ಮಳವಳ್ಳಿ : ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಹಾಲಿ ಅಧ್ಯಕ್ಷ ರವಿ ಚಾಮಲಾಪುರ ಅವರು ಕರ್ನಾಟಕ ಸಂಘದ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ. ಜಯಪ್ರಕಾಶ್ ಗೌಡ ಅವರ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಪದ ಬಳಕೆ ಮೂಲಕ ನಿಂದಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕನ್ನಡ ಪರ ಸಂಘಟನೆಗಳ ಮುಖಂಡರು ಈ ಕುರಿತು ರವಿ ಚಾಮಲಾಪುರ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಹಲವಾರು ಸಾಹಿತಿ ದಿಗ್ವಿಜರು ಅಧ್ಯಕ್ಷ ಸ್ಥಾನ ಅಲಂಕರಿಸಿ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಅಂತಹ ಸ್ಥಾನವನ್ನು ಅಲಂಕರಿಸಿದ್ದ ರವಿ ಚಾಮಲಾಪುರ ಅವರು ಪ್ರೊ ಜಯಪ್ರಕಾಶ್ ಗೌಡ ರಂತಹ ಹಿರಿಯ ಸಾಹಿತಿ ಹಾಗೂ ಶಿಕ್ಷಣ ತಜ್ಞರ ಬಗ್ಗೆ ಇಂತಹ ಕೀಳು ಮಟ್ಟದ ಅಶ್ಲೀಲ ಪದ ಬಳಸಿ ನಿಂಧಿಸಿರುವುದು ಇಡೀ ಜಿಲ್ಲೆಗೆ ಕಳಂಕವಾಗಿದ್ದು ಕೂಡಲೇ ಇವರನ್ನು ಅಭ್ಯರ್ಥಿ ಸ್ಥಾನದಿಂದ ವಜಾಗೊಳಿಸುವಂತೆ ಚುನಾವ ಣಾಧಿಕಾರಿಗಳಿಗೆ ದೂರು ಸಲ್ಲಿಸುವುದರ ಜೊತೆಗೆ ಇವರ ವಿರುದ್ಧ ಪೊಲೀಸ್ ಠಾಣೆಗೂ ದೂರು ಸಲ್ಲಿಸುವುದಾಗಿ ಕನ್ನಡ ಸೇನೆಯ ಜಿಲ್ಲಾದ್ಯಕ್ಷ ಮಂಜುನಾಥ್, ಪ್ರಾಂತ ರೈತ ಸಂಘದ ಭರತ್ ರಾಜ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಪ್ರೊ. ಜಯಪ್ರಕಾಶ್ ಗೌಡ ಅವರು ಮಂಡ್ಯ ಜಿಲ್ಲೆಯ ಹಿರಿಯ ಸಾಂಸ್ಕೃತಿಕ ರಾಯ ಭಾರಿಯಾಗಿದ್ದು ಇವರ ವಿರುದ್ಧ ಅಶ್ಲೀಲ ಪದ ಬಳಕೆ ಮೂಲಕ ನಿಂದಿಸಿರುವ ಇವರನ್ನು ಜಿಲ್ಲೆಯ ಎಲ್ಲಾ ಸಾಹಿತ್ಯ ಬಂಧುಗಳು ತಿರಸ್ಕರಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಕೃಷ್ಣ ಸ್ವರ್ಣ ಸಂದ್ರ ಅವರನ್ನು ಬೆಂಬಲಿಸುವAತೆ ಮನವಿ ಮಾಡಿದರು.
ಮಾಜಿ ಪುರಸಭಾಧ್ಯಕ್ಷ ಎಂ ಹೆಚ್ ಕೆಂಪಯ್ಯ ಮಾತನಾಡಿದ ಜಿಲ್ಲೆಯ ಸಾಹಿತ್ಯ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯ ಬೇಕಾದ ರವಿ ಚಾಮಲಾಪುರ ಅವರು ಒಬ್ಬ ಹಿರಿಯ ಸಾಹಿತಿ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದು ಜಿಲ್ಲೆಯ ಸಂಸ್ಕೃತಿಗೆ ಕಳಂಕವಾಗಿದ್ದು ಈ ಭಾರಿಯ ಪರಿಷತ್ ನ ಜಿಲ್ಲಾಧ್ಯಕ್ಷ ಚುನಾವಣೆಯಲ್ಲಿ ರವಿ ಚಾಮಲಾಪುರ ಅವರನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ತಕ್ಕ ಪಾಠ ಕಲಿಸುವುದರ ಜೊತೆಗೆ ಒಮ್ಮತದ ಅಭ್ಯರ್ಥಿ ಕೃಷ್ಣ ಸ್ವರ್ಣಸಂದ್ರ ಅವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ತಮಗೂ ಕೂಡ ರವಿ ಚಾಮಲಾಪುರ ಅವರು ದೂರವಾಣಿ ಮೂಲಕ ಧಮಕಿ ಹಾಕಿದ್ದನ್ನು ಉಲ್ಲೇಖಿಸಿದ ಹಿರಿಯ ಸಾಹಿತಿ ಮ ಸಿ ನಾರಾಯಣ ಅವರು ಸಾಹಿತ್ಯ ಪರಿಷತ್ತಿನ ಘನತೆ ಗೌರವಕ್ಕೆ ಕಳಂಕ ತರುವ ಇಂತಹವರನ್ನು ತಿರಸ್ಕರಿಸುವ ಮೂಲಕ ಕೃಷ್ಣ ಸ್ವರ್ಣ ಸಂದ್ರ ಅವರನ್ನು ಬೆಂಬಲಿಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಯಮ್ಮ, ಯೋಗ ಗುರುಗಳಾದ ಮಲ್ಲಿಕಾರ್ಜುನಸ್ವಾಮಿ. ಮತ್ತಿತರರು ಹಾಜರಿದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ