವ ವ್ಯಕ್ತಿಗೆ ಯಾವುದೇ ಕಾಯಿಲೆ ಬರುವುದಿಲ್ಲ. ಜಂಗ್ ಪುಡ್ಸ, ಓಯಲಿ ಪುಡ್ಸಗಳ ಹೆಚ್ಚಿನ ಸೇವನೆಯಿಂದ, ಧೂಮಪಾನವೂ ಸಹ ವ್ಯಕ್ತಿಯ ಆರೋಗ್ಯಕ್ಕೆ ಮಾರಕವಾಗಲಿದೆ. ಓರ್ವ ವ್ಯಕ್ತಿಗೆ ಅವಶ್ಯವಿರುವ ನಿದ್ದೆ ಸಮರ್ಪಕವಾಗಿ ಮಾಡಲೇಬೇಕಿದೆ. ಮೊಬೈಲ್, ಟಿವಿ ಹಾಗೂ ವ್ಯಕ್ತಿ ಜಡವಾಗಿರದೇ ನಿತ್ಯವೂ ಕೆಲಸದಲ್ಲಿ ನಿರತರಾಗಿದ್ದರೆ ಆರೋಗ್ಯವೂ ಸರಿಯಾಗಿರಲಿದೆ ಎಂಬುದು ವೈದ್ಯರ ಸಲಹೆ.
ನೂರರಲ್ಲಿ ೫ ಮಂದಿ ಮಾತ್ರ ಹೃದಯಾಘಾತಕ್ಕೊಳಗಾಗಿ ಮೃತಪಡಲಿದ್ದಾರೆ ಎಂಬುದು ತಿಳಿದಿದ್ದರು ಸಹ ಇಂದಿನ ಯುವ ಜನತೆಯು ಅವರ ಆರೋಗ್ಯದಲ್ಲಿನ ಚಿಕ್ಕ ಪುಟ್ಟ ಏರಿಳಿತದಿಂದಾಗಿ ತಕ್ಷಣಕ್ಕೆ ಹೃದಯ ಸಂಬAಧಿ ಕಾಯಿಲೆಗಳ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಇತ್ತೀಚಿನ ದಿನದಲ್ಲಿ ಏರಿಕೆಯಾಗಿದೆ.

ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಆದರೆ ಓರ್ವ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಎದೆ ನೋವು, ಬೆನ್ನು ನೋವು, ಉಸಿರಾಟದ ಸಮಸ್ಯೆಗಳೇನೇ ಇದ್ದರು ಅವೆಲ್ಲವೂ ಹೃದಯಘಾತಕ್ಕೆ ಮೂಲವಾಗಿರುವುದಿಲ್ಲ ಎಂಬುದು ಅಷ್ಟೇ ಸತ್ಯ. ಈ ಮೊದಲು ಚಿಕ್ಕ ವಯಸ್ಸಿನಲ್ಲಿ ಯುವ ಜನತೆ ಹೃದಯಾಘಾತಕ್ಕೆ ಮ್ರತಪಟ್ಟಿರುವ ಘಟನೆ ಸಹ ನಡೆದಿರುವ ಉದಾಹರಣೆಗಳಿದ್ದು, ಈಗಲೂ ಸಹ ಬೆರಳೆಣಿಕೆಯಷ್ಟು ಪ್ರಕರಣ ನಿತ್ಯವೂ ಆಗುತ್ತಲಿದೆ ಆದರೆ ಓರ್ವ ಸಿನಿಮಾ ನಟನ ಆಕಸ್ಮಿಕ ಸಾವು ಅವೆಲ್ಲ ಘಟನೆಗಳಿಗಿಂತ ಹೆಚ್ಚು ಜನರಲ್ಲಿ ಜಾಗ್ರತಿ ಮೂಡಿಸಿದೆ ಎಂದರೆ ತಪ್ಪಿಲ್ಲ.

error: