December 6, 2024

Bhavana Tv

Its Your Channel

ಭಟ್ಕಳ ತಾಲೂಕಾ ಗಾಣಿಗ ಸೇವಾ ಸಂಘ- ಸಹಾಯ ಹಸ್ತ

ಭಟ್ಕಳ ;ಜಗತ್ತಿನಾದ್ಯಂತ ಕೋರೋನಾ ಮಹಾಮಾರಿಯಿಂದ ಬಹಳಷ್ಟು ಜನರು ತೊಂದರೆಗಿಡಾಗಿದ್ದಾರೆ. ಅದರಂತೆ ಭಟ್ಕಳ ತಾಲೂಕಿನಲ್ಲಿಯ ಗಾಣಿಗ ಸಮಾಜದ ಹಲವು ಕುಟುಂಬದವರು ಬಾದಿತರಾಗಿದ್ದಾರೆ. ದಿನ ನಿತ್ಯ ಕೆಲಸ ಕಾರ್ಯದಿಂದ ಕುಟುಂಬದ ನಿರ್ವಹಣೆ ಮಾಡುತ್ತಿರುವ ಕುಟುಂಬದ ಸದಸ್ಯನಿಗೆ ಕೆಲಸವಿಲ್ಲದೆ ತೊಂದರೆ ಅಗಿದೆ. ಆದ್ದರಿಂದ ಅತಂಹ ಅನಾನೂಕೂಲ ವಿರುವ ಕುಟುಂಬಕ್ಕೆ ಸ್ವಲ್ಪ ಮಟ್ಟಿಗಾದರೂ ಆತ್ಮ ಸ್ಥೈರ್ಯ ನೀಡುವ ನಿಟ್ಟಿನಲ್ಲಿ ಅಗತ್ಯವುಳ್ಳ ದಿನಸಿ ಸಾಮಗ್ರಿಗಳ ಕಿಟ್‌ನ್ನು ಸಮಾಜವತಿಯಿಂದ ನೀಡಿರುತ್ತಾರೆ. ಅರ್ಬನ ಬ್ಯಾಂಕಿನ ಜನರಲ್ ಮ್ಯಾನೇಜರ್ ಸುಭಾಷ್ ಶೆಟ್ಟಿ,ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ರಾದ ನಾರಾಯಣ ಶೆಟ್ಟಿ , ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಶಂಕರ ಶೆಟ್ಟಿ ನಿವೃತ್ತ ಅಧಿಕಾರಿ ಎ.ಎನ್ ಶೆಟ್ಟಿ ನಿವೃತ್ತ ಶಿಕ್ಷಕ ಗೋವಿಂದ ಶೆಟ್ಟಿ. ನಾಗೇಶ ಶೆಟ್ಟಿ ತೆರ್ನಮಕ್ಕಿ. ಸಂಘದ ಅಧ್ಯಕ್ಷರಾದ ಶ್ರೀಧರ ಶೆಟ್ಟಿ. ಉಪಾಧ್ಯಕ್ಷರಾದ ಎಂ ಅರ್ ಮುರ್ಡೇಶ್ವರ. ಗಿರೀಶ ಶೆಟ್ಟಿ ಮಾವಿನಕಟ್ಟೆ ಕಿರಣ ಶೆಟ್ಟಿ ಮುರ್ಡೇಶ್ವರ ಈ ಮಾನವೀಯ ಕಾರ್ಯದಲ್ಲಿ ನಮಗೆ ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡಿರುತ್ತಾರೆ. ನಮ್ಮ ಮನವಿಗೆ ಸ್ಪಂದಿಸಿ ಈ ಮಾನವೀಯ ಕಾರ್ಯಕ್ಕೆ ಹಲವಾರು ದಾನಿಗಳು ಕೈ ಜೋಡಿಸಿದ್ದಾರೆ ಅವರಿಗೆ ಸಂಘದ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಹಾಗೂ ಈ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಅವಿರತವಾಗಿ ಶ್ರಮಿಸಿದ ಉಪಾಧ್ಯಕ್ಷರಾದ ಗಜಾನನ ಶೆಟ್ಟಿ ಮತ್ತು ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ, ವಿಜೇತ ಶೆಟ್ಟಿ ಹೆರ್ತಾರ ಇವರ ಕಾರ್ಯವನ್ನು ತುಂಬು ಹೃದಯದಿಂದ ಸ್ಮರಿಸುತೇವೆ ಎಂದು ಗಾಣಿಗ ಸೇವಾ ಸಂಘದ ಕಾರ್ಯದರ್ಶಿ ರಾಜೇಶ ಶೆಟ್ಟಿ ಹೇಳಿದ್ದಾರೆ.

error: