December 20, 2024

Bhavana Tv

Its Your Channel

ಕಾವಲುಪಡೆಯ ತಾಲೂಕು ಘಟಕದ ವತಿಯಿಂದ ಬೆಳಗಾವಿ ಎಂ .ಇ .ಎಸ್. ಪುಂಡರ ವಿರುದ್ಧ ಆಕ್ರೋಶ

ಗುಂಡ್ಲುಪೇಟೆ. ಕಾವಲುಪಡೆಯ ತಾಲೂಕು ಘಟಕದ ವತಿಯಿಂದ ಬೆಳಗಾವಿಯ ಕೊಲ್ಲಾಪುರದಲ್ಲಿ ಕನ್ನಡ ಧ್ವಜ ವನ್ನೂ ಸುಟ್ಟು ಹಾಕಿ ಅಪಮಾನ ಮಾಡಿರುವುದನ್ನು ಖಂಡಿಸಿ ಕಾವಲುಪಡೆ ಸಂಘಟನೆ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿAದ ಹೊರಟು ಎಂಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ನಂತರ ಮಾತನಾಡಿದ ಮಾನವ ಬಂದುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಸ್ ಮಾಡ್ರಳ್ಳಿ ಮಾತನಾಡಿ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಮತ್ತೆ ಅದರ ಪ್ರತಿರೋಧವಾಗಿ ಕನ್ನಡಿಗರಿಗೆ ಮತ್ತು ಕನ್ನಡಪರ ಹೋರಾಟಗಾರರಿಗೆ ಮಸಿಯನ್ನು ಬಳಲಿದ್ದಾರೆ. ಅಲ್ಲಿನ ಜಿಲ್ಲಾಡಳಿತ ಕನ್ನಡ ಪರ ಹೋರಾಟ ಮತ್ತು ಕನ್ನಡಿಗರ ಮೇಲೆ ಕೇಸುಗಳನ್ನು ದಾಖಲಿಸಿದ್ದಾರೆ. ಅದನ್ನು ಹಿಂಪಡೆಯಬೇಕು. ಎಂದರು.
ನAತರ ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ ಮಾತನಾಡಿ ಕನ್ನಡ ಧ್ವಜವನ್ನು ಸುಟ್ಟು ಹಾಕಿ ಎಂಎಸ್ ಪುಂಡರು ಗಳು ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಇಲ್ಲದಿದ್ದರೆ ಕನ್ನಡಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು
ನAತರ ಮಾತನಾಡಿದ ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಲಿಕ್ ಮಾತನಾಡಿ ಕನ್ನಡ ಧ್ವಜವನ್ನು ಸುಟ್ಟುಹಾಕಿರುವ ಪುಂಡರಗಳಿಗೆ ಶಿಕ್ಷೆ ಆಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾವಲುಪಡೆ ರಾಜ್ಯದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ದಂಡಾಧಿಕಾರಿಗಳಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಈ ಮುಖಾಂತರ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಮಲಿಕ್, ಕಾರ್ಯದರ್ಶಿಯಾದ ಮುಬಾರಕ್, ಇಲಿಯಾಸ್, ವೆಂಕಟೇಶ್ ಗೌಡ್ರು, ಶಕೀಲ್, ಸಾಧಿಕ್ ಪಾಶ, ಅಬ್ದುಲ್ ರಶೀದ್, ಮಿಮಿಕ್ರಿ ರಾಜು , ಹೆಚ್ ರಾಜು, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ ,ತಾಲೂಕು ಸಂಚಾಲಕರಾದ ಆರ್ ಸೋಮಣ್ಣ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು
ವರದಿ ; ಸದಾನಂದ ಕನ್ನೇಗಾಲ ಗುಂಡ್ಲಪೇಟೆ

error: