ಮಳವಳ್ಳಿ : ಮಾನವೀಯ ಮೌಲ್ಯಗಳು ಮರೆಯಾಗಿ ಮತ ಧರ್ಮಗಳ ಹೆಸರಿನಲ್ಲಿ ದ್ವೇಷ-ಅಸೂಯೆ ಬಿತ್ತುತ್ತಿರುವ ಕಾಲಘಟ್ಟದಲ್ಲಿ ಕುವೆಂಪುರವರ ವಿಶ್ವಮಾನವ ಸಂದೇಶ ಬಹಳ ಪ್ರಸ್ತುತವಾಗಿದೆ ಕುವೆಂಪುರವರ ಸಂದೇಶವನ್ನು ಅರಿತು ಬಾಳಿದರೆ ನಾವು ಮನುಷ್ಯ ರಾದುದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ತಿಳಿಸಿದರು
ಅವರು ಮಳವಳ್ಳಿಯ ಬಿ ಅರ್ ಸಿ. ಕೇಂದ್ರದಲ್ಲಿ ವಿಶ್ವಮಾನವ ವಿಚಾರ ವೇದಿಕೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಕುವೆಂಪು ರವರ 118ನೇ ಜನ್ಮ ದಿನಾಚರಣೆ ಅಂಗವಾಗಿ ಕುವೆಂಪುರವರ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಮತ್ತು ನೂತನ ವರ್ಷದ ದಿನ ದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕುವೆಂಪುರವರು ಜಾತಿ. ಅಸ್ಪೃಶ್ಯತೆ .ಸಂಗಾತಿಯ ಆಯ್ಕೆ. ಪುರೋಹಿತ ಶಾಹಿಯ ಪೊಳ್ಳು ಆಚರಣೆಗಳ. ಮೌಢ್ಯತೆಯ ವಿರುದ್ಧ. ಮತ ಧರ್ಮಗಳ ಹೆಸರಲ್ಲಿ ಅಶಾಂತಿ ಉಂಟು ಮಾಡುವುದನ್ನು ಬಿಟ್ಟು ಮನುಜಮತ ವಿಶ್ವಪಥದೆಡೆ ಹೆಜ್ಜೆಹಾಕಿ ಎಂದು ಅಂದೆ ಸಂದೇಶ ನೀಡಿದ್ದರು . ಅಲ್ಲದೆ ಅನ್ನಧಾತನ ಅಂತರಾಳವನ್ನ ಅರ್ಥೈಸಿಕೊಂಡು ಉಳುವ ಯೋಗಿಯ ನೋಡಿ ಅವರ ಬೇವರಿಗೆ. ಕಾಯಕಕ್ಕೆ ತಕ್ಕ ಫಲ ಸಿಗಬೇಕೆಂಬ ಹಂಬಲ ವೇಕ್ತಪಡಿಸಿದ್ದರು.
ಇಂದು ಬುದ್ದ ಬಸವ. ಕುವೆಂಪು. ಕನಕದಾಸ ಮುಂತಾದ ಮಹಾತ್ಮರನ್ನು ಒಂದೊAದು ಜಾತಿಗೆ ಶೀಮಿತಗೊಳಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ವಿಷಾದ ವೇಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದಾರ್ಥಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆಂಪದಾಸೇಗೌಡರವರು ನೆರವೇರಿಸಿದರು ಕುವೆಂಪುರವರ ಬಗ್ಗೆ ಉಪನ್ಯಾಸವನ್ನು ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರೋ. ರಘುರವರು ನೇವೇರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿಗಳಾದ ಎನ್ ಲಿಂಗರಾಜಮೂರ್ತಿ. ಬೆಳಕವಾಡಿ ಎಸ್.ರಾಜು ಕೃಷ್ಣಶೆಟ್ಟಿ .ಸಿದ್ದರಾಮಯ್ಯ. ದಯಾಶಂಕರ್. ಅತಾವುಲ್ಲಾ ಸಾಬ್. ಬಿ ಮಹದೇವು . ಸಿದ್ದರಾಜು. ಅಂದಾನಿಗೌಡ. ಭಾಗ್ಯಮ್ಮ. ಮಲ್ಲಿಕಾರ್ಜುನಸ್ವಾಮಿ. ಪ್ರೊ.ಮರಿಸ್ವಾಮಿ ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ತಮಟೆ ಕಲಾವಿದ. ದಳವಾಯಿ ಕೋಡಹಳ್ಳಿ ಶಿವಪ್ಪ ಮಹಿಳಾಪರ ಹೋರಾಟಗಾರ್ತಿ ಹಿಟ್ಟನಹಳ್ಳಿ ಕೊಪ್ಪಲು ಪ್ರೇಮ. ಯೋಗಪಟು ತಳಗವಾದಿ ಸೌಮ್ಯ. ರವರನ್ನ ಸನ್ಮಾನಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಮಾನವ ವಿಚಾರ ವೇದಿಕೆಯ ಅಧ್ಯಕ್ಷರಾದ ಸಾಹಿತಿ. ಮ.ಸಿ ನಾರಾಯಣರವರು ವಹಿಸಿದ್ದರು.
ವರದಿ:ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ