April 27, 2024

Bhavana Tv

Its Your Channel

ಪೊಲೀಸ್ ವಾಹನ ಬಳಸಿಕೊಂಡು ಜಿಲ್ಲೆಗೆ ಎಂಟ್ರಿ

ಗೋಕರ್ಣ: ಪೊಲೀಸ್ ವಾಹನ ಬಳಸಿಕೊಂಡು ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದವರು ಗೋಕರ್ಣ ‘ಟಾಸ್ಕ್ ಫೋರ್ಸ್’ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮೂವರು, ಹುಬ್ಬಳ್ಳಿಗೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ವಾಪಸ್ ಬರಲಾಗದೆ ದಾರಿ ಹುಡುಕುತ್ತಿದ್ದವರು ‘ಚಾಣಕ್ಯ’ನಂತೆ ಆಲೋಚನೆ ಮಾಡಿ ಗೋಕರ್ಣಕ್ಕೆ ಬಂದಿದ್ದಾರೆ.

ಆದರೆ, ದುರದೃಷ್ಟವಶಾತ್, ಕೊರೋನಾ ತಡೆಗಾಗಿ ಗೋಕರ್ಣದಲ್ಲಿ ರಚಿಸಲಾಗಿರುವ ಪಂಚಾಯತಿ ಅಧ್ಯಕ್ಷ, ಮಾಜಿ ಅಧ್ಯಕ್ಷ, ನೋಡಲ್ ಅಧಿಕಾರಿ, ಪೊಲೀಸರ ‘ಟಾಸ್ಕ್ ಫೋರ್ಸ್’ ಸಂಶಯದಿಂದ ನಾಲ್ವರನ್ನು ಹಿತ್ತಲಮಕ್ಕಿ ಚೆಕ್ ಪೋಸ್ಟ್ ನಲ್ಲಿ ತಡೆದು ಪ್ರಶ್ನಿಸಿದಾಗ ಗಮನಾರ್ಹ ವಿಚಾರವೊಂದು ಬೆಳಕಿಗೆ ಬಂದಿದೆ.

ಪೊಲೀಸರ ಜೀಪ್ ಬಳಕೆ: ಹುಬ್ಬಳ್ಳಿಯಲ್ಲಿ ಪೊಲೀಸ್ ಅಧಿಕಾರಿಗೆ ಹಣ ನೀಡಿರುವ ಮೂವರು, ಪೊಲೀಸ್ ಪೇದೆಯನ್ನೇ ಚಾಲಕನನ್ನಾಗಿಸಿಕೊಂಡು ಜಿಲ್ಲೆಯನ್ನು ಪ್ರವೇಶಿಸಿದ್ದಾರೆ. ಜಿಲ್ಲೆಯ ಗಡಿ ಚೆಕ್ ಪೋಸ್ಟ್ ಗಳಲ್ಲೆಲ್ಲ ತಪಾಸಣೆ ಮಾಡಿದ ಪೊಲೀಸ್ ಸಿಬ್ಬಂದಿ, ಪೊಲೀಸ್ ವಾಹನದಲ್ಲಿದ್ದವರೆಲ್ಲ ಪೊಲೀಸರೇ ಎಂದು ಬಿಟ್ಟು ಕಳುಹಿಸಿದ್ದಾರೆ. ಆದರೆ, ಗೋಕರ್ಣದಲ್ಲಿ ಟಾಸ್ಕ್ ಫೋರ್ಸ್ ಕೈಗೆ ಸಿಕ್ಕಿ ಬಿದ್ದ ಇವರು, ತಮ್ಮ ಬಗ್ಗೆ ಮಾಹಿತಿ ನೀಡಲು ತಡಬಡಾಯಿಸಿ ಕೊನೆಗೂ ನಿಜ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

ಪೊಲೀಸ್ ವಾಹನದಲ್ಲಿ ಬಂದ ನಾಲ್ವರಿಗೂ
ಗೋಕರ್ಣದಲ್ಲಿ ಹಿತ್ಲಮಕ್ಕಿಯಲ್ಲಿ ಪಂಚಾಯತಿ ಅಧ್ಯಕ್ಷೆ ಸುಮಿತ್ರಾ ಗೌಡ, ಸದಸ್ಯ ಮಂಜುನಾಥ ನಾಯಕ, ಇಬ್ಬರು ನೋಡಲ್ ಅಧಿಕಾರಿಗಳು ಹಾಗೂ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಲ್ವರನ್ನೂ ಜೀಪಿನ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ

error: