March 15, 2025

Bhavana Tv

Its Your Channel

ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ

ಭಟ್ಕಳ ಆಸರಕೇರಿಯಲ್ಲಿರುವ ನಾಮಧಾರಿ ಸಮಾಜದ ಗುರುಮಠ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜೆ ಪರಸ್ಕಾರ ನಡೆಯಿತು.

ಶ್ರೀ ದೇವರ ಉತ್ಸವ ಮೂರ್ತಿಯನ್ನು ದಕ್ಷಿಣ ದ್ವಾರದಲ್ಲಿ ಅಲಂಕರಿಸಿ ಪಲ್ಲಕ್ಕಿಯಲ್ಲಿರಿಸಿ ಪೂಜಿಸಲಾಯಿತು.ಸರ್ಕಾರದ ಕೋವಿಡ್ ನಿಯಮವನ್ನು ಪಾಲಿಸಿ ಭಕ್ತಾಧಿಗಳು ವಿಶೇಷವಾಗಿ ದೇವಸ್ಥಾನದ ದೇವಾಲಯದ ದಕ್ಷಿಣ ದ್ವಾರದ ಮೂಲಕ ಪ್ರವೇಶಿಸಿ ಶ್ರೀ ದೇವರ ದರ್ಶನ ಪಡೆದು ಶ್ರೀ ದೇವರ ಪಲ್ಲಕ್ಕಿಯಡಿಯಲ್ಲಿ ಉತ್ತರ ದ್ವಾರದ ಮೂಲಕ ಹೊರಬಂದು ವಿಶೇಷ ಆಚರಣೆ ನಡೆಸಿದರು.

ಬೆಳಿಗ್ಗೆಯಿಂದ ಸಂಜೆ ತನಕ ನೂರಾರು ಭಕ್ತರೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀ ವೇಂಕಟೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.

error: