ಮಳವಳ್ಳಿ : ವೇಗವಾಗಿ ಬರುತ್ತಿದ್ದ ಗೂಡ್ಸ್ ಟೆಂಪೋವೊAದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದೇ ಅಲ್ಲದೆ ವಿದ್ಯುತ್ ಮಾರ್ಗದ ತಂತಿಗಳು ಸಹ ತುಂಡಾಗಿರುವ ಘಟನೆ ಪಟ್ಟಣದ ಕನಕಪುರ ರಸ್ತೆಯ ಶಾಂಭವಿ ಗ್ಯಾಸ್ ಏಜೆನ್ಸಿ ಮುಂಭಾಗ ಜರುಗಿದೆ.
ಇಂದು ಮುಂಜಾನೆ ೪.೩೦ ರ ಸಮಯದಲ್ಲಿ ಕನಕಪುರ ಕಡೆಯಿಂದ ಪಟ್ಟಣದ ಕಡೆಗೆ ಬರುತ್ತಿದ್ದ ಗೂಡ್ಸ್ ಟೆಂಪೊ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಕನ ನಿಯಂತ್ರಣ ತಪ್ಪಿ ಚೇತನ್ ಕಾಂಪ್ಲೆಕ್ಸ್ ಮುಂಭಾಗದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಕಂಬ ತುಂಡಾಗಿ ಉರುಳಿ ಬಿದ್ದಿರುವುದೇ ಅಲ್ಲದೆ ಈ ಮಾರ್ಗದ ವಿದ್ಯುತ್ ತಂತಿಗಳು ತುಂಡಾಗಿದ್ದು ತಂತಿಗಳು ತುಂಡಾಗಿ ಟೆಂಪೋ ಮೇಲೆ ಬಿದ್ದಾಗ ವಿದ್ಯುತ್ ಸಂಪರ್ಕ ಇದ್ದಾಗಲೂ ಯಾವುದೇ ಅನಾಹುತ ಸಂಭವಿಸಿದೆ ಟೆಂಪೋ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ.
ಈ ಅವಗಢದ ನಂತರ ಪಟ್ಟಣಕ್ಕೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಬೆಳಂಬೆಳಿಗ್ಗೆಯೇ ವಿದ್ಯುತ್ ಸ್ಥಗಿತಗೊಂಡಿದ್ದರಿAದ ನಾಗರೀಕರು ಪರಿತಪಿಸುವ ಸ್ಥಿತಿ ನಿರ್ಮಾಣ ವಾಗಿತ್ತು.
ಘಟನೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಯಮದೂರು ಸಿದ್ದರಾಜು, ಸಮಾಜ ಸೇವಕ ನೆಟ್ಕಲ್ ಚೇತನ್ ಕುಮಾರ್ ಅವರುಗಳು ಈ ಹೆದ್ದಾರಿ ತಿರುವು ರಸ್ತೆ ಬದಿಯಲ್ಲೇ ಮರಗಳು ಹಾಗೂ ವಿದ್ಯುತ್ ಕಂಬಗಳಿದ್ದು ಆಗಿಂದಾಗ್ಗೆ ಇಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ ಆದ್ದರಿಂದ ಈ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬ ಹಾಗೂ ಮರಗಳನ್ನು ರಸ್ತೆ ಬದಿಯಿಂದ ತೆರವು ಗೊಳಿಸುವಂತೆ ಸಂಬAಧಿಸಿದ ಇಲಾಖೆಯವರನ್ನು ಆಗ್ರಹಿಸಿದರು.
ಬೆಳೆಗ್ಗೆ ೯ ಗಂಟೆ ನಂತರ ಸ್ಥಳಕ್ಕೆ ಆಗಮಿಸಿದ ಚೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ