March 13, 2025

Bhavana Tv

Its Your Channel

ಸಾಧನಾ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಸಾಧನೆ

ಭಟ್ಕಳ: ಭಟ್ಕಳದಲ್ಲಿ ರಾಷ್ಟೊçÃತ್ಥಾನ ಪರಿಷತ್ ಬೆಂಗಳೂರುರವರು ಗ್ರಾಮೀಣ ಭಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನಡೆಸಿದ ಗಂಡು ಮಕ್ಕಳಿಗೆ “ತಪಸ್” ಮತ್ತು ಹೆಣ್ಣು ಮಕ್ಕಳಿಗೆ “ಸಾಧನಾ” ಪರೀಕ್ಷೆಯಲ್ಲಿ ಭಟ್ಕಳ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಕುಮಾರಿ ಹರ್ಷಿತಾ ವಿಷ್ಣು ನಾಯ್ಕ, ಕುಮಾರಿ ನಾಗನಿಧಿ ರತೀಶ ಹಿಚ್ಕಡ, ಕುಮಾರಿ ಜೀವಿತಾ ಮಂಜುನಾಥ ನಾಯ್ಕ, ಕುಮಾರಿ ಚಿತ್ರಾ ಮಂಜುನಾಥ ನಾಯ್ಕ, ಕುಮಾರಿ ಜ್ಯೋತಿ ದೇವಯ್ಯ ನಾಯ್ಕ, ಕುಮಾರಿ ರಾಧಿಕಾ ಮಂಜುನಾಥ ನಾಯ್ಕ ಆಯ್ಕೆಯಾಗಿದ್ದಾರೆ. “ಸಾಧನಾ” ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಾಸಾದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ರಾಷ್ಟೊçÃತ್ಥಾನ ಪಿ.ಯು. ಕಾಲೇಜು ಥಣಿಸಂದ್ರ ಬೆಂಗಳೂರಿನÀಲ್ಲಿ ಪಿ.ಯು. ಶಿಕ್ಷಣ ಹಾಗೂ ಬೇಸ್ ಸಂಸ್ಥೆಯವತಿಯಿAದ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳಾದ ಎನ್.ಇ.ಇ.ಟಿ. (ಓಇಇಖಿ), ಸಿ.ಇ.ಟಿ. (ಅಇಖಿ),ಕೆ.ವಿ.ಪಿ.ವಾಯ್. (ಏಗಿPಙ). ಗಳಿಗೆ ತರಬೇತಿ ನೀಡಲಾಗುತ್ತದೆ. ಹಾಗೂ ಸಂಪೂರ್ಣ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ೨೦೧೯-೨೦ ನೇ ಸಾಲಿನಲ್ಲಿ ಇಬ್ಬರು ಹಾಗೂ ೨೦೨೦-೨೧ ನೇ ಮೂವರು ವಿದ್ಯಾರ್ಥಿನಿಯರು ಆಯ್ಕೆಗೊಂಡು ಈಗಾಗಲೇ ಇದರ ಪ್ರಯೋಜನ ಪಡೆಯುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ವರ್ಷವೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಿಂದ ೧೦ನೇ ತರಗತಿಯಲ್ಲಿ ಓದುತ್ತಿರುವ ೨೦ ಬಾಲಕಿಯರು ಪರೀಕ್ಷೆ ಬರೆದು ಅವರಲ್ಲಿ ಕುಮಾರಿ ಹರ್ಷಿತಾ ವಿಷ್ಣು ನಾಯ್ಕ, ಕುಮಾರಿ ನಾಗನಿಧಿ ರತೀಶ ಹಿಚ್ಕಡ, ಕುಮಾರಿ ಜೀವಿತಾ ಮಂಜುನಾಥ ನಾಯ್ಕ, ಕುಮಾರಿ ಚಿತ್ರಾ ಮಂಜುನಾಥ ನಾಯ್ಕ, ಕುಮಾರಿ ಜ್ಯೋತಿ ದೇವಯ್ಯ ನಾಯ್ಕ, ಕುಮಾರಿ ರಾಧಿಕಾ ಮಂಜುನಾಥ ನಾಯ್ಕ ಸಾಧನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಮುಂದಿನ ಹಂತಕ್ಕೆ ಆಯ್ಕೆಯಾಗಿ ಶಾಲೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿರುವುದರಿoದ ವಿದ್ಯಾರ್ಥಿನಿಯರಿಗೆ ಹಾಗೂ ತರಬೇತಿ ನೀಡಿದ ಶಿಕ್ಷಕರುಗಳಿಗೆ ಶಾಲೆಯ ಪ್ರಾಂಶುಪಾಲರಾದ ಶ್ರೀ ರಮೇಶ್ ಕೆ. ನಾಯ್ಕ ಹಾಗೂ ವಸತಿ ಶಾಲೆಯ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಇಯರಿಗೆ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

error: