March 12, 2025

Bhavana Tv

Its Your Channel

ಉ.ಕ ಜಿಲ್ಲೆಯ ಜನತೆ ಇಲ್ಲಿನ ಅಭಿವೃದ್ಧಿಯ ಲಾಭ ಪಡೆಯಬೇಕು-ಸಚಿವ ಅನಂತಕುಮಾರ ಹೆಗಡೆ

ಭಟ್ಕಳ: ಉ.ಕ ಜಿಲ್ಲೆಯ ಜನತೆಗೆ ಇಲ್ಲಿನ ಅಭಿವೃದ್ಧಿಯ ಲಾಭ ಪಡೆಯಬೇಕು. ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು. ಇಲ್ಲವಾದಲ್ಲಿ ಅಭಿವೃದ್ಧಿಯ ವೇಗ ಅಳಿಯುತ್ತಲೇ ಹೋಗುತ್ತದೆ. ನೀವು ಎಲ್ಲಿದ್ದೀರೋ ಅಲ್ಲಿಯೇ ಇರುತ್ತೀರಿ ಎಂದು ಸಂಸದ ಹಾಗೂ ಮಾಜಿ ಕೇಂದ್ರ
ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಅವರು ಭಟ್ಕಳ ತೂದಳ್ಳಿಯಲ್ಲಿ ಕೇಂದ್ರ ಸರಕಾರದ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಮಂಜೂರು ಆದ 2.65 ಕೋಟಿ ರೂ. ವೆಚ್ಚದ ಕಾಮಗಾರಿಯ ಮಾಹಿತಿಫಲಕ ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಈಗಾಗಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು. ಅಂಕೋಲಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗುತ್ತಿದೆ. ರೇಲ್ವೆಯನ್ನು ಔದ್ಯೋಗೀಕರಾ ಸಜ್ಜುಗೊಳಿಸಲು ವಿದ್ಯುದೀಕರಣಗೊಳಿಸಲಾಗಿದ್ದು ಅಭಿವೃದ್ಧಿಯ ಕಡೆಗೆ ಜನತೆ ನಮ್ಮೊಂದಿಗೆ ಬರಬೇಕು ಇಲ್ಲವಾದಲ್ಲಿ ಬೇರೆ ಬೇರೆ ಜನರು ಇವರ ಪ್ರಯೋಜನ ಪಡೆದುಕೊಳ್ಳುತ್ತಾರೆ ಎಂದು ಜಿಲ್ಲೆಯ ಜನತೆ. ಔದ್ಯೋಗೀಕರಣದತ್ತ ಹೊರಳುವಂತೆ ಕೋರಿದರು. ಜಿಲ್ಲೆಯಲ್ಲಿ ಫಿಶ್ ಎಕ್ಸ್ಚೇಂಜ್ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರದ ಅನುಮೋದನೆ ಬಾಕಿ ಇದೆ ಇಷ್ಟರಲ್ಲಿಯೇ ಇದು ಆರಂಭವಾಗಲಿದ್ದು,
ಅಭಿವೃದ್ಧಿಗೆ ಪೂರಕವಾಗಲಿದೆ ಎಂದ ಅವರು ಬಂದರು ಕಾಮಗಾರಿ, ಹೆದ್ದಾರಿ ಕಾಮಗಾರಿ ಇವೆಲ್ಲವೂ ಕೂಡಾ ಔದ್ಯೋಗೀಕರಣಕ್ಕೆ ತಮ್ಮದೇ ಆದ ಕೊಡುಗೆ ನೀಡಲಿವೆ ಎಂದರು.
ಕೇAದ್ರದಿAದ ಕುಡಿಯುವ ನೀರಿಗೆ 450 ಕೋಟಿ, ರಸ್ತೆ ಅಭಿವೃದ್ಧಿಗೆ 300 ಕೋಟಿ ಬಂದಿದ್ದು ಉತ್ತರ ಕನ್ನಡ ಜಿಲ್ಲೆ ಇನ್ನು ಮುಂದೆ ಕೈಗಾರಿಕಾ ಜಿಲ್ಲೆಯನ್ನಾಗಿಸುವತ್ತ ಎಲ್ಲ ಪ್ರಯತ್ನ ಸಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸುನೀಲ್ ನಾಯ್ಕ ಪ್ರಾಸ್ತಾವಿಕ ಮಾತನಾಡಿ, ಈ ಭಾಗದ ಜನತೆಗೆ ಅನುಕೂಲವಾಗುವಂತೆ ಸಂಸದ ಅನಂತಕುಮಾರ ಹೆಗಡೆ ಅವರು ಸೇತುವೆ ನಿರ್ಮಾಣಕ್ಕೆ ಹಣ ಮಂಜೂರಿ ಮಾಡಿಸಿದ್ದಾರೆ. ಈ ಭಾಗದ ಜನತೆಗೆ ನೂತನ ಸೇತುವೆಯಿಂದ ಓಡಾಟಕ್ಕೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಗೋವಿಂದ ನಾಯ್ಕ, ಕಾರ್ಯದರ್ಶಿ ಶಿವಾನಿ ಶಾಂತಾರಾಮ, ಮಂಡಳದ ಅಧ್ಯಕ್ಷ ಸುಬ್ರಾಯ ದೇವಡಿಗ, ಮುಕುಂದ ನಾಯ್ಕ, ಕೇಶವ ಬಲ್ಸೆ, ಗ್ರಾಮ ಪಂಚಾಯತ ಅಧ್ಯಕ್ಷೆ ಅನಿತಾ ಡಿಸೋಜ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಗುತ್ತಿಗೆದಾರರು, ಇಂಜಿನಿಯರ್ ಮುಂತಾದವರು ಉಪಸ್ಥಿತರಿದ್ದರು.

error: