December 22, 2024

Bhavana Tv

Its Your Channel

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಜೂನಿಯರ್ ಕಿಕ್ ಬಾಕ್ಸಿಂಗ್‌ನಲ್ಲಿ ಪ್ರಥಮ ಬಹುಮಾನ ಪಡೆದ ಮೈಸೂರಿನ ಹೃತಿಕ್

ಮೈಸೂರು: ಇದೇ ತಿಂಗಳು 21 ರಿಂದ 25ರ ತನಕ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಜೂನಿಯರ್ ಕಿಕ್ ಬಾಕ್ಸಿಂಗ್‌ನಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಗ್ರಾಮದ ನಂದೀಶ್ ಮತ್ತು ಪವಿತ್ರರವರ ಸುಪುತ್ರ ಹೃತಿಕ್ ಪ್ರಥಮ ಬಹುಮಾನ ಪಡೆದಿರುತ್ತಾನೆ.
ಹೃತಿಕ್‌ರವರ ತಂದೆ ನಂದೀಶ್ ಮಾತನಾಡಿ ಈಗಿನ ಕಾಲದ ಮಕ್ಕಳು ಜಗಜ್ಯೋತಿ ಬಸವೇಶ್ವರರ ಆದರ್ಶವನ್ನು ಮೈಗೂಡಿಸಿಕೊಂಡರೆ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ನಮ್ಮ ಹುಡುಗನು ಉದಾಹರಣೆಯಾಗಿದ್ದಾನೆ ಎಂದರು.
ಈ ಸಂದರ್ಭದಲ್ಲಿ ಗೌಡಿಕೆ ಗುರುಸಿದ್ದಪ್ಪನವರ ಕುಟುಂಬವರ್ಗ ಹೃತಿಕ್ ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ :- ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: