

ಭಟ್ಕಳ: ಫೆಬ್ರವರಿಯಲ್ಲಿ ನಡೆಯುವ ಶಿರಾಲಿಯ ಸಾರದೊಳೆಯ ಹಳೇಕೋಟೆ ಶ್ರೀ ಹನುಮಂತ ದೇವಸ್ಥಾನದ ಉದ್ಘಾಟನೆ ಕಾರ್ಯಕಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಆಮಂತ್ರಿಸಿದ ದೇವಸ್ಥಾನದ ಆಡಳಿತ ಕಮಿಟಿ.
ಭಟ್ಕಳ: ಭಟ್ಕಳ ತಾಲೂಕಿನ ಶಿರಾಲಿಯ ಸಾರದೊಳೆಯ ಹಳೇಕೋಟೆ ಶ್ರೀ ಹನುಮಂತ ದೇವಸ್ಥಾನದ ಶಿಲಾಮಯ ದೇವಸ್ಥಾನದ ನಿರ್ಮಾಣಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ದೇವಸ್ಥಾನದ ಆಡಳಿತ ಕಮಿಟಿಯವರು ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಆಮಂತ್ರಿಸಿದರು. ದೇವಸ್ಥಾನದ ಆಡಳಿತ ಕಮಿಟಿಯವರು ವೀರೇಂದ್ರ ಹೆಗ್ಗಡೆಯವರಿಗೆ ಹನುಮಂತ ದೇವಸ್ಥಾನದ ನಿರ್ಮಾಣದ ಕುರಿತು ಸಂಪೂರ್ಣ ವಿವರಿಸಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಕಮಿಟಿಯ ಅಧ್ಯಕ್ಷ ಸುಬ್ರಾಯ ನಾಯ್ಕ, ಮೊಕ್ತೆಸರ ಸುಬ್ರಾಯ ಜೆ ನಾಯ್ಕ, ಶಾಸಕ ಸುನೀಲ ನಾಯ್ಕ, ಪ್ರಮುಖರಾದ ಜೆ.ಜೆ. ನಾಯ್ಕ, ವೆಂಕಟೇಶ ನಾಯ್ಕ ಮುಂತಾದವರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ