December 6, 2024

Bhavana Tv

Its Your Channel

ಪರಿಷಿಷ್ಟ ಜಾತಿ, ಪಂಗಡ ದವರಿಗೆ ದಿನಸಿ ವಿತರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ ; ಲಾಕ್ ಡೌನ್ ಪ್ರಾರಂಭವಾದಾಗಿನಿOದ ಕ್ಷೇತ್ರದ ಬಹುತೇಕ ಬಡವರ ಹಿಂದುಳಿದವರ ಕಷ್ಟಕ್ಕೆ ತನ್ನ ಕೈಲಾದ ಮಟ್ಟಿಗೆ ಶಾಸಕ ದಿನಕರ ಶೆಟ್ಟಿ ನೆರವಾಗುತ್ತ ಬಂದಿದ್ದಾರೆ

ಬಡವರಿಗೆ ಹಿಂದುಳಿದವರಿಗೆ ತರಕಾರಿ, ದಿನಸಿ ವಿತರಿಸುತ್ತ ಬಂದಿರುವ ಶಾಸಕರು ಇಂದು ಹೊಸ ಹೆರವಟ್ಟಾ, ವಿವೇಕ ನಗರ, ಮಣಕಿ ಭಾಗದ ಪರಿಷಿಷ್ಟ ಜಾತಿ, ಪಂಗಡ ದ ಸುಮಾರು ೧೨೫ ಕುಟುಂಬಗಳಿಗೆ ದಿನಸಿ ವಿತರಿಸಿದರು. ರವೆ, ಅವಲಕ್ಕಿ, ಎಣ್ಣೆ, ಸಕ್ಕರೆ, ಚಾಪುಡಿ, ಬೇಳೆ, ಗೋದಿಹಿಟ್ಟನ್ನು ಒಳಗೊಂಡ ಕಿಟ್ ವಿತರಣೆ ಮಾಡಿದರು..
ಈ ಸಂಧರ್ಭದಲ್ಲಿ ಕುಮಟಾ ಮಂಡಳ ಅಧ್ಯಕ್ಷ ಹೇಮಂತ ಗಾಂವಕರ್, ಪ್ರಶಾಂತ ಶೇಟ್, ಮಂಜು ಮುಕ್ರಿ , ವಿನಾಯಕ ನಾಯ್ಕ, ಪುರಸಭಾ ಸದಸ್ಯೆ ಗೀತಾ ಮುಕ್ರಿ, ಗೌರಿ ವೈದ್ಯ, ಕುಮಾರ ಕೌರಿ, ಮೋಹಿನಿ ಗೌಡ, ವಿಶ್ವನಾಥ ನಾಯ್ಕ, ತಿಮ್ಮಪ್ಪ ಮುಕ್ರಿ ಇದ್ದರು.

error: