March 13, 2025

Bhavana Tv

Its Your Channel

ವೆಲ್ಫೇರ್ ಪಾರ್ಟಿ ಸೇರಿದ ಜಾಲಿ ಪ.ಪಂ ಪಕ್ಷೇತರ ಸದಸ್ಯ ಇರ್ಫಾನ್‌ ಆಹ್ಮದ್

ಭಟ್ಕಳ: ಇತ್ತಿಚೆಗೆ ನಡೆದ ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದ ವಾರ್ಡ್ ನಂ.೨೦ರ ಪಕ್ಷೇತರ ಅಭ್ಯರ್ಥಿ ಇರ್ಫಾನ್ ಆಹ್ಮದ್ ಶನಿವಾರ ವೆಲ್ಫೇರ್ ಪಾರ್ಟಿಆಫ್ ಇಂಡಿಯಾ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದು ನನಗೆ ಸಂತೋಷವೆನಿಸುತ್ತಿದೆ ಎಂದರು.
ಪಕ್ಷದ ದ್ವಜವನ್ನು ನೀಡಿ ನೂತನ ಸದಸ್ಯರನ್ನು ಬರಮಾಡಿಕೊಂಡ ರಾಜ್ಯಾಧ್ಯಕ್ಷತಾಹೀರ್ ಹುಸೇನ್ ಮೌಲ್ಯಾಧಾರಿತ ರಾಜಕೀಯ ವೆಲ್ಫೇರ್ ಪಾರ್ಟಿಯ ಉದ್ದೇಶವಾಗಿದ್ದು ಈ ತತ್ವಸಿದ್ದಾಂತವನ್ನು ಒಪ್ಪಿಕೊಂಡವರಿಗೆ ಪಕ್ಷಯಾವಾಗಲೂ ಸ್ವಾಗತವನ್ನು ಕೋರುತ್ತದೆ. ನಾವು ಪಕ್ಷಕ್ಕಾಗಿಯಾವುದೇ ಸೇವೆ ಮಾಡುವುದಿಲ್ಲ ಬದಲಾಗಿ ಜನರಿಗಾಗಿ ಸೇವೆ ಮಾಡುತ್ತೇವೆ. ಸಮಾಜಕ್ಕಾಗಿ ಸೇವೆ ಮಾಡುತ್ತೇವೆ ಎಂದರು.
ಈ ಸಂದರ್ಭದಲಿ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್, ಉ.ಕ ಜಿಲ್ಲಾಧ್ಯಕ್ಷ ಡಾ.ನಸೀಮ್ ಖಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಆಸಿಫ್ ಶೇಕ್, ಕಾರ್ಯದರ್ಶಿಅಸ್ಲಂ ಶೇಕ್,ಪಕ್ಷದ ಮುಖಂಡರಾದ ಅಬ್ದುಲ ಜಬ್ಬಾರ್ ಅಸದಿ ಮತ್ತಿತರರು ಉಪಸ್ಥಿತರಿದ್ದರು.

error: