
ಭಟ್ಕಳ : ಶಕ್ತಿ ಕ್ಷೇತ್ರವಾಗಿರುವ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆ ದುರ್ಗಾಪರಮೇಶ್ವರಿ ದೇವರ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ ಫೆ. 9ರಿಂದ 11ರ ವರೆಗೆ ಶ್ರೀಮಜ್ಜಗದ್ಗುರು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಲಿದೆ.
ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಅಥರ್ವಶಿರ್ಷಹವನ, ರುದ್ರಹವನ,ಶ್ರೀಲಲಿತಾಮಂತ್ರ ಮಹಾಯಾಗ ಜರುಗಲಿದೆ. ಫೆ.9 ರಂದು ಬೆಳಿಗ್ಗೆ ಗಣೇಶಪೂಜೆ, ದೇವತಾಪ್ರಾರ್ಥನೆ, ನಾಂದಿ, ಪುಣ್ಯಾಹ,ಬ್ರಹ್ಮಕೂರ್ಚಹವನ, ಮಧ್ಯಾಹ್ನ ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದ್ದರೆ, ಸಂಜೆ ಮಂಟಪ ಸಂಸ್ಕಾರ, ಯಾಗಶಾಲಾ ಪ್ರವೇಶ, ಕಲಶಸ್ಥಾಪನೆ, ವಾಸ್ತುರಾಕ್ಷೆÆÃಘ್ನಹವನ, ಬಲಿ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ. ಫೆ. 10 ರಂದು ಬೆಳಿಗ್ಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಗಮನ, ರುದ್ರಹವನದ ಮಹಾಸಂಕಲ್ಪ, ಶ್ರೀ ದೇವರಿಗೆ ಕಲಾವೃದ್ಧಿಯಾದಿ ಹವನ, ಕಲಾವೃದ್ಧಿಹವನ, ರುದ್ರಹವನ, ಹವನದ ಪೂರ್ಣಾಹುತಿ, ಶ್ರೀಪೂಜೆ, ಶ್ರೀಗುರುಗಳ ಪಾದಪೂಜೆ, ಶ್ರೀಗುರುಭಿಕ್ಷೆ, ರಥಸಂಪ್ರೋಕ್ಷಣೆ, ಮಧ್ಯಾಹ್ನ ಶ್ರೀದೇವರ ರಥಾರೋಹಣ, ಮಹಾರಥೋತ್ಸವ, ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಜರುಗುವ ಧರ್ಮಸಭೆಯಲ್ಲಿ ಶ್ರೀಗಳಿಂದ ಆಶೀರ್ವಚನ ಮತ್ತು ಅನುಗ್ರಹ ಮಂತ್ರಾಕ್ಷತೆ ನಡೆಯಲಿದೆ. ಫೆ. 11ರಂದು ಶ್ರೀ ಲಲಿತಾಮಂತ್ರ ಮಹಾಯಾಗದ ಸಂಕಲ್ಪ, ಹವನದ ಪೂರ್ಣಾಹುತಿ, ದೇವರಿಗೆ ಕಲಶಾಭಿಷೇಕ, ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಆಶೀಗ್ರಹಣ ನಡೆಯಲಿದೆ. ಭಕ್ತರು ಕೋವಿಡ್ ಮುಂಜಾಗ್ರತಾಕ್ರಮದೊAದಿಗೆ ಆಗಮಿಸಿ ಶ್ರೀ ದೇವರ ಮತ್ತು ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯ ಅಧ್ಯಕ್ಷ ಶಿವಾನಂದ ಹೆಬ್ಬಾರ ಹಾಗೂ ಪದಾಧಿಕಾರಿಗಳು ಕೋರಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ