December 22, 2024

Bhavana Tv

Its Your Channel

ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಿoದ ಫುಡ್ ಕಿಟ್

ಭಟ್ಕಳ: ರಾಜ್ಯದಲ್ಲಿ ಯಾವುದೇ ರೀತಿಯ ಸಂಕಷ್ಟ ಎದುರಾದಾಗ ಸದಾ ಸ್ಪಂದಿಸುವ ರಾಜ್ಯದ ಪ್ರತಿಷ್ಟಿತ ಅರ್ಬನ ಬ್ಯಾಂಕುಗಳಲ್ಲಿ ಒಂದಾದ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಕೊರೊನಾ ವೈರಸ್ ಸೋಂಕಿನಿoದ ಎದುರಾದ ಸಂಕಷ್ಟಕ್ಕೆ ಸ್ಪಂದಿಸಿದ್ದು, ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಎರಡು ಲಕ್ಷ ರೂಪಾಯಿಗಳನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಮೂಲಕ ನೀಡಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದೆ.
ಈಗಾಗಲೇ ಕೇಂದ್ರ ಸರಕಾರ ಘೋಷಿಸಿದ ಲಾಕ್‌ಡೌನ್‌ನಿಂದ ನಾಗರೀಕರು ತೊಂದರೆಗೊಳಗಾಗಿದ್ದನ್ನು ಮನಗಂಡ ಬ್ಯಾಂಕ್ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಬ್ಯಾಂಕಿನ ನಿರ್ದೇಶಕರುಗಳ ಮೂಲಕ ಜೀವನಾವಶ್ಯಕ ವಸ್ತುಗಳುಳ್ಳ ೩೫೫ ಫುಡ್‌ಕಿಟ್‌ಗಳನ್ನು ವಿತರಿಸುವ ಮೂಲಕ ಜನ ಸಾಮಾನ್ಯರೊಂದಿಗೆ ತಾವಿದ್ದೇವೆ ಎನ್ನುವ ಸಂದೇಶ ಸಾರಿದೆ.

error: