ಮಳವಳ್ಳಿ : ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಸುಸಜ್ಜಿತ ಕನ್ನಡ ಸಾಹಿತ್ಯ ಭವನ ನಿರ್ಮಾಣ ತನ್ನ ಮುಂದಿನ ಗುರಿಯಾಗಿದೆ ಎಂದು ನಿಕಟ ಪೂರ್ವ ಅಧ್ಯಕ್ಷರು ಮತ್ತೊಮ್ಮೆ ಜಿಲ್ಲಾಧ್ಯಕ್ಷ. ಸ್ಥಾನದ ಸ್ಪರ್ಧಾಳು ಆಗಿರುವ ಸಿ ಕೆ ರವಿಕುಮಾರ್ ಚಾಮಲಾಪುರ ಹೇಳಿದ್ದಾರೆ.
ಮಳವಳ್ಳಿ ಪಟ್ಟಣದ ಭಗವಾನ್ ಬುದ್ದ ಕಾಲೇಜು ಆವರಣದಲ್ಲಿ ನಡೆದ ಚುನಾವಣಾ ಪೂರ್ವ ಭಾವಿ ಸಭೆಯಲ್ಲಿ ಮತಯಾಚಿಸಿ ಮಾತನಾಡುತ್ತಿದ್ದ ಅವರು ೨೭ ವರ್ಷಗಳ ಹಿಂದೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು ಬಿಟ್ಟರೆ ನಂತರದಲ್ಲಿ ಈ ಸಮ್ಮೇಳನ ನಡೆಸುವ ಅವಕಾಶ ಮಂಡ್ಯಕ್ಕೆ ಸಿಕ್ಕಿಲ್ಲ, ಕಳೆದ ವರ್ಷ ಸಹ ಈ ಸಮ್ಮೇಳನ ನಡೆಸುವ ತೀವ್ರ ಯತ್ನ ನಡೆಸಲಾಯಿತಾದರು ಪ್ರಯತ್ನ ಕೈಗೂಡಲಿಲ್ಲ ಎಂದರು.
ಕಳೆದ ಐದು ವರ್ಷಗಳಲ್ಲಿ ಜಿಲ್ಲಾ ಸಮ್ಮೇಳನ, ತಾಲ್ಲೂಕು ಸಮ್ಮೇಳನ, ಹೋಬಳಿ ಸಮ್ಮೇಳನ ಸೇರಿದಂತೆ ನೂರಾರು ಸಮ್ಮೇಳನಗಳನ್ನು ನಡೆಸುವುದರ ಜೊತೆಗೆ ಎರಡು ಭಾರಿ ರಾಜ್ಯ ಮಟ್ಟದ ಸಮ್ಮೇಳನ ನಡೆಸುವ ಮೂಲಕ ಹಳ್ಳಿ ಹಳ್ಳಿಗೆ ಸಾಹಿತ್ಯ ಪರಿಷತ್ತನ್ನು ಕೊಂಡೊಯ್ಯವ ಪ್ರಾಮಾಣಿಕತೆ ಪ್ರಯತ್ನ ನಡೆಸಿದ್ದೇನೆ. ಜೊತೆಗೆ ಪ್ರತಿಭಾ ಪುರಸ್ಕಾರ, ಶಿಕ್ಷಕರಿಗೆ ಸನ್ಮಾನ ಸೇರಿದಂತೆ ಹಲವಾರು ಕಾರ್ಯಕ್ರಮ ಗಳನ್ನು ನಡೆಸುವ ಮೂಲಕ ಜನಸಾಮಾನ್ಯರ ಪರಿಷತ್ತ್ ಆಗಿ ಮಾಡಿದ್ದೇನೆ ಎಂದ ರವಿಕುಮಾರ್ ಚಾಮಲಾಪುರ ನನ್ನ ಈ ಸೇವಾ ಕಾರ್ಯ ಚಟುವಟಿಕೆಗಳನ್ನು ಗುರುತಿಸಿ ಇನ್ನೊಂದು ಅವಧಿಗೆ ಆಯ್ಕೆ ಮಾಡುವಂತೆ ಮತದಾರರನ್ನು ಕೋರಿದರು.
ಜಿಲ್ಲಾ ಕಸಾಪ ಗೌರವ ಕಾರ್ಯ ದರ್ಶಿ ಹುಸ್ಕೂರು ಕೃಷ್ಣೇಗೌಡ ಮಾತನಾಡಿ ಇಂದೆAದೂ ಕಾಣದಷ್ಟು ಸಮ್ಮೇಳನ, ಕಾರ್ಯಕ್ರಮಗಳನ್ನು ನಡೆಸಿದ ರವಿಕುಮಾರ್ ಅವರ ಕ್ರಿಯಾಶೀಲಾತ್ಮಕ ವ್ಯಕ್ತಿತ್ವವೇ ಅವರಿಗೆ ಕೆಲ ವಿರೋಧಿಗಳು ಹುಟ್ಟಿ ಕೊಳ್ಳಲು ಕಾರಣವಾಗಿರ ಬಹುದು ಎಂದರು.
ಓಡುವವನು ಎಡವುವುದ ಸಹಜ ಎಂದು ಸೂಕ್ಷ್ಮ ವಾಗಿ ಹೇಳಿದ ಕೃಷ್ಣೇಗೌಡ ಅವರ ದುಡಿಮೆಯ ಮನೋಭಾವ ಗುರುತಿಸಿ ಮತ್ತೊಮ್ಮೆ ಅವರನ್ನು ಬೆಂಬಲಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಬಸಪ್ಪ ನೆಲಮಾಕನಹಳ್ಳಿ. ತಾಲ್ಲೂಕು ಕಸಾಪ ಅಧ್ಯಕ್ಷ ದೇವರಾಜು ಕೊದೇನಕೊಪ್ಪಲು, ಮಾಜಿ ಜಿ ಪಂ ಸದಸ್ಯರಾದ ಎಂ ಎನ್ ದೇವರಾಜು, ಪುಟ್ಟಯ್ಯ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ನೆಟ್ಕಲ್ ಚೇತನ್ ಕುಮಾರ್ ಮತ್ತಿತರರು ಮಾತನಾಡಿ ರವಿಕುಮಾರ್ ಚಾಮಲಾಪುರ ಅವರಿಗೆ ತಮ್ಮ ಬೆಂಬಲ ಸೂಚಿಸಿದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ