
ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದ ಶ್ರೀ ಕಟ್ಟೇವೀರ ಮತ್ತು ಪರಿವಾರ ದೇವರ 20ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮವು ರವಿವಾರದಂದು ನಡೆಯಿತು.
ಬೆಳಿಗ್ಗೆಯಿಂದಲೇ ಶ್ರೀ ಕಟ್ಟೇವೀರ ದೇವರಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆದಿದ್ದು, ಶ್ರೀ ಗಣಪತಿ ಪೂಜೆ, ಪುಣ್ಯಾಹ, ಬ್ರಹ್ಮಕೂರ್ಚ ಹೋಮ, ಶ್ರೀ ದೇವರ ಪ್ರೀತ್ಯರ್ತ ರುದ್ರ ಹೋಮ, ಕಲಾವೃದ್ಧಿ ಹೋಮ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ 8 ಗಂಟೆಯಿAದ ಸರ್ವಸೇವೆ ಪೂಜೆ, ಅಭೀಷೇಕ ಕಾರ್ಯಕ್ರಮ ಪ್ರಾರಂಭವಾಗಿದ್ದು, ತದನಂತರ 9 ಗಂಟೆಯಿAದ 11 ಗಂಟೆಯ ವರೆಗೆ ಸತ್ಯನಾರಾಯಣ ಸಂಕಲ್ಪ ಮತ್ತು ಪೂಜೆ ನಡೆದವು. ಮಧ್ಯಾಹ್ನ ಎಲ್ಲಾ ಕಾರ್ಯಕ್ರಮದ ಬಳಿಕ ಶ್ರೀ ಕಟ್ಟೇವೀರ ದೇವರಿಗೆ ಹಾಗೂ ಪರಿವಾರ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು. ಮದ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಿತು.ಈ ಸಂಧರ್ಭದಲ್ಲಿ ನೂರಾರು ಭಕ್ತರು ದೇವರ ಪ್ರಸಾಧ ಭೋಜನವನ್ನು ಸ್ವೀಕರಿಸಿದರು. ನಂತರದ ಸಂಜೆ 5:30 ರಿಂದ 7 ಗಂಟೆಯವರೆಗೆ ಊರ ಅವರಿಂದ ಹರಿ ಕುಣಿತ ನಡೆದವು,ರಾತ್ರಿ 8 ಗಂಟೆಯಿAದ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ವರ್ಷ ವಿಶೇಷವಾಗಿ ದೇವರಿಗೆ ಸ್ಥಳೀಯ ಉದ್ಯಮಿ ಲಕ್ಷ್ಮಣ ನಾಯ್ಕ ಇವರು ಕಂಚಿನ ಪ್ರಭಾವಳಿ ನೀಡಿದ್ದಾರೆ.
ರಾತ್ರಿ ದೇವಸ್ಥಾನದ ಆವಾರದಲ್ಲಿ ಹರಿ ಕುಣಿತ ಕಾರ್ಯಕ್ರಮ ನಡೆಯಿತು
ಈ ಸಂಧರ್ಭದಲ್ಲಿ ಶ್ರೀ ಕಟ್ಟೇವೀರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಸಾರ್ವಜನಿಕರು ಇದ್ದರು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ