ಮಳವಳ್ಳಿ : ನೀಲಗಾರರ ಪರಂಪರೆಯ ನೆಲವೀಡಾದ, ಪವಾಡ ಪುರುಷ ಧರಗೆ ದೊಡ್ಡವರು ಎಂದೇ ಬಿರುದಾಂಕಿತರಾದ ಶ್ರೀ ಮಂಟೇಸ್ವಾಮಿ ಯವರ ಐಕ್ಯ ಸ್ಥಳವಾದ, ನಾಡಿನ ಮೂಲೆ ಮೂಲೆಗಳಲ್ಲಿ ಲಕ್ಷಾಂತರ ಜನ ಭಕ್ತರನ್ನು ಹೊಂದಿರುವ ಮಳವಳ್ಳಿ ತಾಲ್ಲೂಕಿನ ರಾಜ ಬೊಪ್ಪೇಗೌಡನ ಪುರದಲ್ಲಿನ ಶ್ರೀ ಮಂಟೇಸ್ವಾಮಿ ಮಠದ ನಿರ್ವಹಣೆ ಹಾಗೂ ಅಧಿಕಾರಕ್ಕಾಗಿ ಎರಡು ಸಹೋದರ ಕುಟುಂಬಗಳ ನಡುವೆ ಹಗ್ಗಜಗ್ಗಾಟ ಶುರುವಾಗಿದ್ದು ಈ ವಿವಾದ ಬುಗಿಲೇಳುವ ಲಕ್ಷಣಗಳು ಕಾಣಿಸಿಕೊಂಡಿವೆ.
ಇದುವರೆಗೆ ಈ ಮಠದ ನಿರ್ವಹಣೆ , ಪಟ್ಟಾಧಿಕಾರದ ಹಕ್ಕನ್ನು ಶ್ರೀ ಪ್ರಭುದೇವರಾಜೇ ಅರಸ್ ಹಾಗೂ ಇವರ ಸಹೋದರ ಶ್ರೀ ಜ್ಞಾನನಂದ ಚೆನ್ನರಾಜೇಅರಸ್ ಅವರು ಸಮಾನಾಗಿ ಹಂಚಿಕೊAಡು ಬರುತ್ತಿದ್ದರು. ಜೊತೆಗೆ ಹಿರಿಯರಾದ ಪ್ರಭುದೇವರಾಜೇ ಅರಸ್ ಅವರು ಮಠದ ಆಡಳಿತಾಧಿಕಾರಿ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿದ್ದರು.
ಆದರೆ ಇತ್ತೀಚೆಗೆ ಪ್ರಭುದೇವ ರಾಜೇ ಅರಸ್ ಅವರು ನಿಧನರಾಗಿದ್ದು ನಂತರದಲ್ಲಿ ಅವರ ಪುತ್ರ ಭರತ್ ರಾಜೇ ಸದಸ್ಯರಾದ ಅವರು ಮಠದಲ್ಲಿ ತಮ್ಮ ತಂದೆ ಹೊಂದಿದ್ದ ಅಧಿಕಾರ ಹಕ್ಕು ಭಾದ್ಯತೆಗಳನ್ನು ತಮಗೆ ನೀಡಬೇಕೆಂಬ ಅಹವಾಲು ಮಂಡಿಸುವುದರೊAದಿಗೆ ಈ ವಿವಾದದ ಕಿಡಿ ಆರಂಭವಾಗಿದೆ.
ಆದರೆ ಇದನ್ನು ನಿರಾಕರಿಸುತ್ತಿರುವ ಜ್ಞಾನನಂದ ಚೆನ್ನರಾಜೇ ಅರಸ್ ಅವರು ಈ ಹಿಂದೆ ಕುಟುಂಬದ ಹಿರಿಯ ಎನ್ನುವ ಕಾರಣಕ್ಕೆ ತಮ್ಮ ಅಣ್ಣ ಪ್ರಭು ದೇವರಾಜೇ ಅರಸ್ ಅವರಿಗೆ ಮಠದ ಆಡಳಿತಾಧಿಕಾರಿ ಹಾಗೂ ಪಟ್ಟಾಧಿಕಾರ ಸ್ಥಾನವನ್ನು ವಹಿಸಲಾಗಿತ್ತು, ಅವರ ಕಾಲವಾದ ನಂತರ ನಾನೇ ಕುಟುಂಬದ ಹಿರಿಯನಾಗಿದ್ದು ತನಗೇ ಈ ಅಧಿಕಾರ ದಕ್ಕಬೇಕಾಗಿದ್ದು ತಾನೇ ಆಡಳಿತಾಧಿಕಾರಿ ಕಾರ್ಯಭಾರ ನಿರ್ವಹಿಸುವುದಾಗಿ ಪಟ್ಟು ಹಿಡಿದಿದ್ದಾರೆ ಎಂದು ಗೊತ್ತಾಗಿದೆ.
ಕುಟುಂಬದ ಒಳ ಹಂತದಲ್ಲೇ ಈ ವಿವಾದವನ್ನು ಬಗೆಹರಿಸಿಕೊಂಡು ತಮ್ಮ ತಂದೆಯವರು ಹೊಂದಿದ್ದ ಹಕ್ಕು ಅಧಿಕಾರವನ್ನು ಪಡೆದು ಕೊಳ್ಳುವ ಯತ್ನ ನಡೆಸಿದ ಭರತ್ ರಾಜೇ ಅರಸ್ ಅವರ ಯತ್ನ ಫಲ ನೀಡಿಲ್ಲ, ಅನಿವಾರ್ಯವಾಗಿ ಬಿ ಜಿ ಪುರ ಗ್ರಾಮದ ಮುಖಂಡರ ಪಂಚಾಯ್ತಿ ಮೊರೆ ಹೋಗಿರುವ ಭರತ್ ಅವರು ಮಠದಲ್ಲಿ ತಮ್ಮ ತಂದೆಯವರು ಹೊಂದಿದ್ದ ಅಧಿಕಾರ ಹಕ್ಕುಗಳನ್ನು ತಮಗೆ ದೊರೆಕಿಸಿಕೊಡುವಂತೆ ಕೋರಿದ್ದಾರೆ.
ಅದರಂತೆ ಪಂಚಾಯ್ತಿ ನಡೆಸಿದ ಗ್ರಾಮದ ಎಲ್ಲಾ ಮುಖಂಡರು ಭರತ್ ಅವರ ಕೋರಿಕೆ ನ್ಯಾಯ ಸಮ್ಮತವಾಗಿದ್ದು ಹಿಂದೆ ಈ ಎರಡು ಕುಟುಂಬಗಳು ಯಾವ ರೀತಿ ಮಠದ ನಿರ್ವಹಣೆ ಹಾಗೂ ಅಧಿಕಾರಿಗಳನ್ನು ಹಂಚಿಕೊAಡು ಬರುತ್ತಿದ್ದಂತೆ ಹಿಂದಿನ ಪರಂಪರೆಯನ್ನು ಮುಂದುವರೆಸಿಕೊAಡು ಹೋಗಲಿ ಎಂದು ತೀರ್ಮಾನ ಮಾಡಿದ್ದಾರೆ.
ಆದರೆ ಇದಕ್ಕೆ ಒಪ್ಪದ ಜ್ಞಾನನಂದ ಚೆನ್ನ ರಾಜೇಅರಸ್ ಅವರು ತಮ್ಮ ಹಿಂದಿನ ಪಟ್ಟನ್ನು ಬಿಗಿ ಹಿಡಿದು ಕುಳಿತಿದ್ದಾರೆ.
ಇಂದು ಸಹ ಈ ಎರಡು ಕುಟುಂಬದವರನ್ನು ಸೇರಿಸಿ ಮಾತುಕತೆ ಮೂಲಕ ಈ ವಿವಾದವನ್ನು ಬಗೆಹರಿಸುವ ಸಲುವಾಗಿ ಗ್ರಾಮದ ನಾಡಗೌಡರು ಸೇರಿದಂತೆ ಹಲವಾರು ಯಜಮಾನರು ಮುಖಂಡರು ಸಭೆ ಸೇರಿದ್ದರು.
ಈ ಸಭೆಯಲ್ಲಿ ಮೈಸೂರಿನ ಇತಿಹಾಸ ತಜ್ಞರಾದ ಪ್ರೊ. ನಂಜರಾಜೇ ಅರಸ್ ಅವರು ಸಹ ಆಗಮಿಸಿದ್ದರು.
ಆದರೆ ಮಠದಲ್ಲೇ ಇದ್ದರೂ ಜ್ಞಾನನಂದ ಚೆನ್ನರಾಜೇ ಅರಸ್ ಅವರು ಸಭೆಗೆ ಬಾರದೆ ದೂರ ಉಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಭರತ್ ರಾಜೇ ಅರಸ್ ಅವರು ಈಗಾಗಲೇ ಎರಡು ಬಾರಿ ಗ್ರಾಮದ ಎಲ್ಲಾ ಕೋಮಿನ ಮುಖಂಡರು ಸಭೆ ಸೇರಿ ದಿವಂಗತ ಪ್ರಭುರಾಜೇ ಅ ಅರಸ್ ನಿರ್ವಹಿಸುತ್ತಿದ್ದ ಎಲ್ಲಾ ನಿರ್ವಹಣೆ ಜವಾಬ್ದಾರಿ ಗಳನ್ನು ಅವರ ಮಗನಿಗೆ ವಹಿಸುವ ಮೂಲಕ ಎರಡು ಕುಟುಂಬದವರು ಸೌಹಾರ್ದತೆಯಿಂದ ಸಮಸ್ಯೆಯನ್ನು ಪರಿಹರಿಸಿ ಕೊಂಡು ಮಠದ ಭವ್ಯ ಪರಂಪರೆ ಗೌರವ ಕಾಪಾಡಬೇಕೆಂದು ತೀರ್ಮಾನಿಸಿದ್ದರು, ಅದರಂತೆ ನಮಗೆ ಯಾವ ಜವಾಬ್ದಾರಿಯನ್ನು ಬಿಟ್ಟುಕೊಡದೆ ನಮಗೆ ಅಡಚಣೆ ಉಂಟು ಮಾಡುವುದರ ಜೊತೆಗೆ ತಮಗೆ ತಮ್ಮ ತಾಯಿಯವರಿಗೆ ತೊಂದರೆ ಉಂಟು ಮಾಡುವ ಯತ್ನ ನಡೆಸಲಾಗುತ್ತಿದೆ ಎಂದು ದೂರಿದರು.
ಪ್ರೊ. ನಂಜರಾಜೇ ಅರಸ್ ಅವರು ಮಾತನಾಡಿ ಕುಟುಂಬದವರ ಹಕ್ಕು ಬಾಧ್ಯತೆ ಗಳ ಕಿತ್ತಾಟಕ್ಕಿಂತಲೂ ಮಠದ ಭವ್ಯ ಇತಿಹಾಸ ಪರಂಪರೆಯನ್ನು ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯ ವಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಗ್ರಾಮದ ಮುಖಂಡರು ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗ ಬೇಕು ಆಗ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಇಲ್ಲವಾದರೆ ಈ ವಿವಾದ ಹಾದಿ ರಂಪ ಬೀದಿರಂಪ ವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಜ್ಞಾನ ನಂದ ಚೆನ್ನರಾಜೇ ಅರಸ್ ಅವರು ನಮ್ಮೆಲ್ಲರ ಹಿರಿಯರಾದ ಮಳವಳ್ಳಿ ಮಠದ ವರ್ಚಸ್ವಿ ಸಿದ್ಧಲಿಂಗರಾಜೇ ಅರಸ್ ಅವರು ಕೈಗೊಳ್ಳುವ ತೀರ್ಮಾನಕ್ಕೆ ಯಾವು ಬದ್ದರಾಗಿರುವುದಾಗಿ ತಿಳಿಸಿದರು.
ಒಟ್ಟಾರೆ ಈ ವಿವಾದ ಸೌಹಾರ್ದವಾಗಿ ಬಗೆಹರಿಯುವುದೋ ಇಲ್ಲ ಇನ್ನಾವ ಮಜಲಿಗೆ ಮುಟ್ಟುವುದೋ ಕಾದು ನೋಡ ಬೇಕಿದೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ