December 4, 2023

Bhavana Tv

Its Your Channel

ಪ್ರಪಂಚವೇ ಕೊರೋನಾ ಮಹಾಮಾರಿಯಿಂದ ತತ್ತರಿಸುತ್ತಿರುವಾಗ ನಮ್ಮ ಕುಮಟಾ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಗೋಡೆ ನಿರ್ಮಿಸಿದ್ದಾರೆ ಪಿ. ಎಸ್. ಐ ಆನಂದ್ ಮೂರ್ತಿ

ಲಾಕ್ ಡೌನ್ ಇದ್ದರು ಕ್ಯಾರೇ ಅನ್ನದ ಕುಮಟಾ ಜನತೆಗೆ ಕೊರೋನಾ ಮಹಾಮಾರಿ ಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿದರೂ… ಜಗತ್ತಿನಾದ್ಯಂತ ಕೋವಿಡ್-೧೯ ಮಹಾ ಮಾರಿ ಜನತೆಯನ್ನು ತಲ್ಲಣಗೊಳಿಸಿ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ. ದೇಶ ರಾಜ್ಯ ಜಿಲ್ಲೆಗೂ ಕಿಲ್ಲರ್ ಕೊರೋನಾ ಕದಂಬಬಾಹು ಚಾಚಿದೆ. ಇಂತಹ ಸಂಧಿಗ್ದ ಸ್ಥಿತಿಯಲ್ಲಿ ಕುಮಟಾ ಪಿ.ಎಸ್.ಐ ಆನಂದ್ ಮೂರ್ತಿಯವರು ಹಗಲಿರುಳು ಶ್ರಮಿಸುತ್ತಾ ತಮ್ಮ ಜೋತೆ ಕೆಲಸ ನಿರ್ವಹಿಸುವ ಪ್ರತಿಯೊಬ್ಬರನ್ನೂ ಹುರಿದುಂಬಿಸಿ ಕೊರೋನಾ ತಡೆಗೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ.

ಜನತೆಯ ಹಿತಕ್ಕಾಗಿ ಶ್ರಮಿಸುತ್ತಿರುವ ಅವರು ಇನ್ನಷ್ಟು ವರ್ಷಗಳ ಕಾಲ ಕುಮಟಾದಲ್ಲೇ ಉಳಿದು ಹೆಸರುಗಳಿಸುವಂತಾಗಲಿ ಎಂಬುದು ಕುಮಟಾ ಜನತೆಯ ಆಶಯವಾಗಿದೆ.

ವರದಿ ; ನಟರಾಜ್ ಗದ್ದೆಮನೆ

error: