December 22, 2024

Bhavana Tv

Its Your Channel

ಸುಳ್ಳು ಜಾತಿ ಪ್ರಮಾಣ ಪತ್ರ-ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ದಲಿತ ಮುಖಂಡರಿಂದ ಪ್ರತಿಭಟನೆ

ಟ್ಕಳ: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟದ ಭಟ್ಕಳದ ಘಟಕದ ಸದಸ್ಯರು ಜಾಲಿ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ಆರಂಭಿಸಿದ್ದಾರೆ.

ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿತ್ತು. ಗುರುವಾರ ನಾಮಪತ್ರ ಪರೀಶೀಲನೆ ನಡೆಯುತಿತ್ತು. ಈ ಸಂದರ್ಬದಲ್ಲಿ ಆಗಮಿಸಿದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟದ ಭಟ್ಕಳದ ಘಟಕದ ಸದಸ್ಯರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಅಭ್ಯರ್ಥಿಗಳು ಹಳೆಯ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ. ಅದರಲ್ಲಿ ಆರ್‌ಡಿ ಸಂಖ್ಯೆ ದಾಖಲಾಗಿಲ್ಲ ಆದ್ದರಿಂದ ಅವರ ನಾಮಪತ್ರ ತೀರಸ್ಕಾರಗೊಳಿಸಬೇಕು ಎಂದು ಚುನಾವಣಾ ಅಧಿಕಾರಿ ದೇವಿದಾಸ ಮೊಗೇರ ಅವರನ್ನು ಆಗ್ರಹಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚುನಾವಣಾ ಅಧಿಕಾರಿ ದೇವಿದಾಸ ಮೊಗೇರ ಇದಕ್ಕೆ ಸೂಕ್ತ ದಾಖಲೆ ನೀಡಿದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಚುನಾವಣಾ ಇಲಾಖೆಯ ಮಾರ್ಗಸೂಚಿ, ನಿಯಮಗಳ ಅನುಸಾರ ಜಾತಿ ಪ್ರಮಾಣ ಪತ್ರವನ್ನು ಸಿಂಧುಗೊಳಿಸಲಾಗಿದೆ. ಒಂದು ವೇಳೆ ಆಕ್ಷೇಪಣೆ ಇದ್ದರೆ ಸೂಕ್ತ ದಾಖಲೆ ಒದಗಿಸಿ ಎಂದು ಹೇಳಿದ್ದಾರೆ.
ಚುನಾವಣೆ ಅಧಿಕಾರಿ ನಿರ್ಗಮಿಸಿದ ನಂತರ ಸ್ಥಳದಿಂದ ಕದಲದ ಪ್ರತಿಭಟನಾಕಾರರು ತಹಶೀಲ್ದಾರ ಸ್ಥಳಕ್ಕೆ ಬಂದು ನ್ಯಾಯ ನೀಡುವಂತೆ ಆಗ್ರಹಿಸಿದರು. ಸ್ಥಳದಲ್ಲೆ ಇದ್ದ ಸಿಪಿಐ ದಿವಾಕರ ಪ್ರತಿಭಟನಾಕಾರರ ಮನವೊಲಿಸಿ ಕಛೇರಿಯಿಂದ ಹೊರಗೆ ಕಳುಹಿಸುವಲ್ಲಿ ಸಫಲರಾದರು ಚುನಾವಣಾ ಅಧಿಕಾರಿಯ ಮಾತಿಗೆ ಸಮಾಧಾನ ಗೊಳ್ಳದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟದ ಭಟ್ಕಳದ ಘಟಕದ ಸದಸ್ಯರು ಪ್ರತಿಭಟನೆ ಆರಂಬಿಸಿದ್ದು ನಮಗೆ ನ್ಯಾಯ ದೊರಕುವ ವರೆಗೂ ಇಲ್ಲಿಂದ ಕದಲುವದಿಲ್ಲ ಎಂದು ಜಾಲಿ ಒಟ್ಟಣ ಪಂಚಾಯಿತಿ ಎದುರು ಧರಣಿ ನಿರತರಾಗಿದ್ದಾರೆ. ನಾರಾಯಣ ಶಿರೂರು, ದಿನೇಶ ಪಾವಸ್ಕರ, ಮಾರುತಿ ಪಾವಸ್ಕರ, ನರಸಿಂಹ ಶಿರಾಲಿಕರ, ಕಿರಣ ಶಿರೂರು, ಮಹೇಶ ಪಾಲೇಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

error: