
ಭಟ್ಕಳ: ಕಳೆದ ಕೆಲವು ದಿನಗಳಿಂದ ಭಟ್ಕಳ ಪುರಸಭೆಯ ಆಡಳಿತದ ವಿರುದ್ಧ ವೃಥಾ ಆರೋಪ ಮಾಡಲಾಗುತ್ತಿದ್ದು, ಪಟ್ಟಭದ್ರ ಹಿತಾಸಕ್ತಿಗಳಿಂದ ಪುರಸಭೆಯ ಹೆಸರು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ಅಧ್ಯಕ್ಷ ಫರ್ವೇಜ್ ಕಾಶೀಮ್‌ಜಿ ಹೇಳಿದ್ದಾರೆ.
ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಮಳೆ ನೀರು ಇಂಗಿಸುವ ಕಾಮಗಾರಿ, ಮುಖ್ಯ ರಸ್ತೆಯಲ್ಲಿರುವ ಉದ್ಯಾನವನ, ಕಸ ವಿಲೇವಾರಿ ಘಟಕದಲ್ಲಿ ನಡೆದ ಕಾಮಗಾರಿ ಹಾಗೂ ಅದಕ್ಕೆ ಹಣ ಪಾವತಿಯಾದ ಬಗ್ಗೆ ಕೆಲವು ಗಂಭೀರ ಆರೋಪ ಮಾಡಿದ್ದರು. ನಾನು ಆ ಸಭೆಯಲ್ಲಿ ಈ ಎಲ್ಲ ಕಾಮಗಾರಿಗಳಿಗೆ ಸಂಬAಧಿಸಿದ ಕಡತಗಳು ಕಚೇರಿಯಲ್ಲಿ ಇದ್ದು, ಯಾರು ಬೇಕಾದರೂ ಇದನ್ನು ಪರಿಶೀಲಿಸಬಹುದು, ಎಲ್ಲಿಯಾದರೂ ಅವ್ಯವಹಾರ ಕಂಡು ಬಂದಲ್ಲಿ ವಿಶೇಷ ಸಭೆ ಕರೆದು ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದೆ. ಆದರೆ ಸಭೆ ನಡೆದು ೧ ತಿಂಗಳಾದರೂ ಕಡತ ಪರಿಶೀಲಿಸಲು ಯಾವ ಸದಸ್ಯರೂ ಮುಂದೆ ಬಂದಿಲ್ಲ. ಸದಸ್ಯರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದರೂ ಸುಖಾಸುಮ್ಮನೇ ಕೇಳಿದ ಪ್ರಶ್ನೆಯನ್ನೇ ಕೇಳಿ ಮಾನಸಿಕ ಹಿಂಸೆ ನೀಡಲು ಪ್ರಯತ್ನಿಸಲಾಗುತ್ತಿದೆ. ಎಂದರು. ಪುರಸಭೆಯ ಅಧಿಕಾರ ವಹಿಸಿಕೊಂಡು ೧ ವರ್ಷದ ಒಳಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನೆಡಸಲಾಗಿದೆ. ಪುರಸಭೆ ಬರು ಕೆಲಸಕ್ಕಾಗಿ ಜೆಸಿಬಿ, ಇನ್ನೋವಾ ಕಾರು, ವಾಟರ್ ಟ್ಯಾಂಕರ್, ಟಿಪ್ಪರ್‌ನ್ನು ಖರೀದಿಸಲಾಗಿದೆ. ಕುಡಿಯುವ ನೀರಿನ ಶುದ್ದೀಕರಣಕ್ಕೂ ಯೋಜನೆ ರೂಪಿಸಲಾಗಿದೆ. ೨೦೧೭ರಿಂದ ಯಾವುದೇ ವಿದ್ಯುದ್ದೀಪಗಳನ್ನು ಖರೀದಿಸಿರಲಿಲ್ಲ. ಆದರೆ ಈಗ ೪೦೦ ಎಲ್ ಇಡಿ ವಿದ್ಯುದ್ದೀಪಗಳನ್ನು ಇ-ಟೆಂಡರ್ ಮೂಲಕ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಖರೀದಿಸಲಾಗಿದೆ. ೪೩% ಕಡಿಮೆ ದರವನ್ನು ನಮೂದಿಸಿದವರಿಗೆ ನಿಯಮದಂತೆ ವಿದ್ಯುದ್ದೀಪ ಒದಗಿಸುವ ಟೆಂಡರ್ ನೀಡಲಾಗಿದೆ. ಆದರೆ ೧೦% ಹೆಚ್ಚು ದರ ನಮೂದಿಸಿದವರಿಗೆ ಟೆಂಡರ್ ನೀಡಬೇಕು ಎಂದರೆ ಹೇಗೆ, ಈ ವಿಷಯದಲ್ಲಿಯೂ ಪುರಸಭೆಯ ಮೇಲೆ ಅಪವಾದ ಹೊರಿಸುವ ಪ್ರಯತ್ನ ನಡೆದಿದೆ. ಸಾಲದೆಂಬAತೆ
ಪುರಸಭೆಯ ವತಿಯಿ೦ದ ಖರೀದಿಸಲಾದ ಇನ್ನೋವಾ ಕಾರಿನ ಮೇಲೆ ಅಳವಡಿಸಲಾದ ನಾಮಫಲಕಕ್ಕೆ ಸಂಬAಧಿಸಿದAತೆ
ಸಂಘ, ಸಮಿತಿಯ ಹೆಸರಲ್ಲಿ ಅರ್ಜಿ ಬರೆದು, ಅವರಿಗೆ ಪದೇ ಪದೇ ಫೋನ್ ಕರೆ ಮಾಡಿ ಒತ್ತಡ ಹೇರಿ ನಾಮಫಲಕ ತೆಗೆಯಿಸಿ ಪುರಸಭೆಗೆ ಮುಜುಗರ ತರಲು ಯತ್ನಿಸಲಾಗಿದೆ. ಪುರಸಭೆಯಲ್ಲಿ ಹೆಚ್ಚಿನ ಸದಸ್ಯರ ಬೆಂಬಲ ನನಗೆ ಇದ್ದು, ಇಂತಹ ನಡವಳಿಕೆಗೆ ನಾನು ಹೆದರುವುದಿಲ್ಲ ಎಂದರು. ಪುರಸಭೆಯ ಅಂಗಡಿ ಮಳಿಗೆಗಳ ಬಾಡಿಗೆ ಸರಿಸುಮಾರು ೧.೫ಕೋ.ಯಷ್ಟು ಬಾಕಿ ಇದ್ದು,ವಸೂಲಿ ಮಾಡಲಾಗುವುದು, ೬೬ ಅಂಗಡಿಗಳ ಹರಾಜು ಪ್ರಕ್ರಿಯೆಗೂ ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಪುರಸಭಾ ಸದಸ್ಯರಾದ ರವೂಫ್ ನಾಯಿತೇ, ಅಬ್ದುಲ್ ಅಜೀಮ್ ಉಪಸ್ಥಿತರಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ