March 12, 2025

Bhavana Tv

Its Your Channel

ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚೆನ್ನಿರವರ ಸರ್ಕಾರ ವನ್ನು ವಜಾ ಮಾಡಬೇಕೆಂದು ಆಗ್ರಹಿಸಿ ಬಿ.ಜೆ.ಪಿ. ಭಟ್ಕಳ ಮಂಡಳದ ವತಿಯಿಂದ ಮನವಿ

ಭಟ್ಕಳ: ದೇಶದ ಪ್ರಧಾನ ಮಂತ್ರಿಗಳು ತಮ್ಮ ರಾಜ್ಯ ಪ್ರವಾಸದಲ್ಲಿರುವಾಗ ಅವರಿಗೆ ಭದ್ರತೆ ವದಗಿಸದೇ ಲೋಪ ಎಸಗಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚೆನ್ನಿ ಅವರ ಸರಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಭಟ್ಕಳ ಸಹಾಯಕ ಆಯುಕ್ತರ ಮೂಲಕ ಬಿ.ಜೆ.ಪಿ. ಭಟ್ಕಳ ಮಂಡಳದ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ದೇಶದ ಪ್ರಧಾನ ಮಂತ್ರಿಗಳು ಜ.5ರಂದು ಪಂಜಾಬ್ ಪ್ರವಾಸದಲ್ಲಿದ್ದಾಗ ಉದ್ದೇಶಪೂರ್ವಕವಾಗಿ ಭದ್ರತಾ ಲೋಪ ಎಸಗಿರುವುದರಿಂದಾಗಿ ಪ್ರಧಾನ ಮಂತ್ರಿಯವರ ವಾಹನವು ಪಾಕಿಸ್ಥಾನದ ಗಡಿ ಪ್ರದೇಶದಲ್ಲಿ ನಿಲ್ಲುವಂತಾಗಿ ಪ್ರಧಾನಿಯವರ ಜೀವಕ್ಕೆ ಗಂಡಾAತರ ತರಬಹುದಾದಂತಹ ದುಷ್ಟ ಕಾರ್ಯ ಮಾಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಉದ್ದೇಶಪೂರ್ವಕವಾಗಿ ನಡೆಸಿದ ಭದ್ರತಾ ವೈಫಲ್ಯ ಎಂದು ಕಂಡು ಬರುತ್ತಿದ್ದು ಸರಕಾರದ ನಡೆ ಗಂಡಾAತರಕಾರಿಯಾಗಿದೆ. ದೇಶದ ಪ್ರಧಾನಿಯವರ ಭದ್ರತೆಯ ವಿಷಯದಲ್ಲಿ ಉದ್ದೇಶ ಪೂರ್ವಕವಾಗಿ ನಿರ್ಲಕ್ಷ ತೋರಿದ ಸರಕಾರವನ್ನು ವಜಾ ಮಾಡಬೇಕು ಮತ್ತು ಈ ಷಡ್ಯಂತ್ರದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಎಸ್. ರವಿಚಂದ್ರ ಅವರು ಮನವಿಯನ್ನು ಸ್ವೀಕರಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಪ್ರಧಾನಿ ಆದ ದಿನದಿಂದಲೂ ಪ್ರಧಾನಿಯವರ ಬಗ್ಗೆ ನಕರಾತ್ಮಕ ಧೋರಣೆ ಅನುಸರಿಸುತ್ತಿದೆ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ವಿರೋಧ ಮಾಡುತ್ತಿದೆ. ಕಾಂಗ್ರೆಸ್ 2014ರಿಂದ ಇಲ್ಲಿಯ ವರೆಗೂ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಡೆದುಕೊಳ್ಳುತ್ತಿಲ್ಲ. ಪ್ರಧಾನಿಯವರು ದೇಶದ ಎಲ್ಲಾ ಜನರ ಪ್ರತಿನಿಧಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇನ್ನಾದರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪಂಜಾಬ್ ಕಾಂಗ್ರೆಸ್ ಸರಕಾರ ಪ್ರಧಾನಿಯವರು ಪ್ರವಾಸ ಮಾಡುತ್ತಿದ್ದರೂ ಅವರು ಸಂಚರಿಸುವ ರಸ್ತೆಯಲ್ಲೇ ಪ್ರತಿಭಟನೆಗೆ ಅವಕಾಶ ಕಲ್ಪಿಸಿದೆ. ಇದೊಂದು ಷಡ್ಯಂತ್ರವಾಗಿದ್ದು, ಸೂಕ್ತ ತನಿಖೆ ನಡೆಸಬೇಕು. ಕೂಡಲೇ ಪಂಜಾಬ್ ಸರಕಾರವನ್ನು ರಾಷ್ಟ್ರಪತಿಯವರು ವಜಾ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಯುವಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ರವಿ ನಾಯ್ಕ ಜಾಲಿ, ತಾಲೂಕಾ ಕಾರ್ಯದರ್ಶಿ ಭಾಸ್ಕರ ದೈಮನೆ, ಸಂತೋಷ ನಾಯ್ಕ, ಸವಿತಾ ಗೊಂಡ, ಶ್ರೇಯಾ ಮಹಾಲೆ, ಶ್ರೀಕಾಂತ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ, ಈಶ್ವರ ನಾಯ್ಕ ಬೈಲೂರು, ಸವಿತಾ ದೇವಡಿಗ, ಮಂಜುನಾಥ ನಾಯ್ಕ ಚಿತ್ರಾಪುರ, ವೆಂಕಟೇಶ ನಾಯ್ಕ ಮುಟ್ಟಳ್ಳಿ ಮುಂತಾದವರು ಉಪಸ್ಥಿತರಿದ್ದರು.

error: