ಮಳವಳ್ಳಿ : ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ತಂದೆ ತಾಯಿ ಸೇರಿದಂತೆ ಇತರೆ ಸಂಬAಧಗಳ ಬಗ್ಗೆ ಸಂಸ್ಕಾರ ಕಲಿಸುವುದು ಅತ್ಯಗತ್ಯವಾಗಿದ್ದು ಇಂತಹ ಸಂಸ್ಕಾರ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಹೇಳಿದ್ದಾರೆ.
ತಾಲ್ಲೂಕಿನ ತಳಗವಾದಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರು ಗ್ರಾಮದ ಮುಖಂಡರ ನೆರವಿನಿಂದ ನೂತನವಾಗಿ ಆರಂಭಿಸಿರುವ ಎಲ್ ಕೆ ಜಿ, ಯುಕೆಜಿ ಆಂಗ್ಲ ಮಾಧ್ಯಮ ತರಗತಿಯನ್ನು ಒಳಗೊಂಡ ಮಕ್ಕಳ ಮನೆ ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಸಂಸ್ಕಾರವಿಲ್ಲದ ಕೇವಲ ವ್ಯಾಪಾರೀಕರಣದ ಮೂಲಕ ಉನ್ನತ ಶಿಕ್ಷಣ ಪಡೆದ ಮಕ್ಕಳು ಕೇವಲ ಪುಸ್ತಕದ ವಿದ್ಯಾರ್ಥಿಗಳಾಗಿ ಬೆಳೆದ ಪರಿಣಾಮವಾಗಿ ಅಂತಹ ಮಕ್ಕಳ ಪೋಷಕರು ವೃದ್ಯಾಪ್ಯ ಜೀವನವನ್ನು ವೃದ್ದಾಶ್ರಮಗಳಲ್ಲಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ತಳಗವಾದಿ ಗ್ರಾಮಕ್ಕೆ ಎಲ್ ಕೆ ಜಿ ಯುಕೆಜಿ ತರಗತಿಗಳ ಆರಂಭಕ್ಕೆ ಇಲಾಖೆ ಅನುಮತಿ ನೀಡಿದ್ದು ಯಾವುದೇ ಅನುದಾನ ಬಿಡುಗಡೆಯಾಗಿಲ್ಲದಿದ್ದರೂ ಇಲ್ಲಿನ ಎಸ್ ಡಿ ಎಂ ಸಿ ಅಧ್ಯಕ್ಷ ಟಿ ಎಂ ಪ್ರಕಾಶ್ ಹಾಗೂ ಸದಸ್ಯರು ಹಳೇ ಶಾಲಾ ಕಟ್ಟಡ ಆವರಣ ಮತ್ತು ತೀರ ಮುಚ್ಚಿ ಹೋಗಿದ್ದ ಶೌಚಾಲಯಗಳನ್ನು ತಾವೇ ಸ್ವಚ್ಛಗೊಳಿಸಿ ಮಕ್ಕಳಿಗೆ ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಒದಗಿಸಿರುವುದೇ ಅಲ್ಲದೇ ೪೦ ಕ್ಕೂ ಹೆಚ್ಚು ಮಕ್ಕಳು ಈ ತರಗತಿ ಗಳಿಗೆ ಸೇರ್ಪಡೆ ಗೊಳಿಸಿರು ವುದು ಅದ್ಬುತ ಸಾಧನೆ ಹಾಗೂ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ ಡಿ ಎಂ ಸಿ ಅಧ್ಯಕ್ಷ ಟಿ ಎಂ ಪ್ರಕಾಶ್ ಅವರು ಗ್ರಾಮದ ಮುಖಂಡರು ಹಾಗೂ ಪೋಷಕರ ಸಹಕಾರ ದಿಂದ ಎಲ್ ಕೆ ಜಿ ಯುಕೆಜಿ ತರಗತಿಗಳನ್ನು ಆರಂಭಿಸಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಲು ಸಾಧ್ಯವಾಗಿದ್ದು ಮುಂದೆ ಈ ಎಲ್ಲಾ ಮಕ್ಕಳಿಗೆ ಸಮಿತಿ ವತಿಯಿಂದ ಉತ್ತಮ ಸಮವಸ್ತ್ರ, ಪುಸ್ತಕ ಬ್ಯಾಗ್ ಜೊತೆಗೆ ಮಧ್ಯಾಹ್ನದ ಉಪಾಹಾರ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಾಜಿ ಜಿ ಪಂ ಸದಸ್ಯರಾದ ಚೌಡಯ್ಯ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಯೋಗೇಶ್, ಟಿಎಪಿಸಿಎಂಎಸ್ ನಿರ್ದೇಶಕ ಚೌಡಯ್ಯ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸುರೇಶ್ ನೀವೃತ್ತ ಪ್ರಾಧ್ಯಾಪಕ ಹನುಮಂತ ಸೇರಿದಂತೆ ಹಲವಾರು ಶಾಲಾಭಿ ವೃದ್ದಿ ಸದಸ್ಯರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳಿಗೆ ಕನ್ನಡ ಹಾಗೂ ಇಂಗ್ಲೀಷ್ ಪದ್ಯಗಳನ್ನು ಸ್ವತಃ ನೃತ್ಯ ಮಾಡಿಕೊಂಡು ಹೇಳಿ ಕೊಡುವ ಮೂಲಕ ಬಿಇಓ ಚಿಕ್ಕಸ್ವಾಮಿ ಕೆಲಕಾಲ ಮಕ್ಕಳಲ್ಲಿ ಮಕ್ಕಳಾಗಿ ಬೆರತು ಹೋಗಿದ್ದು ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ