December 22, 2024

Bhavana Tv

Its Your Channel

ದೇವಾಲಯದ ಗೇಟ್ ಮುರಿದು ಬಿದ್ದು ಅರ್ಚಕರ ಮಗು ಸಾವು

ಮಳವಳ್ಳಿ ; ದೇವಾಲಯದ ಗೇಟ್ ಮುರಿದು ಬಿದ್ದು ಅರ್ಚಕರ ಮಗುವೊಂದು ಸಾವನ್ನಪ್ಪಿರುವ ದುರಂತ ಘಟನೆಯೊಂದು ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಗುಂಡಾಪುರ ಗ್ರಾಮದಲ್ಲಿ ಜರುಗಿದೆ.
ಈ ಗ್ರಾಮದ ಬೆಟ್ಟದ ಅರಸಮ್ಮ ದೇವಾಲಯದ ಅರ್ಚಕ ಚಂದ್ರು ಅವರ ಮಗನಾದ ೮ ವರ್ಷದ ಭುವನ್ ಎಂಬಾತನೇ ಮೃತಪಟ್ಟ ದುದೈವಿಯಾಗಿದ್ದು ನೆನ್ನೆ ಸಾಯಂಕಾಲ ೬.೩೦ ರ ಸಮಯದಲ್ಲಿ ಜರುಗಿದೆ.
ಕಳೆದ ೨೦ ದಿನಗಳಿಂದ ದೇವಾಲಯದ ಆವರಣದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಈ ಪೂಜೆಯ ಅಂತಿಮ ದಿನವಾದ ನೆನ್ನೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯ ಏರ್ಪಾಡಾಗಿತ್ತು ಎನ್ನಲಾಗಿದೆ.
ಈ ನಡುವೆ ದೇವಾಲದ ಗೇಟ್ ಗೆ ಹೊಸದಾಗಿ ಅಳವಡಿಸಿದ್ದ ಗೇಟ್ ಮೇಲೆ ನಿಂತ ಭುವನ್ ಹಿಂದೆ ಮುಂದೆ ತೂಗುಯ್ಯಾಲೆ ಆಡುತ್ತಿರುವಾಗಲೇ ಗೇಟ್ ಮಗುವಿನ ಮೇಲೆ ಕಳಚಿ ಬಿದ್ದು ಗೇಟ್ ನ ಕಬ್ಬಿಣದ ರಾಡ್ ಆತನ ತಲೆಗೆ ಬಡಿದು ತೀವ್ರವಾಗಿ ಗಾಯಗೊಂಡ ಮಗು ಮೃತಪಟ್ಟಿತೆಂದು ವರದಿಯಾಗಿದೆ.
ಈ ಸಂಬAಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ವರದಿ ; ಮಲ್ಲಿಕಾರ್ಜುನ ಸ್ವಾಮಿ, ಮಳವಳ್ಳಿ

error: