ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಭಾನುವಾರ ನಿವೃತ್ತ ನೌಕರರ ದಿನಾಚರಣೆ ನಿಮಿತ್ತ ಬಾದಾಮಿ ತಾಲೂಕಾ ನಿವೃತ್ತ ಸಂಘದಿoದ ೭೫ ವರ್ಷದ ಹಿರಿಯ ಸದಸ್ಯರಿಗೆ ಸನ್ಮಾನ ಮಾಡಲಾಯಿತು.ಹಾಗೆಯೇ ವಿಶೇಷವಾಗಿ ಪರಿಸರ ಪ್ರೇಮಿ ಸಮಾಜ ಸೇವಕ ಪರಿಸರ ತಜ್ಞರಾದ ಸೋನಾಲಿ ಕ ಟ್ರ‍್ಯಾಕ್ಟರ್ ಡೀಲರ್ ಹಾಗೂ ಪೆಟ್ರೋಲ್ ಬ್ಯಾಂಕ್ ಮಾಲೀಕರಾದ ರಮೇಶ್. ಎಲ್.ಹಾದಿಮನಿ ಇವರನ್ನು ಹಾಗೂ ೭೫ ಬಾರಿ ರಕ್ತದಾನ ಮಾಡಿದ ಹಿರಿಮೆಯ ಬಸವರಾಜ ಕೊಣ್ಣೂರ ಇವರಿಗೆ ವಿಶೇಷ ಸನ್ಮಾನ ಮಾಡಲಾಯಿತು.ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯರಾಜ್ ಕುಲಕರ್ಣಿ ಮಾತನಾಡಿ ವಾರ್ಷಿಕ ವರದಿಯ ವಿವರಣೆ ಬಗ್ಗೆ ರೂಪುರೇಷೆ ಬಗ್ಗೆ ವಿವರಣೆ ನೀಡಿದರು.
ಮುಖ್ಯ ಅತಿಥಿಗಳಾದ ವೈದ್ಯರು,ಸಾಹಿತಿಗಳು ಹಾಗೂ ನಾಟಕ ರಚನೆಕಾರರು ಆದಂತಹ ಡಾ! ಕರವಿರಪ್ರಭೂ ಕ್ಯಾಲಕೊಂಡ್ ಮಾತನಾಡಿ ನಿವೃತ್ತಿಯ ನಂತರದ ಆರೋಗ್ಯದ ಕಾಳಜಿ ಬಗ್ಗೆ ವಿವರವಾಗಿ ಸುದೀರ್ಘ ವಿವರಣೆ ನೀಡಿದರು. ಹಾಗೆಯೇ ಸವಿತಾ ಕಾಳೆ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಬಾಗಲಕೋಟೆ ಇವರು ಮಾತನಾಡಿ ನಿವೃತ್ತಿ ನಂತರದ ವೃದ್ಧಾಶ್ರಮದಲ್ಲಿ ಇರುವವರನ್ನು ಮಾತನಾಡಿಸಿ ಇದು ವರವೋ ಅಥವಾ ಶಾಪವೋ ಏನೋ ಎಂದು ಸಮಿಕ್ಷೇ ನಡೆಸಿ ಒಂದು ಕಡೆ ವೃದ್ಧಾಶ್ರಮ ಮಾಡುವುದು ನಮ್ಮ ಕರ್ತವ್ಯ ಆದರೆ ಇನ್ನೊಂದು ಕಡೆ ಮನಸ್ಸಿಗೆ ನೋವಿನ ಸಂಗತಿಯೂ ಕೂಡ ಆಗಿದ್ದರ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊAಡರು.
ನoತರ ಮಾತನಾಡಿದ ಎಚ್. ಎ. ಕೇಸರಿ ಮಾತನಾಡಿ ನಿವೃತ್ತ ನೌಕರರ ಬಗ್ಗೆ ಮಾತನಾಡಿ ನಮ್ಮ ನೌಕರರ ಸಂಘಕ್ಕೆ ಯಾರು ನೋಂದಣಿ ಮಾಡಿಸಿಲ್ಲವೋ ಆದಷ್ಟು ಬೇಗನೆ ಮಾಡಿಸಿ ಒಗ್ಗೂಡಬೇಕು ಎಂದು ಮನವಿ ಮಾಡಿದರು.
ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕರಾದ ಶ್ರೀಮತಿ ದೀಪಾ ರಾಣಿ ಕೆ. ಮಾತನಾಡಿ ನಿವೃತ್ತ ನೌಕರರಿಗೆ ತಮ್ಮ ಕೆನರಾ ಬ್ಯಾಂಕ್‌ನಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು.
ನಿವೃತ್ತ ಸಂಘದ ಜಿಲ್ಲಾ ಅಧ್ಯಕ್ಷರಾದ ಗೋವಿಂದಪ್ಪನವರ ಮಾತನಾಡಿ ನಿವೃತ್ತಿ ನಂತರದ ತಮ್ಮ ಸಾರ್ಥಕ ಹಾಗೂ ಸಮರಸ ಜೀವನದ ಕ್ಷಣಗಳನ್ನು ಬಿಚ್ಚಿಡುತ್ತಾ ಇಡೀ ಕಾರ್ಯಕ್ರಮವನ್ನು ಒಂದು ಕ್ಷಣ ನಗೆಗಡಲಲ್ಲಿ ತೇಲಿಸಿದರು.
ಬಸವರಾಜ್ ಕೊಣ್ಣೂರ ರಕ್ತದಾನದ ಬಗ್ಗೆ ಮನಮುಟ್ಟುವಂತೆ ಪ್ರೇರೇಪಣೆ ನೀಡಿದರು.
.ಇಡೀ ಕಾರ್ಯಕ್ರಮಕ್ಕೆ ಭೋಜನ ಸೇವೆ ಮತ್ತು ನೆನಪಿನ ಕಾಣಿಕೆ ವ್ಯವಸ್ಥೆ ನಿರ್ವಹಿಸಿದ ಪಾರ್ವತಮ್ಮ. ಡಿ. ದಾಸರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ನೌಕರರನ್ನು ಕೂಡ ಸನ್ಮಾನಿಸಿ ಗೌರವಿಸಲಾಯಿತು.ಇಷ್ಟಲಿಂಗ ಶಿರಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಕಾರ್ಯಕ್ರಮದಲ್ಲಿ ಡಿ.ಎಂ.ಪೈಲ್ ಅಧ್ಯಕ್ಷರು ಬಾದಾಮಿ ತಾಲೂಕಾ ನಿ.ನೌಕರರ ಸಂಘ,ಮುಖ್ಯ ಅತಿಥಿಗಳಾಗಿ ಡಾ! ಕರವೀರಪ್ರಭೂ ಕ್ಯಾಲ ಕೊಂಡ ಖ್ಯಾತ ವೈದ್ಯರು ಬಾದಾಮಿ, ಆನಂದ ಮುಚ್ಚಂಡಿ ಜಿಲ್ಲಾ ಖಜಾನೆ ಅಧಿಕಾರಿಗಳು ಬಾಗಲಕೋಟೆ, ಸವಿತಾ ಕಾಳೆ(ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಾಗಲಕೋಟ, ವಿ. ಬಿ.ಗೋವಿಂದಪ್ಪನವರ ಅಧ್ಯಕ್ಷರು ನಿವೃತ್ತ ಜಿಲ್ಲಾ ಸಂಘ ಬಾಗಲಕೋಟ, ದೀಪಾ ರಾಣಿ ಕೆ..ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಬಾದಾಮಿ ಬ್ರ‍್ಯಾಂಚ್., ಅಥಣಿ(ಖಜಾನೆ ಇಲಾಖೆ ಮಿನಿವಿಧಾನ ಸೌಧ ಬಾದಾಮಿ)ರಮೇಶ್.ಎಲ್.ಹಾದಿಮನಿ (ಪರಿಸರ ತಜ್ಞರು,ಸಾಮಾಜ ಸೇವಕರು ಸೋನಾಲಿ ಕ ಟ್ರ‍್ಯಾಕ್ಟರ್ ಡೀಲರ್) ಬಸವರಾಜ್ ಕೊಣ್ಣೂರ ಹಾಗೂ ನಿವೃತ್ತ ನೌಕರರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ:- ರಾಜೇಶ್. ಎಸ್
ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ