March 13, 2025

Bhavana Tv

Its Your Channel

ಬೋಟ್‌ನಿಂದ ಬಿದ್ದು ಮೀನುಗಾರ ಮೃತ

ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ನಿಂದ ಬಿದ್ದು ಮೀನುಗಾರ ಮೃತಪಟ್ಟಿದ ಘಟನೆ ಭಟ್ಕಳ ಲೈಟ್ ಹೌಸ್ ಸಮೀಪ ಅರಬ್ಬೀ ಸಮುದ್ರದಲ್ಲಿ ನಡೆದಿದೆ.

ಮೃತ ಮೀನುಗಾರ ತಿಮ್ಮಪ್ಪ ಮೊಗೇರ ಭಟ್ಕಳ ತಾಲೂಕಿನ ಮಠದಹಿತ್ಲು ಮಾದುಮನೆ ಕಾಯ್ಕಿಣಿ ನಿವಾಸಿ ಎಂದು ತಿಳಿದು ಬಂದಿದೆ. ಈತನು ಚಕ್ರವರ್ತಿ ಎನ್ನುವ ಬೋಟನಲ್ಲಿ ಭಟ್ಕಳದ ಲೈಟ್ ಹೌಸ್ ಸಮೀಪ ಮೀನುಗಾರಿಕೆ ಮಾಡುತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಬೋಟ್ ನಿಂದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.

error: