ಮಳವಳ್ಳಿ : ಕೇಂದ್ರೀಯ ಜಲ ಮಂಡಳಿ ತಮಿಳು ನಾಡಿಗೆ ನಿಗದಿ ಪಡಿಸಿರುವ ನೀರನ್ನು ಹರಿಬಿಟ್ಟ ನಂತರದಲ್ಲಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಸಲುವಾಗಿ ಮೇಕದಾಟು ಅಣೆಕಟ್ಟೆಯನ್ನು ನಿರ್ಮಿಸಲಾಗುತ್ತಿದ್ದು ಆದರೆ ಈ ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯವಾಗಿ ತಡೆಯೊಡ್ಡುತ್ತಿದೆ ಎಂದು ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ತಮಿಳುನಾಡು ವಿರುದ್ಧ ಹರಿಹಾಯ್ದಿದ್ದಾರೆ.
ಮೇಕೆದಾಟು ಯೋಜನೆ ಪರ ಜನಾಂದೋಲನ ರೂಪಿಸುವ ಸಲುವಾಗಿ ಇಂದಿನಿAದ ಬರುವ ೨೭ ರ ವರೆಗೆ ಚಾಮರಾಜನಗರದಿಂದ ಬೆಂಗಳೂರು ವರೆಗೆ ಹಮ್ಮಿಕೊಂಡಿರುವ ಜಾಥಾ ಕಾರ್ಯಕ್ರಮ ಕ್ಕೆ ತೆರಳುವ ಮಾರ್ಗ ಮಧ್ಯೆ ನೆನ್ನೆ ಸಂಜೆ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಅವರು ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಅನಗತ್ಯವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರನ್ನು ಮೇಕೆದಾಟು ಯೋಜನೆ ಮೂಲಕ ಸುಮಾರು ೬೫ ಟಿ ಎಂ ಸಿ ನೀರನ್ನು ತಡೆ ಹಿಡಿದು ರಾಮನಗರ, ಚನ್ನಪಟ್ಟಣ ಮುಂತಾದ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಗೆ ಈ ಭಾಗದ ಅಂತರ್ ಜಲ ಸಹ ವೃದ್ದಿಯಾಗುತ್ತದೆ ಆದರೆ ಇಂತಹ ಯೋಜನೆಗೆ ಕಳೆದ ಹತ್ತಾರು ವರ್ಷಗಳಿಂದ ತಡೆಯೊಡ್ಡುವ ಮೂಲಕ ತಮಿಳು ನಾಡು ನಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿದೆ ಎಂದು ಕಿಡಿ ಕಾರಿದರು.
ಕೇಂದ್ರೀಯ ಜಲ ಮಂಡಳಿಯಲ್ಲಿ ತಮಿಳರೇ ತುಂಬಿ ಹೋಗಿದ್ದು ಕರ್ನಾಟಕ್ಕೆ ನ್ಯಾಯ ಸಿಗುವುದು ಕಷ್ಟ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಗೆ ಒಂದು ಮಾತು ಹೇಳಿದರೆ ಸಾಕು ಯೋಜನೆಗೆ ಕೇಂದ್ರ ಒಪ್ಪಿಗೆ ನೀಡುತ್ತದೆ ಈ ನಿಟ್ಟಿನಲ್ಲಿ ದೇವೇಗೌಡರು ಮುಂದಾಗಬೇಕು ಎಂದು ಮನವಿ ಮಾಡಿದ ರಮೇಶ್ ಗೌಡ ಅವರು ಜೊತೆಗೆ ಈ ಭಾಗದ ಎಲ್ಲಾ ಜನಪ್ರತಿನಿಧಿಗ ಳಲ್ಲಿ ಹಕ್ಕೊತ್ತಾಯ ಮಂಡಿಸುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಜನಾಂದೋಲನ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಶಿವರಾಜ್ ನಾಯಕ್. ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಉಮೇಶ್, ಮುಖಂಡರಾದ ತಳಗವಾದಿ ಪ್ರಕಾಶ್, ಹನುಮಂತು, ಶೆಟ್ಟಹಳ್ಳಿ ಲೋಕೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ