
ಭಟ್ಕಳ: ಅಂಜುಮಾನ್ ಇಂಜಿನಿಯರಿoಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಹಳೆವಿದ್ಯಾರ್ಥಿಗಳು ನಡೆಸುತ್ತಿರುವ ಮೇರ‍್ಸ್ ಹಬ್ ವತಿಯಿಂದ ಕೊರೊನಾ ವಿರುದ್ಧ ಹೋರಾಡುವವರಿಗಾಗಿ ತಯಾರಿಸಲಾದ ೧೦೦ ಫೇಸ್ ಶೀಲ್ಡ್ನ್ನು ಶಾಸಕರ ಕಚೇರಿಯಲ್ಲಿ ಶಾಶಕ ಸುನಿಲ್ ನಾಯ್ಕ ಅವರಿಗೆ ಹಸ್ತಾಂತರಿಸಿದರು.

ಇದೇ ಸಂದರ್ಭದಲ್ಲಿ ಶಿರಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ೩೦ ಫೇಸ್ ಶೀಲ್ಡನ್ನು ವಿತರಿಸಲಾಯಿತು. ಈಗಾಗಲೇ ತಾಲೂಕಾ ಆಸ್ಪತ್ರೆ, ಉಪವಿಭಾಗಾದಿಕಾರಿಗಳ ಕಚೇರಿ, üಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಕಾರ್ಯಕರ್ತರು, ಕಾರ್ಯನಿರತ ಪತ್ರಕರ್ತರಿಗೆ ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂದರ್ಭದಲ್ಲಿ ಪ್ರೊ. ಶ್ರೀಶೈಲ ಭಟ್ಟ, ಮೇರ‍್ಸ್ ಹಬ್‌ನ ಸುಹೇಲ್ ದಾಮುದಿ, ಮೊಹಮ್ಮದ್ ಯಾಪೆ ಉಪಸ್ಥಿತರಿದ್ದರು.
More Stories
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.
ಭಟ್ಕಳದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ,