
ಭಟ್ಕಳ : ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಸಿಂಡಿಕೇಟ್ ಸದಸ್ಯರಾಗಿ ಅಂಜುಮನ್ ಪದವಿ ಕಾಲೇಜು ಮತ್ತು ಪಿಜಿ ಸೆ0ಟರ್‌ನ ಪ್ರಾಂಶುಪಾಲ ಎಂ.ಕೆ.ಶೇಖ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನ ಗೊ0ಡ ಅಂಜುಮನ್ ಪದವಿ ಕಾಲೇಜು ಮತ್ತು ಪಿಜಿ ಸೆ0ಟರ್‌ನ ಪ್ರಾಂಶುಪಾಲ ಎಂ.ಕೆ.ಶೇಖ್ ಅವರಿಗೆ ಅಂಜುಮನ್ ಹಾಮಿ ಎ-ಮುಸ್ಲಿಮೀನ್ ಅಭಿನಂದಿಸಿದೆ.
ಪ್ರೊಫೆಸರ್ ಎಂ.ಕೆ.ಶೇಖ್ ಅವರನ್ನು ವಿಶ್ವವಿದ್ಯಾನಿಲಯ ಕಾಯ್ದೆ 2000 ಸೆಕ್ಷನ್ 30 (1) ಅಡಿಯಲ್ಲಿ ಮತ್ತು ಕುಲಪತಿಗಳ ಆದೇಶದಂತೆ ನಾಮನಿರ್ದೇಶನ ಮಾಡಲಾಗಿದೆ. ಸಿಂಡಿಕೇಟ್ ಸದಸ್ಯರಾಗಿ ಪ್ರಾಂಶುಪಾಲ ಎಂ.ಕೆ.ಶೇಖ್ ಅವರು ಮುಂದಿನ ಎರಡು ವರ್ಷಗಳ ಕಾಲ ಧಾರವಾಡ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸೇವೆ ಸಲ್ಲಿಸಲಿದ್ದಾರೆ. ಸಾಮಾನ್ಯವಾಗಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್, ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಎಲ್ಲಾ ಕಾಲೇಜುಗಳ ಪಠ್ಯಕ್ರಮ, ಪರೀಕ್ಷೆಗಳು ಮತ್ತು ಎಲ್ಲಾ ಇತರ ಆಡಳಿತಾತ್ಮಕ ವಿಷಯಗಳನ್ನು ನಿರ್ಧರಿಸುತ್ತದೆ.
ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊ0ಡ ಪ್ರಾಚಾರ್ಯ ಎಂ.ಕೆ.ಶೇಖ್ ಅವರಿಗೆ ಅಂಜುಮನ್ ಹಮೀ ಎ-ಮುಸ್ಲಿಮೀನ್ ಅಧ್ಯಕ್ಷ ಮುರಮ್ಮಿಲ್ ಕಾಜಿಯಾ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯಿಲ್ ಹಾಗೂ ಎಲ್ಲಾ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ