November 30, 2023

Bhavana Tv

Its Your Channel

ಲಾಕ್ ಡೌನ್ ಹಿನ್ನಲೆಯಲ್ಲಿ ತನ್ನ ಮಾಲೀಕತ್ವದ ಪಾಕ್ಟರಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸಿದ ಮಾಲೀಕ ನಾಗರಾಜ ಭಟ್

ಭಟ್ಕಳ ತಾಲೂಕಿನ ಬೇಂಗ್ರೆಯ ಪೂರ್ಣಚಂದ್ರ ಕ್ಯಾಶ್ಯು ಪ್ರೆöÊವೇಟ್ ಲಿಮಿಟೆಡ್ ಮಾಲಕ ನಾಗರಾಜ ಭಟ್ಟ ತನ್ನ ಪಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೇಂಗ್ರೆ ಹಾಗೂ ಕುಮುಟಾ ತಾಲೂಕಿನ ಮಾಸೂರಿನ ಫಾಕ್ಟರಿಯಲ್ಲಿನ ೨೫೭ ಕುಟುಂಬದ ಕಾರ್ಮಿಕರಿಗೆ ಅತಿಅಗತ್ಯವಾದ ದಿನಸಿ ವಿತರಣೆ ಮಾಡುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸಿದ್ದಾರೆ. ಅವಲಕ್ಕಿ, ತೋಗರಿಬೇಳೆ, ಗೋಧಿ ಹಿಟ್ಟು, ರಾಗಿ ಹಿಟ್ಟು, ಸಕ್ಕರೆ, ಚಾ ಪುಡಿ, ಮೆಣಸು, ಹುಳಿ, ಬೆಲ್ಲ ಮುಂತಾದ ಅತೀ ಅವಶ್ಯ ಸಾಮಗ್ರಿಗಳನ್ನು ನೀಡಿ ತನ್ನ ಕಾಮಿಕರಿಗೆ ಸಹಾಯವನ್ನು ಮಾಡಿರುತ್ತಾರೆ,


ಕರೋನಾ ಮಹಾಮಾರಿಯಿಂದ ಸುರಕ್ಷತೆಗಾಗಿ ಪಾಕ್ಟರಿ ತೆಗೆಯದೇ ಕೆಲಸಕ್ಕೆ ಹಾಜರಾಗದ ಹಿನ್ನಲೆಯಲ್ಲಿ ದಿನಸಿ ಕೊಳ್ಳಲು ಕಷ್ಟ ಅನುಭವಿಸುತ್ತಿರುವ ಕಾರ್ಮಿಕರಿಗೆ ಅತಿಅಗತ್ಯವಾದ ದಿನಸಿ ವಿತರಣೆ ಮಾಡಿ ಸಂಕಷ್ಟದ ಸಮಯಕ್ಕೆ ನೆರವಿಗೆ ಧಾವಿಸಿದ ಮಾಲೀಕರಿಗೆ ಕಾರ್ಮಿಕರು ಅಭಿನಂದಿಸಿದ್ದಾರೆ.

error: