March 12, 2025

Bhavana Tv

Its Your Channel

ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಜ.೧೨ರಿಂದ ಬೃಹತ್ ಸಂಖ್ಯೆಯಲ್ಲಿ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನ- ಕೆ. ಎಂ. ಕರ್ಕಿ

ಭಟ್ಕಳ: ೧೯೭೬ರಲ್ಲಿ ಪ್ರಾಂತೀಯ ನಿರ್ಭಂದವನ್ನು ತೆಗೆದು ಹಾಕಿದ ನಂತರ ನಿರಂತರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಬಂದಿದ್ದ ಉತ್ತರ ಕನ್ನಡ ಜಿಲ್ಲಾ ಮೊಗೇರ ಜನಾಂಗದವರಿಗೆ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿರುವುದನ್ನು ವಿರೋಧಿಸಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಜ.೧೨ರಿಂದ ಬೃಹತ್ ಸಂಖ್ಯೆಯಲ್ಲಿ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದ್ದು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮೊಗೇರ ಸಮಾಜದ ಜಿಲ್ಲಾ ಅಧ್ಯಕ್ಷ ಕೆ. ಎಂ. ಕರ್ಕಿ ಹೇಳಿದರು.

ಅವರು ವೆಂಕಟಾಪುರದ ಶ್ರೀನಿವಾಸ ಸಭಾಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನಮ್ಮ ಸಮಾಜ ೧೯೭೦ರ ದಶಕದಲ್ಲಿ ಅತ್ಯಂತ ಕಡುಬಡತನದಲ್ಲಿ ಜೀವನ ಸಾಗಿಸುತ್ತಿದ್ದು ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲು ಆರಂಭಿಸಿದ ನಂತರ ಸಾಮಾಜಿಕ ಜೀವನದಲ್ಲಿ ಸುಧಾರಣೆ ಕಂಡಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ನಮ್ಮ ಸಮಾಜಕ್ಕೆ ದೊರೆತ ಸೌಲಭ್ಯವನ್ನು ವಂಚಿಸಲು ಕೆಲವು ಸಂಘಟನೆಗಳು ಅಪಪ್ರಚಾರ ಆರಂಭಿಸಿ ಅಧಿಕಾರಿಗಳ ದಿಕ್ಕು ತಪ್ಪಿಸಿದ್ದಾರೆ. ನಾವು ಮೀನುಗಾರಿಕೆ ಮಾಡಿ ಬದುಕುತ್ತೇವೆ ಎನ್ನುವುದು ಇದರಲ್ಲಿ ಮುಖ್ಯವಾಗಿದ್ದು, ಅಂದು ನಮಗೆ ಜೀವನೋಪಾಯಕ್ಕಾಗಿ ದೊರೆತಿದ್ದೇ ಮೀನುಗಾರಿಕೆಯಾಗಿತ್ತು. ಇತರೇ ಪರಿಶಿಷ್ಟ ಜಾತಿ/ಪಂಗಡದಲ್ಲಿಯೂ ಸಹ ಮೂಲ ಕಸುಬನ್ನು ಬಿಟ್ಟು ಬೇರೆ ಕಸುಬನ್ನು ಮಾಡುತ್ತಿರುವ ಉದಾಹರಣೆ ಇದೆ ಎಂದ ಅವರು ಅದೇ ಮಾನದಂಡವಲ್ಲ ಎಂದರು.
ಉ.ಕ. ಜಿಲ್ಲೆಯ ಮೊಗೇರ ಜಾತಿಯ ಬಗ್ಗೆ ಈಗಾಗಲೇ ಕರ್ನಾಟಕದ ಉಚ್ಚ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಯಲ, ರಾಷ್ಟ್ರೀಯ ಪರಿಶಿಷ್ಟ ಜಾತಿಯ ಆರೋಗ ತೀರ್ಪು ನೀಡಿದ್ದರೂ ಸಹ ಅಧಿಕಾರಿಗಳು ಗೊಂದಲ ಸೃಷ್ಟಿಸುವ ದಿನಕ್ಕೊಂದು ಆದೇಶ ಮಾಡುತ್ತಿದ್ದಾರೆ. ಜಾಲಿ ಪಟ್ಟಣ ಪಂಚಾಯತಿನಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ಚುನಾವಣೆಗೆ ನಿಂತವರ ಜಾತಿ ಪ್ರಮಾಣ ಪತ್ರವನ್ನೇ ರದ್ದು ಮಾಡಿದ ಜಿಲ್ಲಾಧಿಕಾರಿಗಳ ನಡೆ ಖಂಡನೀಯವಾಗಿದ್ದು, ಅಧಿಕಾರಿಗಳ ದರ್ಪ ಇದೇ ರೀತಿಯಾಗಿ ಮುಂದುವರಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ನಮ್ಮ ಸಮಾಜದವರ ಮೇಲೆ ಅನ್ಯಾಯವಾಗಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಹಾಗೂ ಪರಿಶಿಷ್ಟ ಜಾತಿಯ ಸೌಲಭ್ಯವನ್ನು ನ್ಯಾಯಯುತವಾಗಿ ಪಡೆಯಲು ನಮ್ಮ ಧರಣಿ ಸತ್ಯಾಗ್ರಹ ಅನಿವಾರ್ಯವಾಗಿದ್ದು ಎಂದರು.

error: