December 22, 2024

Bhavana Tv

Its Your Channel

ಕೆರೆಯಲ್ಲಿ ಈಜಲು ಹೋದ ಯುವಕ ಸಾವು

ಮಳವಳ್ಳಿ : ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ಈಜಲು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆಯೊಂದು ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಎಂ ಕಾಗೇಪುರ ಗ್ರಾಮದಲ್ಲಿ ಜರುಗಿದೆ.
ಕರಡಗೆರೆ ಗ್ರಾಮದ ಮಹದೇವಯ್ಯ ಅವರ ಪುತ್ರ ೨೧ ವರ್ಷ ವಯಸ್ಸಿನ ಬಸಂತ್ ಎಂಬಾತನೇ ಮೃತಪಟ್ಟ ದುರ್ದೈಯಾಗಿದ್ದು
ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಈತ ಊಟ ಮುಗಿಸಿದ ಬಳಿಕ. ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ .
ಸ್ಥಳಕ್ಕೆ ಕಿರುಗಾವಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಶವದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬoಧ ಕಿರುಗಾವಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: