

ಭಟ್ಕಳ ಪಟ್ಟಣದ ಗುಡ್‌ಲಕ್ ರಸ್ತೆಯ ೫ ನೇ ಕ್ರಾಸಿನಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸಿದ ಪರಿಣಾಮ ರಸ್ತೆ ಕುಸಿದು ಬೈಕ್ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಡ್‌ಲಕ್ ರಸ್ತೆಯ ೫ನೇ ಕ್ರಾಸಿನಲ್ಲಿ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಪೈಪಲೈನ್ ಅಳವಡಿಸಿದ ಬಳಿಕ ವೈಜ್ಞಾನಿಕವಾಗಿ ಮಣ್ಣು ಮುಚ್ಚುತ್ತಿಲ್ಲ. ಪರಿಣಾಮ ಸುರಿದ ಅಕಾಲಿಕ ಮಳೆಯಿಂದಾಗಿ ರಸ್ತೆ ಮದ್ಯದಲ್ಲಿ ಮಣ್ಣು ಕುಸಿಯುತ್ತಿದೆ. ಇದರಿಂದ ವಾಹನ ಸವಾರರು ಬಿದ್ದು ಕಿರಿಕಿರಿ ಅನುಭವಿಸುತ್ತಿದ್ದಾರೆ. ಹಗಲಿನಲ್ಲಿ ಜನಸಂಚಾರ ವಿದ್ದು ಅಪಾಯದಲ್ಲಿ ಸಿಲುಕಿದ ಸವಾರರನ್ನು ಎತ್ತಲೂ ಜನ ಬರುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಇಂತಹ ಅನಾಹುತ ನಡೆದರೆ ಯಾರು ಹೊಣೆ. ಹೊಂಡ ತೆಗೆದು ಮಣ್ಣು ಮುಚ್ಚುವಾಗ ಯಾವುದೆ ಮಾನದಂಡವನ್ನು ಗುತ್ತಿಗೆದಾರರು ಬಳಸುತ್ತಿಲ್ಲ. ಅಧಿಕಾರಿಗಳು ಅದರ ಕುರಿತು ಪರೀಶೀಲನೆ ನಡೆಸುತ್ತಿಲ್ಲ. ಈ ಹಿಂದೆಯೂ ಶಾಲಾವಾಹನವೊಂದು ಅಪಾಯಕ್ಕೆ ಸಿಲುಕಿ ಬಳಿಕ ಜೆಸಿಬಿ ಯಂತ್ರದಿOದ ಮೇಲೆತ್ತಲಾಗಿತ್ತು. ಈಗಲೂ ಅದೆ ಗುಣಮಟ್ಟದ ಕಾರ್ಯ ನಡೆಯುತ್ತಿದೆ ಎಂದು ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ