

ಭಟ್ಕಳ ಪಟ್ಟಣದಿಂದ ಅರುಕ್ಕಿ ಕಡೆ ಸಾಗುತ್ತಿದ್ದ ಬೈಕ್ ಮತ್ತು ಭಟ್ಕಳದ ಕಡೆ ಬರುತ್ತಿದ್ದ ಕಲ್ಲು ಸಾಗಾಟ ಮಾಡುವ ಲಾರಿಯ ನಡುವೆ ಬುಧವಾರ ಮುಖಾಮುಖಿ ಅಪಘಾತ ಸಂಭವಿಸಿದ್ದು ತೀವ್ರವಾಗಿ ಗಾಯಗೊಂಡ ಬೈಕ್ ಸವಾರನನ್ನು ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದೆ.
ತಾಲೂಕಿನ ಅರುಕಿ ಗ್ರಾಮದ ನಿವಾಸಿ ಪವನ ಗೋಯ್ದ ಮರಾಠಿ (೨೯) ಗಂಭಿರವಾಗಿ ಗಾಯಗೊಂಡವರು, ಇವರು ಭಟ್ಕಳದಿಂದ ಅರುಕ್ಕಿ ಕಡೆ ಹೋಗುತ್ತಿರುವಾಗ ಎದುರಿನಿಂದ ಬಂದ ಕಲ್ಲು ಸಾಗಾಟ ಮಾಡುವ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಲ್ಲು ಸಾಗಾಟ ಮಾಡುವ ಲಾರಿ ಪಲ್ಟಿಯಾಗಿದ್ದು ಬೈಕ್ ಸವಾರನ ಕೈ ಮತ್ತು ಕಾಲು ಸಂಪೂರ್ಣ ಜಖಂಗೊಡಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಚಾಲಕ ದಿನೇಶ ದೇವಾಡಿಗ ಹಾಗೂ ಲಾರಿಯಲ್ಲಿದ್ದ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ