
ಭಟ್ಕಳ: ಕರ್ಣಾಟಕ ಬ್ಯಾಂಕ್ ತಂತ್ರಜ್ಞಾನದಲ್ಲಿ ಮುಂದೆ ಇದ್ದು ಈಗಾಗಲೇ ನಾವು ೨೦೨೦-೨೪ಕ್ಕೆ ಅಗತ್ಯವಾದ ತಂತ್ರಜ್ಞಾನದ ಅವಿಷ್ಕಾರದಲ್ಲಿದ್ದೇವೆ ಎಂದು ಕರ್ಣಾಟಕ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಜಗೋಪಾಲ ಅವರು ಹೇಳಿದರು.

ಅವರು ಕರ್ಣಾಟಕ ಬ್ಯಾಂಕ್ ಭಟ್ಕಳ ಶಾಖೆಯ ೪೬ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬ್ಯಾಂಕಿAಗ್ ಕ್ಷೇತ್ರದಲ್ಲಿ ಇಂದು ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆಯು ಅನಿವಾರ್ಯವಾಗಿದೆ. ನಮ್ಮ ಬ್ಯಾಂಕು ಬಹಳ ಹಿಂದೆಯೇ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದ ಅವರು ಭಟ್ಕಳ ಶಾಖೆಯು ನಡೆದು ಬಂದ ಕುರಿತು ವಿವರಿಸುತ್ತಾ ಗ್ರಾಹಕರ ಸಹಕಾರದಿಂದ ಬ್ಯಾಂಕು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಗ್ರಾಹಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಬ್ಯಾಂಕು ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲವೊಂದು ಸಾಲದ ಬಡ್ಡಿದರವನ್ನು ಕಡಿಮೆ ಇಟ್ಟಿದೆ. ಗ್ರಾಹಕರ ವ್ಯವಹಾರವನ್ನು ನೋಡಿಕೊಂಡು ಬಡ್ಡಿದರಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕೂಡಾ ಮಾಡಿಕೊಡಲು ಬ್ಯಾಂಕು ತಯಾರಿದೆ ಎಂದೂ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಶ್ರೀ ಕುಟುಮೇಶ್ವರ ಸೌಹಾರ್ಧ ಸಹಕಾರಿಯ ಅಧ್ಯಕ್ಷ ರಾಮಾ ಖಾರ್ವಿ ಬ್ಯಾಂಕ್ ಬೆಳವಣಿಗೆಗೆ ಗ್ರಾಹಕರು ನೀಡುವ ಸಹಕಾರ ಕಾರಣ. ಇಲ್ಲಿನ ಶಾಖೆಯು ಅತ್ಯಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಸಿಬ್ಬಂದಿಗಳ ಉತ್ತಮ ಸೇವೆಯಿಂದ ತಾಲೂಕಿನಲ್ಲಿ ಗ್ರಾಹಕರನ್ನು ಸೆಳೆದುಕೊಳ್ಳುವತ್ತ ಯಶಸ್ವೀಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿವೃತ್ತ ಶಾಖಾಧಿಕಾರಿ ತಿಮ್ಮಪ್ಪಯ್ಯ ಶಿರೂರು ಅವರು ಮಾತನಾಡಿ ಕರ್ಣಾಟಕ ಬ್ಯಾಂಕ್ ನಡೆದು ಬಂದ ದಾರಿಯನ್ನು ವಿವರಿಸುತ್ತಾ, ಭಟ್ಕಳ ಶಾಖೆಯ ಆರಂಭದಿAದ ಇಲ್ಲಿಯ ತನಕದ ಬೆಳವಣಿಗೆಯನ್ನು ವಿವರಿಸಿದರು. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬ್ಯಾಂಕಿನ ಶಾಖೆಯನ್ನು ಗಣಕೀಕೃತಗೊಳಿಸಿದ್ದನ್ನು ಸ್ಮರಿಸಿದ ಅವರು ಗ್ರಾಹಕರ ಸಹಕಾರದಿಂದ ಶಾಖೆ ೪೬ ವರ್ಷಗಳ ಕಾಲ ಬೆಳೆದು ಬಂದಿದ್ದು ಪ್ರೌಢಾವಸ್ಥೆಯಲ್ಲಿದೆ ಎಂದರು.
ಗ್ರಾಹಕರುಗಳಾದ ಗುತ್ತಿಗೆದಾರ ಟಿ.ಡಿ. ನಾಯ್ಕ, ಎಂ.ಜಿ. ಎಂಟರ್ಪ್ರೈಸಸ್ ಮಾಲಕ ಪರಮೇಶ್ವರ ಭಟ್ಟ, ನ್ಯಾಯವಾದಿ ಜೆ.ಡಿ. ಭಟ್ಟ, ಹೋಟೆಲ್ ೪ ಸೀಸನ್ ಪಾಲುದಾರ ನರೇಶ ಶೆಟ್ಟಿ, ಹಿರಿಯ ಗ್ರಾಹಕ ಹಾಗೂ ಕಟ್ಟಡದ ಮಾಲಿಕ ರಾಧಾಕೃಷ್ಣ ಭಟ್ಟ, ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಾಯಲದ ಕಾರ್ಯದರ್ಶಿ ಪ್ರಕಾಶ ಎನ್. ಭಟ್ಟ ಸಾಲೆಮನೆ ಮುಂತಾದವರು ಮಾತನಾಡಿದರು.
ಶಾಖೆಯ ಪ್ರಬಂಧಕ ಸುನಿಲ್ ಪೈ, ಹಿಂದಿನ ಶಾಖಾಧಿಕಾರಿ ವಿನಾಯಕ ಮೊಗೇರ, ಸಿಬ್ಬಂದಿಗಳು, ಬ್ಯಾಂಕಿನ ಚಾನಲ್ ಪಾರ್ಟನರ್ ಎಲ್.ಐ.ಸಿ. ಶಾಖಾಧಿಕಾರಿ ಗುರುದತ್ತ ನಾಯಕ, ಭಾರತಿ ಎಕ್ಸಾದ ರಘುನಂದನ್ ಮುಂತಾದವರು ಉಪಸ್ಥಿತರಿದ್ದರು

.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ