September 15, 2024

Bhavana Tv

Its Your Channel

ಕುಡಿಯುವ ನೀರು ಉಪ್ಪು, ೧೦-೧೨ ವರ್ಷ ಕಳೆದರು ಸಮಸ್ಯೆಗೆ ಇಲ್ಲ ಪರಿಹಾರ

ಭಟ್ಕಳ: ದೇವರು ಕೊಟ್ಟರು ಪೂಜಾರಿ ಕೊಡುವುದಿಲ್ಲ ಎಂಬAತೆ ಸರಕಾರದ ಕುಡಿಯುವ ನೀರಿಗಾಗಿ ಸಾಕಷ್ಟು ಸೌಲತ್ತು ಒದಗಿಸಿದ್ದು ಆದರೆ ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಜನರು ಮೂಲಭೂತ ಸೌಕರ್ಯದಲ್ಲಿ ಒಂದಾದ ಕುಡಿಯುವ ನೀರು ಉಪ್ಪು ನೀರಾಗಿ ಕಲುಷಿತಗೊಂಡಿದ್ದು ೧೦-೧೨ ವರ್ಷದ ಸಮಸ್ಯೆಗೆ ಇನ್ನು ತನಕ ಪರಿಹಾರ ಸಿಗದೇ ಇರುವ ಸ್ಥಿತಿ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಜಾಲಿಕೋಡಿಯ ೧೫೦ಕ್ಕೂ ಅಧಿಕ ಮನೆಗಳ ನಿವಾಸಿಗರು ಅನುಭವಿಸುವಂತಾಗಿದೆ.

ಈ ವ್ಯಾಪ್ತಿಯಲ್ಲಿ ಸಮುದ್ರದ ಉಪ್ಪು ನೀರು ಊರಿನಲ್ಲಿನ ನದಿ, ಹೊಳೆಗೆ ಸೇರುತ್ತಿದ್ದು, ಈ ಬಗ್ಗೆ ಸತತ ೧೦ ವರ್ಷದ ಮನವಿ, ಬೇಡಿಕೆಯನ್ನು ಶಾಸಕರಿಂದ ಹಿಡಿದು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸದಸ್ಯರ ಗಮನಕ್ಕೆ ತಂದಿದ್ದರು ಸಹ ಯಾರಿಂದಲೂ ಇದಕ್ಕೊಂದು ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಕೊರೋನಾ ವೇಳೆಯಲ್ಲಿ ಜನರು ಆಹಾರ, ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲು ಪರಿತಪಿಸುತ್ತಿದ್ದರೆ ಇಲ್ಲಿನ ಜನರು ಮನೆಯ ಬಾವಿಯ ನೀರಿಗೆ ಉಪ್ಪು ನೀರು ಸೇರಿ ಕುಡಿಯಲು ಯೋಗ್ಯವಲ್ಲದ ನೀರನ್ನು ಕುಡಿಯುವ ಸ್ಥಿತಿಗೆ ತಲುಪಿದ್ದಾರೆ.

ಜಾಲಿ ಪಟ್ಟಣ ಪಂಚಾಯತ ವ್ಯಾಪ್ತಿಯ ಸರಿ ಸುಮಾರು ೧೫೦ಕ್ಕೂ ಅಧಿಕ ಮನೆಗಳ ಬಾವಿಗೆ ಸಮುದ್ರದ ಉಪ್ಪು ನೀರು ಸೇರಿ ಬಾವಿಯ ನೀರು ಕುಡಿಯಲು ಯೋಗ್ಯವಾಗದ ರೀತಿಯಲ್ಲಿ ಪರಿವರ್ತನೆ ಆಗಿದ್ದು, ಕಲುಷಿತಗೊಂಡಿದೆ. ಈ ಗ್ರಾಮ ಸಮುದ್ರ ಪಕ್ಕದಲ್ಲೇ ಇರುವುದರಿಂದ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಈ ವ್ಯಾಪ್ತಿಯಲ್ಲಿ ಸಮುದ್ರದ ನೀರು ನದಿಗೆ ಸೇರದಂತೆ ಕಾಮಗಾರಿ ಮಾಡಿಸಿಕೊಂಡುದಾಗಿ ಭರವಸೆ ನೀಡಿ ಸ್ಥಳ ಪರಿಶೀಲನೆ ಮಾಡಿದ ನಂತರ ಅಲ್ಲಿಂದ ಇಲ್ಲಿಯ ತನಕ ಜನಪ್ರತಿನಿಧಿಗಳು ಪತ್ತೆಯೇ ಇಲ್ಲವಾಗಿದ್ದಾರೆ ಎಂಬ ನೇರ ಆರೋಪ ಸ್ಥಳಿಯರದ್ದಾಗಿದೆ. ಇನ್ನು ಜಾಲಿ ಪಟ್ಟಣ ಪಂಚಾಯತನಿAದ ಸರಬರಾಜಾಗುವ ನೀರು ಮನೆಯಲ್ಲಿ ಹೆಚ್ಚಿನ ಬಳಕೆಗೆ ಸಾಲುತ್ತಿಲ್ಲ. ಅದು ಸಹ ಸಮಯಕ್ಕೆ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ ಎಂಬ ಆರೋಪ ಇಲ್ಲಿನ ನಿವಾಸಿಗರದ್ದಾಗಿದೆ. ಈ ರೀತಿ ವಿಳಂಬವಾಗಿ ನೀರು ಸಿಕಿದರು ಪರವಾನಿಲ್ಲ ಮನೆಯ ನೀರನ್ನಾದರು ಬಳಸಬಹುದಾಗಿದ್ದು ಆದರೆ ಸದ್ಯ ಮನೆಯ ಬಾವಿಯ ನೀರು ಸಹ ಕಲುಷಿತವಾಗಿದೆ.

ರೋಗ ರುಜನನಿಗೆ ತಾಣ:
ಕಲುಷಿತಗೊಂಡ ನೀರನ್ನು ನೇರವಾಗಿ ಕುಡಿಯಲು ಸಾಧ್ಯವಿಲ್ಲವಾಗಿದ್ದು, ಪ್ರತಿ ಸಲವೂ ಬಿಸಿ ಮಾಡಿಯೇ ಕುಡಿಯುವ ಸ್ಥಿತಿ ಇಲ್ಲಿನ ಜನರದ್ದಾಗಿದೆ. ಅದೆಷ್ಟರ ಮಟ್ಟಿಗೆ ಈ ನೀರು ಬಿಸಿ ಮಾಡಿದರೆ ಕುಡಿಯಲು ಸೂಕ್ತ ಎಂಬುದು ಗೊತ್ತಿಲ್ಲವಾಗಿದ್ದು, ಮನೆಯಲ್ಲಿ ದಿನ ಬಳಕೆಗೂ ಸಹ ಬಳಸಲಾಗುತ್ತಿದ್ದು, ಈ ಉಪ್ಪು ನೀರಿನಿಂದ ಬಟ್ಟೆ, ಪಾತ್ರೆಗಳೆಲ್ಲಯೂ ಹಾನಿಯಾಗುವ ಭೀತಿಯಲ್ಲಿದೆ. ಹೆಚ್ಚಾಗಿ ಎಲ್ಲಾ ಮಧ್ಯಮ ವರ್ಷದ ಜನರೇ ಇಲ್ಲಿನ ಜೀವನ ನಡೆಸುತ್ತಿದ್ದು, ಈ ಕೋರೋನಾ ಮಹಾಮಾರಿಯೊಂದಿಗೆ ಇಲ್ಲಿನ ಜನರು ಈ ಸಮುದ್ರದ ಉಪ್ಪು ನೀರು ಕುಡಿಯುವಂತಾಗಿದೆ. ಮನೆಯಲ್ಲಿನ ವಯೋವೃದ್ಧರು, ಚಿಕ್ಕ ಮಕ್ಕಳಿಗೆ ಆರೋಗ್ಯದಲ್ಲಿ ಏನಾದರು ಏರುಪೇರಾದಲ್ಲಿ ಯಾರು ಹೊಣೆ ಎಂಬ ಪ್ರಶ್ನೆ ಜನರದ್ದಾಗಿದೆ.
ಈ ಸಂದರ್ಭದಲ್ಲಿ ಸ್ಥಳಿಯ ನಿವಾಸಿ ಮಾರುತಿ ನಾಯ್ಕ ಮಾತನಾಡಿ ಕೋರೊನಾದಿಂದ ಜನರಿಗೆ ಆಹಾರ, ಅಗತ್ಯ ವಸ್ತು ಸಿಗದಿದ್ದರೆ ನಮ್ಮ ಗ್ರಾಮಕ್ಕೆ ಮೂಲಭೂತವಾಗಿ ಸಿಗಬೇಕಾದ ಕುಡಿಯುವ ನೀರೇ ಇಲ್ಲವಾಗಿದೆ. ಸತತವಾಗಿ ಜನಪ್ರತಿನಿಧಿಗಳನ್ನು ಗೆಲ್ಲಿಸಿದ್ದು ಬಿಟ್ಟರೆ ಜನರಿಗಾಗಿ ಯಾರು ಸಹ ಯಾವುದೇ ಸೇವೆ ಮಾತ್ರ ಮಾಡಿಲ್ಲ. ಇಲ್ಲಿನ ಜನರ ಸಮಸ್ಯೆಗೆ ಸ್ಪಂದಿಸುವ ಜನಪ್ರತಿನಿಧಿಗಳು ಯಾರಿಲ್ಲವಾಗಿದ್ದಾರೆ. ಎಂದರು.
ಸ್ಥಳಿಯ ಮಹಿಳೆ ವನಿತಾ ನಾಯ್ಕ ಮಾತನಾಡಿ ಕುಡಿಯಲು ಸೂಕ್ತ ನೀರಿಲ್ಲದೇ ಜನರು ಬೇರೆ ಕಡೆಯಿಂದ ನೀರು ಹೊತು ತರುವ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ದೂರದ ಕಡೆಯಿಂದ ಕುಡಿಯಲು ನೀರನ್ನು ತರಲು ಮಹಿಳೆಯರು ತರಬೇಕಾಗಿದ್ದು, ಈ ಪರಿಸ್ಥಿತಿಯಿಂದ ನಮ್ಮನ್ನು ನಾವು ಗೆಲ್ಲಿಸಿದ ಜನಪ್ರತಿನಿಧಿಗಳು ಪಾರು ಮಾಡಬೇಕಿದ್ದು ಯಾಕಿದ ಮತಕ್ಕೆ ಸೇವೆ ಮಾಡಿ ಎಂದರು.

error: