ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ತೆಂಕಹಳ್ಳಿ ಗ್ರಾಮದ ಬಳಿ ಇರುವ ಆಗ್ರ‍್ಯಾನಿಕ್ ಟ್ರೀ ಕಂಪನಿಯು ಈಗಾಗಲೇ ನೈಸರ್ಗಿಕವಾಗಿ ಬೆಳೆದ ಸಿರಿ ಧಾನ್ಯಗಳಿಂದ ತಯಾರಿಸಿರುವ ಕಿರು ಬಿಸ್ಕೇಟ್ ಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುವ ಮೂಲಕ ಈಗಾಗಲೇ ನಾಡಿನಾದ್ಯಂತ ಜನಪ್ರಿಯವಾಗಿದ್ದು ಮತ್ತೆ ಹೊಸದಾಗಿ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಆರೋಗ್ಯ ಪೂರ್ಣ ರುಚಿಯಾದ ತಿನಿಸುಗಳನ್ನು ಪರಿಚಯಿಸಿದೆ.
ಇಂದು ಬೆಳಿಗ್ಗೆ ತೆಂಕಹಳ್ಳಿ ಬಳಿ ಇರುವ ಕಂಪನಿಯ ಕಿರು ಬಿಸ್ಕತ್ತು ಫ್ಯಾಕ್ಟರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಜೆ ಎಸ್ ಎಸ್ ಮಹಾ ಸಂಸ್ಥಾನ ಮಠದ ಶ್ರೀ ಜಗದ್ಗುರು ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಅವರು ಆಗ್ರ‍್ಯಾನಿಕ್ ಕಂಪನಿ ಹೊರ ತಂದಿರುವ ಸಾವಯವ ಕೃಷಿಯಲ್ಲಿ ಬೆಳೆದ ಅಚ್ಚ ಸಿರಿ ಧಾನ್ಯಗಳಿಂದ ತಯಾರಿಸಲಾಗಿ ರುವ ಮಿಲೇಟ್ ಕ್ರ‍್ಯಾಂಚಿಸಿ ಹೆಸರಿನ ಬಿಸ್ಕೇಟ್ ಹಾಗೂ ಖಾರದ ತಿಂಡಿ ಪದಾರ್ಥಗಳ ಪ್ಯಾಕೆಟ್ ಗಳನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಗ್ರಾಮೀಣ ಭಾಗದಲ್ಲಿ ಕಂಪನಿಯನ್ನು ತೆರೆದು ಆ ಮೂಲಕ ಸಾವಯವ ಕೃಷಿಯಿಂದ ಬೆಳೆದ ಸಿರಿ ಧಾನ್ಯಗಳಿಂದ ಬಿಸ್ಕೇಟ್ ಸೇರಿದಂತೆ ಇನ್ನಿತರ ಆರೋಗ್ಯ ಕರ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುವುದೇ ಅಲ್ಲದೆ ಈ ಭಾಗದ ರೈತರು ಸಿರಿ ಧಾನ್ಯಗಳನ್ನು ಬೆಳೆಯಲು ಉತ್ತೇಜನ ನೀಡಿ ಜೊತೆಗೆ ಅದೇ ರೈತ ಕುಟುಂಬದವರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿರುವ ಕಂಪನಿಯ ಮಾಲೀಕ ತೆಂಕಹಳ್ಳಿ ಮಹೇಶ್ ಸಹೋದರರ ದಿಟ್ಟ ನೆಡೆ ಪ್ರಶಂಸನೀಯ ಎಂದರು.
ಎಲ್ಲಾ ಗ್ರಾಹಕರು ಈ ಕಂಪನಿಯ ಆಹಾರ ಉತ್ಪನ್ನ ತಿನಿಸುಗಳನ್ನು ಬಳಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸ್ಥಳೀಯರೇ ಸ್ಥಾಪಿಸಿರುವ ಕಂಪನಿಯನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಕಂಪನಿಯ ಸಂಸ್ಥಾಪಕರಾದ ಮಹೇಶ್ ಮಾತನಾಡಿ ಕಳೆದ 2015 ರಲ್ಲಿ ಆರಂಭವಾದ ನಮ್ಮ ಆಗ್ರ‍್ಯಾನಿಕ್ ಟ್ರೀ ಕಂಪನಿಯು ಈಗಾಗಲೇ ಹೊರತಂದಿರುವ ಕಿರು ಬಿಸ್ಕೇಟ್ ಜನಮನ್ನಣೆ ಗಳಿಸಿದ್ದು ಇದರ ಜೊತೆಗೆ ಇದೀಗ ಮಿಲೇಟ್ ಕ್ರ‍್ಯಾಂಚಿಸಿ ಬಿಸ್ಕೇಟ್ ಹಾಗೂ ಖಾರ ತಿನಿಸುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಯಾವುದೇ ರಾಸಾಯನಿಕ ಬಳಸದೆ ಶೇ ನೂರರಷ್ಟು ರೈತರು ಬೆಳೆದ ಸಿರಿ ಧಾನ್ಯಗಳನ್ನು ಬಳಸಿ ತಿನಿಸುಗಳನ್ನು ತಯಾರಿಸಲಾಗು ತ್ತಿದೆ ಎಂದು ತಿಳಿಸಿದರು.
ಶಾಸಕರಾದ ಡಾ ಕೆ ಅನ್ನದಾನಿ, ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳು , ತೆಂಕಹಳ್ಳಿ ಮಠದ ಶ್ರೀ ನಂಜುAಡಸ್ವಾಮಿ, ರಾಗಿ ಬೊಮ್ಮನಹಳ್ಳಿ ಮಠದ ಶ್ರೀ ಪ್ರಭುಲಿಂಗಸ್ವಾಮಿ, ಮಾಜಿ ತಾ ಪಂ ಅಧ್ಯಕ್ಷ ಆರ್ ಎನ್ ವಿಶ್ವಾಸ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
.
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ