December 22, 2024

Bhavana Tv

Its Your Channel

ಕಾಡಾನೆ ದಾಳಿಗೆ ಭತ್ತದ ಗದ್ದೆ ನಾಶ

ಮಳವಳ್ಳಿ : ಬೆಳೆದು ನಿಂತಿದ್ದ ಭತ್ತದ ಗದ್ದೆ ಮೇಲೆ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಕಟ್ಟಾವು ಹಂತದಲ್ಲಿದ್ದ ಒಂದು ಎಕರೆ ಭತ್ತದ ಗದ್ದೆಯನ್ನು ಸಂಪೂರ್ಣವಾಗಿ ತುಳಿದು ನಾಶ ಪಡಿಸಿರುವ ಘಟನೆ ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ಜರುಗಿದೆ.
ಕಾಡಂಚಿನ ಗ್ರಾಮವಾಗಿರುವ ನೆಟ್ಕಲ್ ಗ್ರಾಮಕ್ಕೆ ಆಗಾಗ್ಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ರೈತರು ಬೆಳೆದ ಫಸಲನ್ನು ಹಾಳುಗೆಡುಹುತ್ತಿರುವುದು ಸಾಮಾನ್ಯವಾಗಿ ಹೋಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿ ರೈತರ ಗೋಳು ಅರಣ್ಯ ರೋಧನೆಯಾಗಿ ಹೋಗಿದೆ.
ನೆನ್ನೆ ರಾತ್ರಿ ಸಹ ಈ ಗ್ರಾಮದ ಬೊಕಳೇಗೌಡ ಎಂಬುವರ ಮಗ ಮಹಾದೇವಪ್ಪ ಎಂಬುವವರ ಭತ್ತದ ಗದ್ದೆಗೆ ನುಗ್ಗಿರುವ ಕಾಡಾನೆಗಳು ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತುಳಿದು ನಾಶ ಪಡಿಸಿದ್ದು ಇನ್ನೂ ಕೆಲವೇ ದಿನಗಳಲ್ಲಿ ಈ ಭತ್ತದ ಬೆಳೆ ಕೊಯ್ಲು ಮಾಡುವ ಹಂತದಲ್ಲಿ ಇತ್ತು ಎನ್ನಲಾಗಿದೆ.
ರೈತ ಮಹಾದೇವಪ್ಪ ಅವರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: