ಮಳವಳ್ಳಿ ; ಚಿಲ್ಲಾಪುರ ಗ್ರಾಮದ ವಾಸಿ ಕುರಿಸಿದ್ದಯ್ಯ ಎಂಬುವರ ಹಸುವಿನ ಕರುವನ್ನು ಶುಕ್ರವಾರ ರಾತ್ರಿ ಚಿರತೆ ಒಂದು ಕತ್ತಿನ ಭಾಗ ಕಚ್ಚಿ ಹಿಡಿದು ಪೋದೆವೊಂದರ ಒಳಗೆ ಎಳೆದೊಯ್ದು ಸಾಯಿಸಿ ತಿಂದಿರುವ ಘಟನೆ ಜರುಗಿದೆ.
ಚಿಲ್ಲಾಪುರ ಗ್ರಾಮದ ವಾಸಿ ಕುರಿಸಿದ್ದಯ್ಯ ಮಾತನಾಡಿ. ನಮ್ಮ ಶೆಡ್ಡಿನಲ್ಲಿ ಇದ್ದ ಸುಮಾರು ೧೦ ಸಾವಿರ ರೂ ಬೆಲೆ ಬಾಳುವ ಹಸುವಿನ ಕರುವನ್ನು ಚಿರತೆ ಶೆಡ್ಡಿನ ಒಳಗೆ ನುಗ್ಗಿ ಕರುವನ್ನು ಸಾಯಿಸಿ ತಿಂದಿರುವುದರಿAದ ನನಗೆ ನಷ್ಟವುಂಟಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.
ವಿಷಯ ತಿಳಿದ ಮೇಲೆ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸೂಕ್ತ ಪರಿಹಾರವನ್ನು ಕೊಡುಸುವುದಾಗಿ ತಿಳಿಸಿದರು.
ಗ್ರಾಮದ ವಾಸಿ ಶಿವರಾಜ್ ಎಂಬುವವರು ಮಾತನಾಡಿ ಮೂರು ದಿನಗಳ ಹಿಂದೆ ನಮ್ಮ ಗ್ರಾಮದವರು ಕುರಿಗಳನ್ನು ಮೇಯಿಸಿಕೊಂಡು ಬರುತ್ತಿದ್ದಾಗ. ಸುಮಾರು ಸಾಯಂಕಾಲ ೫ ಗಂಟೆ ಸಮಯದಲ್ಲಿ ಚಿರತೆ ಒಂದು. ನಾವು ನೋಡುತ್ತಿದ್ದಂತೆ ಒಂದು ಕುರಿಯನ್ನು ಎತ್ತಿಕೊಂಡು ಓಡಿಹೋಯಿತು. ನಾವು ಏನು ಮಾಡಲು ಆಗದೆ ಹೆದರಿ ಹೋದವು ಎಂದರು.
ತೊರೆಕಾಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ರವಿ ಮಾತನಾಡಿ. ನಮ್ಮ ಚಿಲ್ಲಾಪುರ, ಮತ್ತು ಓಬಿ ದೊಡ್ಡಿ ಗ್ರಾಮದ ಸುತ್ತಮುತ್ತ ಇರುವ ಹಳ್ಳದಲ್ಲಿ ಚಿರತೆಗಳು ವಾಸವಾಗಿದ್ದು ದಿನನಿತ್ಯ ನಮ್ಮ ಸಾಕುಪ್ರಾಣಿಗಳನ್ನು ಬೇಟೆಯಾಡುತ್ತಿರುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಸಂಬAಧಪಟ್ಟ ಅರಣ್ಯ ಅಧಿಕಾರಿಗಳಿಗೆ ಚಿರತೆ ಹಿಡಿಯಲು ಬೊನ್ ಮಡಗಿ ಚಿರತೆಯನ್ನು ಹಿಡಿಯುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ವರದು ; ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ,
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ