December 22, 2024

Bhavana Tv

Its Your Channel

ನಾಡೋಜ ಡಾ. ಸಿದ್ದಲಿಂಗಯ್ಯ ರವರ ಸ್ಮರಣಾರ್ಥ ನುಡಿ ನಮನ ಹಾಗೂ ಸಂವಿಧಾನ ಕುರಿತ ವಿಚಾರಣೆ ಕಾರ್ಯಕ್ರಮ

ಮಳವಳ್ಳಿ : ದೇಶದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ಬದಲಾಯಿಸುವ ಮೂಲಕ ಬಹುಸಂಖ್ಯಾತ ದಲಿತ ಸಮುದಾಯವನ್ನು ಸರ್ವನಾಶ ಮಾಡುವ ಷಡ್ಯಂತ್ರ ನಡೆದಿದೆ ಎಂದು ಮೈಸೂರಿನ ಉರಿ ಪೆದ್ದಲಿಂಗ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿ ಪಂಗಡದ ನೌಕರರ ಸಂಘದ ತಾಲ್ಲೂಕು ಶಾಖೆ ಆಯೋಜಿಸಿದ್ದ ನಾಡೋಜ ಡಾ. ಸಿದ್ದಲಿಂಗಯ್ಯ ರವರ ಸ್ಮರಣಾರ್ಥ ನುಡಿ ನಮನ ಹಾಗೂ ಸಂವಿಧಾನ ಕುರಿತ ವಿಚಾರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ನಾಲ್ವರು ಸಂಸದರು ಮುಂದಿನ ಹೊಸ ಸಂಸತ್ ಅಧಿಕಾರಕ್ಕೆ ಬರುತ್ತಿದ್ದಂತೆ ಹೀಗಿನ ಸಂವಿಧಾನ ರದ್ದು ಪಡಿಸಿ ಹೊಸ ಸಂವಿಧಾನ ಜಾರಿ ಮಾಡುವುದಾಗಿ ಘೋಷಿಸಿ ದ್ದಾರೆ ಇದು ಶೋಷಿತ ಸಮುದಾಯಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದ ಅವರು ಜೊತೆಗೆ ಮುಂದಿನ ೨೦೨೪ ರ ನಂತರ ಎಲ್ಲಾ ಇಲಾಖೆಗಳ ಮುಂದೆ ಹಾಕಲಾಗಿರುವ ಭಾರತ ಸರ್ಕಾರದ ಬೋರ್ಡ್ ಮಾಯವಾಗಿ ಗುತ್ತಿಗೆ ಪಡೆದ ಕಂಪನಿಗಳ ಬೋರ್ಡ್ ಬರಲಿದೆ ಎಂದು ಹೇಳಿದರು.
ಈಗಾಗಲೇ ಲಕ್ಷಾಂತರ ಹುದ್ದೆಗಳು ನಾಶವಾಗಿದೆ, ಇಲಾಖೆ ನೌಕರಿ ಮರೀಚಿಕೆಯಾಗಲಿದೆ, ಆ ಮೂಲಕ ಶೋಷಿತ ಸಮುದಾಯಗಳಿಗೆ ಯಾವುದೇ ಉದ್ಯೋಗ ಅವಕಾಶ ಸಿಗದಂತೆ ಮಾಡಲಾಗುತ್ತಿದೆ , ಉತ್ತರ ಭಾರತದಲ್ಲಿ ದಲಿತಳು ಎಂಬ ಕಾರಣಕ್ಕೆ ಸಮವಸ್ತ್ರ ದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಯನ್ನು ದೇವಾಲಯದಿಂದ ಹೊರಹಾಕಲಾಗಿದೆ, ದಲಿತ ಮಗುವೊಂದು ದೇವಾಲಯ ಪ್ರವೇಶ ಮಾಡಿತು ಎಂಬ ಕಾರಣಕ್ಕೆ ಆ ಕುಟುಂಬಕ್ಕೆ ೨೫ ಸಾವಿರ ರೂ ದಂಡ ಹಾಕಲಾಗಿದೆ, ತಮಿಳು ನಾಡಿನಲ್ಲಿ ವಾಚ್ ಕಟ್ಟಿದ ಎಂಬ ಕಾರಣಕ್ಕೆ ಇಂಜಿನಿಯರ್ ವಿದ್ಯಾರ್ಥಿ ಕೈ ಕತ್ತರಿಸಲಾಗಿದೆ.
ಈ ಎಲ್ಲಾ ಘಟನೆಗಳು ದಲಿತ ಸಮುದಾಯವನ್ನು ನಿರ್ನಾಮ ಮಾಡುವ ಸಂಚು ವ್ಯವಸ್ಥಿತವಾಗಿ ನಡೆದಿದ್ದು ಈ ಬಗ್ಗೆ ಎಲ್ಲಾ ಶೋಷಿತ ಸಮುದಾಯ ಜಾಗೃತ ರಾಗದಿದ್ದರೆ ಭಾರಿ ಅನಾಹುತ ಅನುಭವಿಸ ಬೇಕಾಗುವುದು ಎಂದು ಎಚ್ಚರಿಸಿದರು.
ನೀವೃತ್ತ ಐ ಎಫ್ ಎಸ್ ಅಧಿಕಾರಿ ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು.
ಹೆಸರಾಂತ ಚಿಂತಕ ಪ್ರೊ ಕಾಳೇಗೌಡ ನಾಗವಾರ, ಲೋಕೋಪಯೋಗಿ ಇಲಾಖೆಯ ಎಇಇ ಪುಟ್ಟಸ್ವಾಮಿ, ಚೆಸ್ಕಾಂ ನ ಎಇಇ ಪ್ರೇಮ್ ಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಲ್ಲಿಕಾರ್ಜುನಯ್ಯ, ಡಾ ಬಿ ಆರ್ ಅಂಬೇಡ್ಕರ್ ಪ ಜಾತಿ, ಪ ಪಂಗಡದ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜು ಮತ್ತಿತರರು ಹಾಜರಿದ್ದರು.
ವಕೀಲರಾದ ರಾಜವಂಶಿ ಸಂವಿಧಾನ ಕುರಿತು ಮಾತನಾಡಿದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ

error: