March 12, 2025

Bhavana Tv

Its Your Channel

ಜಿಲ್ಲಾದ್ಯಂತ ಅರಣ್ಯವಾಸಿಗಳ ಜಾಗೃತೆ ಅಭಿಯಾನಕ್ಕೆ ನಿರ್ಣಯ.

ಭಟ್ಕಳ: ಅರಣ್ಯವಾಸಿಗಳ ಮೇಲೆ ಜರಗುವ ದೌರ್ಜನ್ಯ ಹಾಗೂ ಅರಣ್ಯ ಹಕ್ಕು ಮಂಜೂರಿ ಜಾಗೃತೆ ಅಭಿಯಾನವನ್ನ ಜಿಲ್ಲಾದ್ಯಂತ ಜರುಗಿಸಿ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಅಂಶವನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಜನಜಾಗೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಭಟ್ಕಳ ತಾಲೂಕಿನ ಪ್ರವಾಸ ಮಂದಿರದಲ್ಲಿ ಜರುಗಿದ ದಿ. ೧೭ ರ ಬೆಂಗಳೂರಿನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.


ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದರೂ, ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗುವ ಕುರಿತು ದಿನನಿತ್ಯ ಅರಣ್ಯವಾಸಿಗಳಿಗೆ ಕಿರುಕುಳ, ದೌರ್ಜನ್ಯ, ಮಾನಸಿಕ ಹಿಂಸೆ ಜರುಗುತ್ತಿರುವುದರಿಂದ, ಅರಣ್ಯವಾಸಿಗಳು ಮತ್ತು ಅರಣ್ಯ ಇಲಾಖೆಯ ಜೊತೆ ಸಾಮರಸ್ಯ ಬೆಳೆಸುವ ದಿಶೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೆಕೇಂದು ಅರಣ್ಯ ಹೋರಾಟಗಾರರು ಸಭೆಯಲ್ಲಿ ಪ್ರಸಾಪಿಸಿದರು.
ಅರಣ್ಯ ಭೂಮಿ ವಂಚಿತರಾಗದ ರೀತಿಯಲ್ಲಿ ಹೋರಾಟಗಾರರ ವೇದಿಕೆಯು ಕಾರ್ಯ ಪ್ರವೃತ್ತರಾಗಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ತಾಲೂಕ ಅಧ್ಯಕ್ಷ ದೇವರಾಜ ಗೋಂಡ, ರಿಜವಾನ್ ಸಾಬ, ಇನಾಯತುಲ್ಲಾ ಸಾಬಂದ್ರಿ ಮಾತನಾಡಿ, ಸ್ವಾಗತ ಮತ್ತು ಪ್ರಾಸ್ತವಿಕ ಜಿಲ್ಲಾ ಸಂಚಾಲಕ ಪಾಂಡುರoಗ ನಾಯ್ಕ ಬೆಳಕೆ ಮಾಡಿದರು.
ಕಾರ್ಯಕ್ರಮದಲ್ಲಿ ಲಕ್ಷಿ ನಾಯ್ಕ ಬೆಳಕೆ, ಕಯೀಂ ಸಾಬ, ಶಬ್ಬೀರ್ ಸಾಬ, ಸಿರಜ್ಜಿಮನೆ ಬೆಳಕೆ, ವಿಮಲ ಮೋಗೇರ, ಶಾಂತಿ ನಾಗರಾಜ ಮೋಗೇರ, ಸಲೀಂ ಸಾಬ, ವೆಂಕಟೇಶ್ ವೈಧ್ಯ, ರಮೇಶ ನಾಯ್ಕ ಗೊರಟೆ, ನಾಗರತ್ನ ಮೊಗೇರ, ಮೋಹಿನಿ ಮೊಗೇರ, ಮಾಲತಿ ಮೊಗೇರ, ಜಾನಕಿ ಮೊಗೇರ, ಸತಾರ ಸಾಬ ಮುಂತಾದವರು ಉಪಸ್ಥಿತರಿದ್ದರು.


ಬೆಂಗಳೂರಿಗೆ ಹೇಚ್ಚಿನ ಸಂಖ್ಯೆಯಲ್ಲಿ ಪ್ರಯಾಣ:

ಪೇ ೧೭. ರಂದು ಬೆಂಗಳೂರಿನಲ್ಲಿ ಜರಗುವ ಅರಣ್ಯವಾಸಿಗಳ ಸಭೆಗೆ ಹೇಚ್ಚಿನ ಸಂಖ್ಯೆಯಲ್ಲಿ ಅತೀಕ್ರಮಣದಾರರು ಭಾಗವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತೆಂದು ಜಿಲ್ಲಾ ಸಂಚಾಲಕ ದೇವರಾಜ ಗೊಂಡ ತಿಳಿಸಿದರು.

error: