April 26, 2024

Bhavana Tv

Its Your Channel

ಬನಶಂಕರಿಯ ಹಂಪಿ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ ಉಳಿಸಿಕೊಳ್ಳಲು ಬಾದಾಮಿ ಅಭಿವೃಧ್ದಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳಿOದ ಪ್ರತಿಭಟನೆ

ಬಾದಾಮಿಯ ಬನಶಂಕರಿಯ ಹಂಪಿ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ ಉಳಿಸಿಕೊಳ್ಳಲು ಬಾದಾಮಿ ಅಭಿವೃಧ್ದಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳಿAದ ಹೋರಾಟ ಮಾಡಿ ಮನವಿ ಸಲ್ಲಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ಬಂಶAಕರಿಯಲ್ಲಿರುವ ಹಂಪಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಬಾದಾಮಿ ಅಭಿವೃಧ್ದಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳಿAದ ಇಂದು ಬಾದಾಮಿ ನಗರದ ಅಕ್ಕಮಹಾದೇವಿ ಕಲ್ಯಾಣ್ ಮಂಟಪದಿAದ ಹೋರಾಟ ಚಾಲನೆಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಾ ಘೋಷಣೆ ಗಳೊಂದಿಗೆ ಕೂಗುತ್ತಾ ಹೋರಾಟ ಹಾಗೆ ಅಂಬೇಡ್ಕರ್ ವೃತ್ತ ಹಾಗೂ ರಾಮದುರ್ಗ ವೃತ್ತದಲ್ಲಿ ಹಾಗೂ ಪಿ. ಎಲ್. ಡಿ.ಬ್ಯಾಂಕ್ ಮುಖ್ಯ ರಸ್ತೆಗಳಲ್ಲಿ ಮಾನವ ಸರಪಳಿ ರಚನೆ ಮಾಡಿ ಕೆಲಕಾಲ ವಾಹನಗಳನ್ನು ತಡೆದರು. ಪ್ರಮುಖ ರಸ್ತೆಗಳಲ್ಲಿ ಹಾದುಹೊದ ಹೋರಾಟ ಸಮಿತಿ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಪಿ. ಎಲ್. ಡಿ.ಬ್ಯಾಂಕ್ ಆವರಣದಲ್ಲಿ ತಾಲೂಕಾ ತಹಶಿಲ್ದಾರ ಶ್ರೀ ಸುಹಾಸ ಇಂಗಳೆ ಅವರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಖೆಯನ್ನು ಶಿಲ್ಪಕಲೆಯ ನಾಡು ಐತಿಹಾಸಿಕ ಬಾದಾಮಿ ಪರಿಸರದಲ್ಲಿ ಆರಂಭಿಸಬೇಕೆAದು ಅಂದಿನ ಸಚಿರಾದ ಎಂ.ಪಿ.ಪ್ರಕಾಶ, ಲೀಲಾವತಿ ಪ್ರಸಾದ ಸಹಕಾರದೊಂದಿಗೆ ಅಂದಿನ ವಿವಿ ಕುಲಪತಿ ಡಾ.ಎಂಎA.ಕಲಬುರ್ಗಿ ಅವರ ಆಶಯದಂತೆ ೧೯೯೯ ರಲ್ಲಿ ವಾಸ್ತಶಿಲ್ಪ,ಪ್ರತಿಮಾಶಾಸ್ತ್ರ,ಚಿತ್ರಕಲಾ ವಿಭಾಗವನ್ನು ಆರಂಭಿಸಿದರು. ದಶಕಗಳ ಕಾಲ ಕಲಾ ವಿದ್ಯಾರ್ಥಿಗಳು ವೈವಿಧ್ಯಮಯವಾದ ಸಾಂಪ್ರದಾಯಿಕ, ಆಧುನಿಕ ಮೂರ್ತಿ ಶಿಲ್ಪವನ್ನು ಶಿಲೆ,ಲೋಹ,ಕಾಷ್ಟದಲ್ಲಿ ರೂಪಿಸಿದರು.ಕುಲಪತಿಗಳಾದ ಡಾ.ಚಂದ್ರಶೇಖರ್ ಕಂಬಾರ ಹಾಗೂ ನಾಡಿನ, ಅಂತರರಾಷ್ಟ್ರೀಯ ಮಟ್ಟದ ಹಿರಿಯ ಕಲಾವಿದರು ಭೇಟಿ ನೀಡಿದರು. ಸಾವಿರಾರು ಶಿಲ್ಪಿಗಳು ಬದುಕನ್ನು ಕಟ್ಟಿಕೊಂಡಿದ್ದಾರೆ.ನAತರ ಬಂದ ಅಧಿಕಾರಿಗಳು ವಾಸ್ತುಶಿಲ್ಪ, ಪ್ರತಿಮಾಶಾಸ್ತ್ರ ಕೈಬಿಟ್ಟು ಚಿತ್ರಕಲೆಯನ್ನು ಮಾತ್ರ ಉಳಿಸಿದ್ದಾರೆ. ಇದನ್ನೂ ಈಗ ಎತ್ತಂಗಡಿ ಮಾಡುವ ಹುನ್ನಾರು ನಡೆದಿದೆ. ಐತಿಹಾಸಿಕ ಬಾದಾಮಿಯಲ್ಲಿ ಲಲಿತ ಕಲಾ ವಿವಿ ೧೦ ವರ್ಷಗಳ ಹಿಂದೆಯೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಂಜೂರು ಮಾಡಿದರು.ಇದುವರೆಗೂ ಆರಂಭವಾಗಲಿಲ್ಲ. ಜನಪ್ರತಿನಿಧಿಗಳ, ಅಧಿಕಾರಿಗಳ,ಕಲಾ ವಿದ್ವಾಂಸರ ಮತ್ತು ಸ್ಥಳೀಯರ ಇಚ್ಛಾಶಕ್ತಿ ಕೊರತೆಯಿಂದ ಲಲಿತ ಕಲಾ ವಿವಿ ಕೈಬಿಟ್ಟು ಹೋಯಿತು. ಉತ್ತರ ಕರ್ನಾಟಕದ ಅಭಿವೃದ್ಧಿ ಕೆಲವರಿಗೆ ಧ್ವನಿಯೇ ಬರುತ್ತಿಲ್ಲ. ಸ್ಥಳೀಯ ಸಂಘಟನೆಗಳ ಹೋರಾಟಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸಹಕಾರದ ಕೊರತೆ. ಈಗಾದರೂ ಉಳಿದಿರುವ ಒಂದು ಚಿತ್ರಕಲಾ ವಿಭಾಗವನ್ನಾದರೂ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದು ಹೋರಾಟ ಸಮಿತಿಯು ಹೇಳಿಕೊಂಡಿದೆ.. ಈ ಹೋರಾಟ ದಲ್ಲೀ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ:- ರಾಜೇಶ ದೇಸಾಯಿ ಬಾದಾಮಿ

error: